|

ಟೊರೊಂಟೊ (ಕೆನಡಾ) – ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳ ಮೂಲದ ಪಾದ್ರಿ ಜೇಮ್ಸ್ ಚೆರಿಕ್ಕಲ್‌ನನ್ನು ಕೆನಡಾದಲ್ಲಿ ಬಂಧಿಸಲಾಗಿದೆ. ಬಂಧನದ ಬೆನ್ನಲ್ಲೇ ಟೊರೊಂಟೊದ ಆರ್ಚ್‌ಡಯಸಿಸ್ ಸಂಸ್ಥೆಯು ಆತನನ್ನು ಹುದ್ದೆಯಿಂದ ವಜಾಗೊಳಿಸಿದೆ. ಚೆರಿಕ್ಕಲ್ ಬಂಧನದ ನಂತರ, ಸೇಂಟ್ ಜೆರೋಮ್ ಚರ್ಚ್ ಡಿಸೆಂಬರ್ 25 ರಿಂದ ಜನವರಿ 3 ರವರೆಗೆ ನಡೆಯಬೇಕಿದ್ದ ಎಲ್ಲಾ ಪ್ರಾರ್ಥನಾ ಸಭೆಗಳನ್ನು ರದ್ದುಗೊಳಿಸಿದೆ. (ಇಂತಹ ಕಾಮುಕ ಕ್ರೈಸ್ತ ಪಾದ್ರಿಗಳು ತಮ್ಮ ಕ್ರೈಸ್ತ ಬಾಂಧವರಿಗೆ ಧರ್ಮ ಮತ್ತು ನೈತಿಕತೆಯ ಬಗ್ಗೆ ಯಾವ ಪಾಠ ಕಲಿಸಲು ಸಾಧ್ಯ? – ಸಂಪಾದಕರು)
🚨 60-yr-old priest Fr James Cherickal, originally from Kerala, arrested in Canada for sexually assaulting minor girls.
He served the Roman Catholic Archdiocese of Toronto for ~30 years and was posted at St. Jerome’s Church last year.
Across the world, such crimes by priests… pic.twitter.com/F4c1P4rh2y
— Sanatan Prabhat (@SanatanPrabhat) December 31, 2025
1. 60 ವರ್ಷದ ಪಾದ್ರಿ ಜೇಮ್ಸ್ ಚೆರಿಕ್ಕಲ್ ಕಳೆದ 30 ವರ್ಷಗಳಿಂದ ಟೊರೊಂಟೊ ಆರ್ಚ್‌ಡಯಸಿಸ್ ಅಡಿಯಲ್ಲಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ. ಒಂದು ವರ್ಷದ ಹಿಂದೆಯಷ್ಟೇ ಆತನನ್ನು ಸೇಂಟ್ ಜೆರೋಮ್ ಚರ್ಚ್‌ಗೆ ನೇಮಿಸಲಾಗಿತ್ತು.
2. ಕೇರಳದಿಂದ ವಲಸೆ ಬಂದ ಕ್ಯಾಥೋಲಿಕ್ ಬಾಂಧವರಿಗಾಗಿ ಸ್ಥಾಪಿಸಲಾದ ಸಿರೋ-ಮಲಬಾರ್ ಚರ್ಚ್‌ನಲ್ಲಿಯೂ ಈತ ಸೇವೆ ಸಲ್ಲಿಸಿದ್ದಾನೆ.
3. ಕೆನಡಾಕ್ಕೆ ಹೋಗುವ ಮೊದಲು, ಜೇಮ್ಸ್ ಚೆರಿಕ್ಕಲ್ ಕೇರಳದ ತಾಮರಸ್ಸೇರಿ ಕ್ಯಾಥೋಲಿಕ್ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ.
ಸಂಪಾದಕೀಯ ನಿಲುವುಜಗತ್ತಿನಾದ್ಯಂತ ಪಾದ್ರಿಗಳ ಅನೈತಿಕ ಚಟುವಟಿಕೆಗಳು ಬೆಳಕಿಗೆ ಬರುತ್ತಿವೆ. ‘ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಜಗತ್ತಿನ ಬಹುತೇಕ ಪಾದ್ರಿಗಳು ಸಮಾಜಕ್ಕೆ ಅಪಾಯಕಾರಿ’ ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನಿದೆ? |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !