ವೆನೆಜುವೆಲಾ: ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ (ಅಮೆರಿಕ) – ವೆನೆಜುವೆಲಾದ ಹಿತದೃಷ್ಟಿಯಿಂದ ಅಮೆರಿಕ ಹೇಳಿದಂತೆ ನಡೆದುಕೊಳ್ಳದಿದ್ದರೆ, ನಿಮ್ಮ ಸ್ಥಿತಿ ಮಡುರೊಗಿಂತಲೂ ಕೆಟ್ಟದಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೆಲ್ಸಿ ರೊಡ್ರಿಗಸ್ ಅವರಿಗೆ ಬೆದರಿಕೆ ಹಾಕಿದ್ದಾರೆ. ‘ದಿ ಅಟ್ಲಾಂಟಿಕ್’ ಮಾಸಿಕಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ರೊಡ್ರಿಗಸ್ ಅವರು ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಅಮೆರಿಕದ ಕ್ರಮವನ್ನು ಟೀಕಿಸಿದ್ದಾರೆ. ಅಲ್ಲದೆ ಮಡುರೊ ಅವರನ್ನು ಮರಳಿ ಕಳುಹಿಸಿಕೊಡಬೇಕೆಂದು ಅಮೆರಿಕಕ್ಕೆ ಆಗ್ರಹಿಸಿದ್ದಾರೆ.
💥 US Threat Diplomacy on Display 💥
“If you don’t listen to America, your situation will be worse than Maduro’s!”
🇺🇸 Donald Trump openly threatens 🇻🇪 Venezuela’s interim President Delcy Rodríguez
⚠️ Regime-change threats
🌍 Bullying sovereign nations
❓ Is this global… https://t.co/ZBd9vgGuCu pic.twitter.com/FLgfmzyokZ
— Sanatan Prabhat (@SanatanPrabhat) January 5, 2026
೧. ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರು ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ರೊಡ್ರಿಗಸ್ ಅವರೊಂದಿಗೆ ಮಾತನಾಡಿದ್ದರು. ವೆನೆಜುವೆಲಾದ ಜನರ ಜೀವನಮಟ್ಟವನ್ನು ಸುಧಾರಿಸಲು ಅಮೆರಿಕದ ನಿರೀಕ್ಷೆಯಂತೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ರೊಡ್ರಿಗಸ್ ಹೇಳಿದ್ದರು. ಒಂದು ವೇಳೆ ರೊಡ್ರಿಗಸ್ ಅಮೆರಿಕದ ಮಾತು ಕೇಳಿದರೆ, ಅಲ್ಲಿ ಅಮೆರಿಕದ ಸೈನ್ಯವನ್ನು ನಿಯೋಜಿಸುವ ಅವಶ್ಯಕತೆ ಇರುವುದಿಲ್ಲ ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.
೨. ವೆನೆಜುವೆಲಾದ ಸರ್ವೋಚ್ಚ ನ್ಯಾಯಾಲಯ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮಾಡುವಂತೆ ಆದೇಶಿಸಿದೆ. ಸರ್ವೋಚ್ಚ ನ್ಯಾಯಾಲಯವು ಡೆಲ್ಸಿ ರೊಡ್ರಿಗಸ್ ಅವರಿಗೆ ತಕ್ಷಣವೇ ಅಧ್ಯಕ್ಷರ ಎಲ್ಲಾ ಅಧಿಕಾರಗಳೊಂದಿಗೆ ಮಧ್ಯಂತರ ರೂಪದಲ್ಲಿ ಕಾರ್ಯಭಾರ ವಹಿಸಿಕೊಳ್ಳುವಂತೆ ಸೂಚಿಸಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !