|

ವಾಷಿಂಗ್ಟನ (ಅಮೆರಿಕ) – ಚೀನಾ ಒಂದೆಡೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದ್ದು, ಇನ್ನೊಂದೆಡೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಎಂದು ಅಮೆರಿಕವು ಚೀನಾದ ದ್ವಂದ್ವ ನೀತಿಯ ಬಗ್ಗೆ ಭಾರತಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕದ ರಕ್ಷಣಾ ಪ್ರಧಾನ ಕಛೇರಿಯಾದ ಪೆಂಟಗನ್ ಈ ಕುರಿತು ಪ್ರಕಟಿಸಿರುವ ವರದಿಯಲ್ಲಿ ಚೀನಾದ ಮೇಲೆ ಅನೇಕ ಗಂಭೀರ ಆರೋಪಗಳನ್ನು ಮಾಡಿದೆ.
🇨🇳🤝🇮🇳 Peace Talks with India, Arms for Pakistan ⚠️🇵🇰
🇺🇸 The Pentagon warns of China’s duplicity:
👉 While holding peace talks with India, China continues supplying weapons to Pakistan.But a question for America too:
The United States itself has been one of Pakistan’s largest… pic.twitter.com/y1hyFEVD93— Sanatan Prabhat (@SanatanPrabhat) December 25, 2025
ಈ ವರದಿಯಲ್ಲಿ,
೧. ಅಕ್ಟೋಬರ್ ೨೦೨೪ ರಲ್ಲಿ ಭಾರತ ಮತ್ತು ಚೀನಾ ನಡುವೆ ನೈಜ ನಿಯಂತ್ರಣ ರೇಖೆಯ ಉಳಿದ ಸಂಘರ್ಷದ ಪ್ರದೇಶಗಳಿಂದ ಹಿಂದೆ ಸರಿಯುವ ಬಗ್ಗೆ ಒಪ್ಪಿಗೆ ವ್ಯಕ್ತಪಡಿಸಲಾಗಿತ್ತು. ಭಾರತದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸಿ, ಭಾರತವು ಅಮೆರಿಕದ ಹತ್ತಿರ ಹೋಗದಂತೆ ತಡೆಯುವುದು ಚೀನಾದ ಉದ್ದೇಶವಾಗಿರುವುದರಿಂದ ಚೀನಾ ಇಂತಹ ತಂತ್ರ ಹೂಡುತ್ತಿದೆ.
೨. ಭಾರತ ಮತ್ತು ಚೀನಾ ನಡುವೆ ಇಂದಿಗೂ ವಿಶ್ವಾಸದ ಕೊರತೆಯಿದೆ. ಅರುಣಾಚಲ ಪ್ರದೇಶದ ಕುರಿತಾದ ವಿವಾದವು ಇಬ್ಬರ ನಡುವಿನ ಪ್ರಮುಖ ವಿಷಯವಾಗಿದೆ. ಚೀನಾ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಳ್ಳುತ್ತಿದೆ. ಇದು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದೆ. ಚೀನಾ ಅರುಣಾಚಲ ಪ್ರದೇಶದ ವಿಷಯಕ್ಕೆ ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಷ್ಟೇ ಪ್ರಾಮುಖ್ಯತೆ ನೀಡುತ್ತಿದೆ.
೩. ಚೀನಾ ೨೦೨೦ ರಿಂದ ಇಲ್ಲಿಯವರೆಗೆ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ನೀಡಿದೆ. ಇದರೊಂದಿಗೆ ಎರಡೂ ದೇಶಗಳು ಸೇರಿ ‘ಜೆ.ಎಫ್.-೧೭’ ಫೈಟರ್ ಜೆಟ್‌ಗಳನ್ನು ತಯಾರಿಸುತ್ತಿವೆ. ಪಾಕಿಸ್ತಾನಕ್ಕೆ ಚೀನಾದಿಂದ ಡ್ರೋನ್ ಮತ್ತು ನೌಕಾಪಡೆಯ ಉಪಕರಣಗಳೂ ಸಿಗುತ್ತಿವೆ.
