‘ಪನೂನ್ ಕಾಶ್ಮೀರ್’ ವತಿಯಿಂದ ರಾಷ್ಟ್ರೀಯ ಆನ್‌ಲೈನ್ ಸಂವಾದ!

ನವದೆಹಲಿ: ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಶ್ರಮಿಸುತ್ತಿರುವ ‘ಪನೂನ್ ಕಾಶ್ಮೀರ್’ (ನಮ್ಮ ಕಾಶ್ಮೀರ) ಸಂಘಟನೆಯು ಇತ್ತೀಚೆಗೆ ರಾಷ್ಟ್ರೀಯ ಆನ್‌ಲೈನ್ ಸಂವಾದವನ್ನು (ವೆಬಿನಾರ್) ಆಯೋಜಿಸಿತ್ತು. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸ್ಥಳಾಂತರಿತ ಕಾಶ್ಮೀರಿ ಹಿಂದೂಗಳ ಪ್ರಮುಖ ನಾಯಕರು ಈ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಮ್ಮು-ಕಾಶ್ಮೀರ, ದೆಹಲಿ, ನೋಯ್ಡಾ, ಫರಿದಾಬಾದ್, ಗುರುಗ್ರಾಮ್, ಮುಂಬಯಿ ಸೇರಿದಂತೆ ಹಲವು ಕಡೆಗಳಿಂದ ಕಾಶ್ಮೀರಿ ನಾಯಕರು ಪಾಲ್ಗೊಂಡಿದ್ದರು. ಕಾಶ್ಮೀರಿ ಹಿಂದೂಗಳ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮತ್ತು ಕಣಿವೆ ರಾಜ್ಯದ ಮೂಲ ನಿವಾಸಿಗಳಾದ ಈ ಸಮುದಾಯವನ್ನು ಸಂಘಟಿತರಾಗಿಡಬೇಕೆಂಬ ಎರಡು ಮುಖ್ಯ ವಿಷಯಗಳ ಬಗ್ಗೆ ಸದಸ್ಯರು ಒಮ್ಮತ ಸೂಚಿಸಿದರು.
ಪಾಲ್ಗೊಂಡ ಕಾಶ್ಮೀರಿ ಹಿಂದೂ ನಾಯಕರು!
ಈ ಸಂವಾದದಲ್ಲಿ ಉತ್ಪಲ್ ಕೌಲ್, ವೀರೇಂದ್ರ ರೈನಾ, ಅನುಪಮ್ ಕೌಲ್, ಉಪಿಂದರ್ ಸ್ವರೂಪ್, ಉಪಿಂದರ್ ಕೌಲ್, ಕಮಲ್ ಬಾಗ್ತಿ, ವಿಜಯ್ ಹಂಡೂ, ರಾಜಿಂದರ್ ಕೌಲ್, ಪ್ರದೀಪ್ ಹಂಡೂ ಮತ್ತು ಆರ್.ಕೆ. ಧರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾಶ್ಮೀರಿ ಹಿಂದೂ ಆಗಿರುವ ಬಿಜೆಪಿ ಹಿರಿಯ ನಾಯಕ ಅಶ್ವಿನಿ ಕುಮಾರ್ ಚ್ರುಂಗೂ ಅವರು ವಿಶೇಷ ಅತಿಥಿ ಹಾಗೂ ವಕ್ತಾರರಾಗಿ ಭಾಗವಹಿಸಿದ್ದರು.
ಸಂವಾದದಲ್ಲಿ ತೆಗೆದುಕೊಂಡ ನಿರ್ಧಾರಗಳು!
೧. ಭಾರತ ಸರಕಾರ ಸ್ಥಳಾಂತರಿತ ಹಿಂದೂಗಳಿಗೆ ನೀಡಲಾಗುವ ಸಹಾಯಧನವನ್ನು ಹೆಚ್ಚಿಸುವ ಕುರಿತು ಸತತ ಪ್ರಯತ್ನ ನಡೆಸಲು ನಿರ್ಧರಿಸಲಾಯಿತು.
೨. ೨೦೨೬ರಲ್ಲಿ ಕಾಶ್ಮೀರಿ ಹಿಂದೂ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸರಕಾರದ ಪ್ರಮುಖ ಗುರಿಯಾಗಿರಬೇಕೆಂದು ಒತ್ತಾಯಿಸಲು ತೀರ್ಮಾನಿಸಲಾಯಿತು.
೩. ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುತ್ತಿದ್ದ ೩೭೦ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಆದಾಗ್ಯೂ, ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಕಾಶ್ಮೀರ ಕಣಿವೆಯಲ್ಲಿ ಇನ್ನು ಯಾವುದೇ ದೃಢವಾದ ಕ್ರಮಗಳನ್ನು ಕೈಗೊಂಡಿಲ್ಲ. ಕಾಶ್ಮೀರದಲ್ಲಿ ಜನಾಂಗೀಯ ಸಂಹಾರ ನಡೆಸಿದವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಡೆದ ಘಟನೆಯನ್ನು ಕಾಶ್ಮೀರಿ ಹಿಂದೂಗಳು ಎಂದಿಗೂ ಮರೆಯುವುದಿಲ್ಲ ಅಥವಾ ಕ್ಷಮಿಸುವುದಿಲ್ಲ. ಕಾಶ್ಮೀರದ ಹಿಂದೂ ಸಮುದಾಯದ ವಿರುದ್ಧ ನಡೆದ ಹತ್ಯಾಕಾಂಡದ ಕೃತ್ಯಗಳಿಗಾಗಿ ‘ವಿಶೇಷ ಅಪರಾಧ ನ್ಯಾಯಾಧಿಕರಣ’ವನ್ನು ಸ್ಥಾಪಿಸಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು. (ಈ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ನಿರಾಕರಿಸಿರುವುದರಿಂದ, ದೇಶದ ಹಿಂದೂಗಳು ಕಾಶ್ಮೀರಿ ಹಿಂದೂಗಳ ಜೊತೆ ಸೇರಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು! – ಸಂಪಾದಕರು)
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!