ಒಬ್ಬ ಆರೋಪಿಯ ಬಂಧನ!

ಮುಂಬಯಿ – ಇಲ್ಲಿನ 68 ವರ್ಷದ ಮಹಿಳೆಗೆ ‘ನಾನು ಮಾಜಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮಾತನಾಡುತ್ತಿದ್ದೇನೆ’ ಎಂದು ನಂಬಿಸಿ ಆಕೆಯಿಂದ 3 ಕೋಟಿ 71 ಲಕ್ಷ ರೂಪಾಯಿಗಳನ್ನು ದೋಚಲಾಗಿದೆ. ಆ ಮಹಿಳೆಗೆ ಆನ್‌ಲೈನ್ ಮೂಲಕ ನಕಲಿ ನ್ಯಾಯಾಲಯದ ವಿಚಾರಣೆಯನ್ನೂ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಮ್ ಬ್ರಾಂಚ್ ಪೊಲೀಸರು ಸೂರತ್‌ನಿಂದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಖಾತೆಗೆ 1 ಕೋಟಿ 71 ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗಿತ್ತು. ಬಟ್ಟೆಯ ನಕಲಿ ಸಂಸ್ಥೆಯ ಹೆಸರಿನಲ್ಲಿ ಈತ ಖಾತೆಯನ್ನು ತೆರೆದಿದ್ದನು. ಅದಕ್ಕೆ ಪ್ರತಿಯಾಗಿ ಈತನಿಗೆ 6 ಲಕ್ಷದ 40 ಸಾವಿರ ರೂಪಾಯಿಗಳ ಕಮಿಷನ್ ಸಿಕ್ಕಿತ್ತು. ಆರೋಪಿಯು ತನ್ನ ಹೆಸರನ್ನು ಎಸ್.ಕೆ. ಜೈಸ್ವಾಲ್ ಎಂದು ಹೇಳಿಕೊಂಡಿದ್ದನು. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದು, ಒಬ್ಬನು ವಿದೇಶದಲ್ಲಿದ್ದಾನೆ ಮತ್ತು ಇನ್ನೊಬ್ಬನು ಬೇರೆ ವ್ಯವಹಾರದಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಪೀಡಿತ ಮಹಿಳೆಯ ಬ್ಯಾಂಕ್ ಖಾತೆಯನ್ನು ‘ಮನಿ ಲಾಂಡ್ರಿಂಗ್’ (ಕಪ್ಪು ಹಣವನ್ನು ಬಿಳಿ ಮಾಡುವುದು) ಗಾಗಿ ಬಳಸಲಾಗುತ್ತಿದೆ ಎಂದು ಆರೋಪಿಗಳು ಬೆದರಿಸಿದ್ದರು. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆದರಿಸಿದ್ದರು. ಆರೋಪಿಯು ಮೊದಲು ಈ ಮಹಿಳೆಗೆ ಆಕೆಯ ಜೀವನದ ಕುರಿತು 2-3 ಪುಟಗಳ ಪ್ರಬಂಧ ಬರೆಯುವಂತೆ ಹೇಳಿದ್ದನು. ಕಾಲಾನಂತರದಲ್ಲಿ ತಾನು ವಂಚನೆಗೆ ಒಳಗಾಗಿರುವುದು ಮಹಿಳೆಗೆ ಅರಿವಾದಾಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಪಾದಕೀಯ ನಿಲುವುಮಾಜಿ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನೇ ಬಳಸಿ ವಂಚನೆ ಮಾಡಲಾಗುತ್ತಿದೆ ಎಂದರೆ, ಆರೋಪಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಭಯವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ! ಇಂತಹವರಿಗೆ ಕಠಿಣ ಶಿಕ್ಷೆಯಾಗದ ಹೊರತು ಇಂತಹ ಕೃತ್ಯಗಳಿಗೆ ತಡೆ ಬೀಳಲು ಸಾಧ್ಯವಿಲ್ಲ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!