
ಮುಂಬಯಿ – ‘ಪದ್ಮಶ್ರೀ’, ‘ಪದ್ಮಭೂಷಣ’, ‘ಪದ್ಮವಿಭೂಷಣ’ ಮತ್ತು ‘ಭಾರತರತ್ನ’ ಈ ನಾಗರಿಕ ಪ್ರಶಸ್ತಿಗಳು ಬಿರುದುಗಳಲ್ಲ, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಹೇಳಿದೆ. ಆದ್ದರಿಂದ ಅವುಗಳನ್ನು ಯಾವುದೇ ವ್ಯಕ್ತಿಯ ಹೆಸರಿನ ಮೊದಲು ಅಥವಾ ನಂತರ ಬಳಸಲು ಬರುವುದಿಲ್ಲ. ನ್ಯಾಯಾಲಯವು ಒಂದು ಅರ್ಜಿಯ ಮೊಕದ್ದಮೆಯ ಶೀರ್ಷಿಕೆಯಲ್ಲಿ ‘ಪದ್ಮಶ್ರೀ’ ಪದದ ಬಳಕೆಯ ಬಗ್ಗೆ ಈ ಅಭಿಪ್ರಾಯವನ್ನು ನೀಡಿದೆ. ನ್ಯಾಯಮೂರ್ತಿ ಸೋಮಶೇಖರ್ ಸುಂದರೇಸನ್ ಅವರ ವಿಭಾಗೀಯ ಪೀಠದ ಮುಂದೆ ಒಂದು ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ೨೦೦೪ ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದ ಡಾ. ಶರದ್ ಮೋರೆಶ್ವರ ಹರ್ಡೀಕರ್ ಅವರ ಹೆಸರು ಶೀರ್ಷಿಕೆಯಲ್ಲಿ ‘ಪದ್ಮಶ್ರೀ ಡಾ. ಶರದ್ ಮೋರೆಶ್ವರ ಹರ್ಡೀಕರ್’ ಎಂದು ಪಟ್ಟಿ ಮಾಡಲಾಗಿತ್ತು. ನ್ಯಾಯಾಧೀಶರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇದು ಕಾನೂನಿನ ಪ್ರಕಾರ ಕಾನೂನು ಬಾಹಿರ ಎಂದು ಹೇಳಿದ್ದಾರೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!