೪. ಡಿಸೆಂಬರ್ ೨೦೨೪ ರಲ್ಲಿ ಚೀನಾ ಮತ್ತು ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ಜಂಟಿ ಸೈನಿಕ ತಾಲೀಮು ನಡೆಸಿದ್ದವು. ಭವಿಷ್ಯದಲ್ಲಿ ಪಾಕಿಸ್ತಾನದಲ್ಲಿ ಚೀನೀ ಸೈನಿಕ ನೆಲೆಗಳು ನಿರ್ಮಾಣವಾಗಬಹುದು. ಹೀಗಾದಲ್ಲಿ ಭಾರತದ ಗಡಿಯಲ್ಲಿ ಚೀನಾದ ಸಂಚಾರ ಹೆಚ್ಚಾಗಲಿದೆ. ಚೀನಾದ ‘ವೆಸ್ಟರ್ನ್ ಥಿಯೇಟರ್ ಕಮಾಂಡ್’ ೨೦೨೪ ರಲ್ಲಿ ಎತ್ತರದ ಪ್ರದೇಶಗಳಲ್ಲಿ ವಿಶೇಷ ಸೈನಿಕ ತಾಲೀಮು ನಡೆಸಿದೆ.
೫. ಚೀನಾದ ಈ ವಿದೇಶಿ ಸೈನಿಕ ನೆಲೆಗಳು ಕೇವಲ ಸೈನಿಕ ಸಹಾಯಕ್ಕಾಗಿ ಮಾತ್ರವಲ್ಲದೆ, ಗುಪ್ತ ಮಾಹಿತಿ ಸಂಗ್ರಹಿಸಲು ಕೂಡ ಬಳಕೆಯಾಗಬಹುದು. ಇದರಿಂದ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಸೈನ್ಯದ ಚಲನವಲನಗಳ ಮೇಲೆ ನಿಗಾ ಇಡುವುದು ಚೀನಾಗೆ ಸುಲಭವಾಗಲಿದೆ.
೬. ಚೀನಾದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ ವಿಶ್ವದ ೨೧ ದೇಶಗಳಲ್ಲಿ ಹೊಸ ಸೈನಿಕ ನೆಲೆಗಳನ್ನು ಸ್ಥಾಪಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ಇದರ ಉದ್ದೇಶವು ಚೀನಾದ ನೌಕಾಪಡೆ ಮತ್ತು ವಾಯುಪಡೆಗೆ ದೂರದ ದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸಹಾಯ ಮಾಡುವುದು ಮತ್ತು ಅಲ್ಲಿ ಸೈನ್ಯವನ್ನು ನಿಯೋಜಿಸುವುದಾಗಿದೆ. ವಿಶ್ವದ ಪ್ರಮುಖ ಸಮುದ್ರ ವ್ಯಾಪಾರ ನಡೆಯುವ ಪ್ರದೇಶಗಳಲ್ಲಿ ಚೀನೀ ಸೈನ್ಯಕ್ಕೆ ಹೆಚ್ಚಿನ ಆಸಕ್ತಿಯಿದೆ. ಆ ದೃಷ್ಟಿಯಿಂದ ಅದು ಮಲಕ್ಕಾ ಜಲಸಂಧಿ, ಹೋರ್ಮುಜ್ ಜಲಸಂಧಿ ಮತ್ತು ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದ ಕೆಲವು ಆಯಕಟ್ಟಿನ ಸ್ಥಳಗಳ ಮೇಲೆ ಸೂಕ್ಷ್ಮ ನಿಗಾ ಇಟ್ಟಿದೆ.
೭. ಪ್ರಸ್ತುತ ಚೀನಾ ಸೈನ್ಯದ ಮುಖ್ಯ ಗಮನವು ‘ಫಸ್ಟ್ ಐಲ್ಯಾಂಡ್ ಚೈನ್’(ಮೊದಲ ದ್ವೀಪ ಸರಪಳಿ) ಮೇಲಿದೆ. ಈ ದ್ವೀಪ ಸರಪಳಿಯು ಜಪಾನನಿಂದ ