
ಪಂಢರಪುರ – ಇಲ್ಲಿನ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ವಿಗ್ರಹಗಳಿಗೆ ಮತ್ತೊಮ್ಮೆ ವಜ್ರಲೇಪನ ಮಾಡಲಾಗುವುದು ಮತ್ತು ಇದಕ್ಕೆ ಕಾನೂನು ಮತ್ತು ನ್ಯಾಯ ಇಲಾಖೆಯು ಅನುಮತಿ ನೀಡಿದೆ. ಈ ಕುರಿತು ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸಮಿತಿಯ ಸಭೆಯಲ್ಲಿ ವಜ್ರಲೇಪನ ಮಾಡುವ ದಿನಾಂಕವನ್ನು ನಿರ್ಧರಿಸಲಾಗುವುದು.
ಈ ವಿಷಯದ ಬಗ್ಗೆ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಶೆಳ್ಕೆ ಮಾತನಾಡಿ, “ವಿಗ್ರಹಗಳ ಪಾದಗಳ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಸವೆತ ಉಂಟಾಗಿದೆ. ಆದ್ದರಿಂದ ವಿಗ್ರಹಗಳನ್ನು ಸಂರಕ್ಷಿಸಲು ಈ ಪ್ರಕ್ರಿಯೆಯನ್ನು ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಯ ಅನುಮತಿ ಪಡೆದು ಪ್ರಸ್ತಾವನೆಯನ್ನು ಕಾನೂನು ಮತ್ತು ನ್ಯಾಯ ಇಲಾಖೆಯ ಅನುಮೋದನೆಗೆ ಕಳುಹಿಸಲಾಗಿತ್ತು. ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಈ ವಜ್ರಲೇಪನ ಮಾಡಲಾಗುವುದು” ಎಂದು ತಿಳಿಸಿದರು.
2020 ರಲ್ಲಿ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ವಿಗ್ರಹಗಳ ಮೇಲಿನ ವಜ್ರಲೇಪನವು ಅಲ್ಪಕಾಲದಲ್ಲೇ ಕಿತ್ತುಬಂದಿತ್ತು!
23 ಮತ್ತು 24 ಜುಲೈ 2020 ರ ಅವಧಿಯಲ್ಲಿ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ವಿಗ್ರಹಗಳ ಚರಣಗಳಿಗೆ ‘ಸಿಲಿಕಾನ್’ ಲೇಪನವನ್ನು ಮಾಡಲಾಗಿತ್ತು; ಆದರೆ ಅದು ಅಲ್ಪ ಕಾಲದಲ್ಲೇ ಕಿತ್ತುಬರಲು ಆರಂಭವಾಯಿತು. ಇಲ್ಲಿಯವರೆಗೆ ಪುರಾತತ್ವ ಇಲಾಖೆಯಿಂದ ಎರಡೂ ವಿಗ್ರಹಗಳ ಮೇಲೆ 4 ಬಾರಿ ವಿವಿಧ ರೀತಿಯ ರಾಸಾಯನಿಕ ಲೇಪನಗಳನ್ನು ಮಾಡಲಾಗಿದೆ. ಪ್ರತಿ ಬಾರಿಯೂ ‘ಮತ್ತೆ ವಜ್ರಲೇಪನ ಮಾಡುವ ಅಗತ್ಯವಿರುವುದಿಲ್ಲ’ ಎಂದು ಹೇಳಲಾಗುತ್ತದೆ; ಆದರೆ ಅದರ ವೈಫಲ್ಯವು ಪದೇ ಪದೇ ಮುನ್ನೆಲೆಗೆ ಬರುತ್ತಿದ್ದು, ಒಂದು ನಿರ್ದಿಷ್ಟ ಅವಧಿಯ ನಂತರ ಅದನ್ನು ಮತ್ತೆ ಮಾಡಲಾಗುತ್ತಿದೆ!
ಸಂಪಾದಕೀಯ ನಿಲುವು
|
ಇದನ್ನೂ ಓದಿ – ಶ್ರೀ ವಿಠ್ಠಲ ಮತ್ತು ರುಕ್ಮಿಣಿಯ ವಿಗ್ರಹಗಳ ಮೇಲಿನ ವಜ್ರಲೇಪವು ಸ್ವಲ್ಪ ಸಮಯದೊಳಗೆ ಹೊರಬರಲು ಪ್ರಾರಂಭಿಸುತ್ತದೆ! –
https://sanatanprabhat.org/marathi/570206.html |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!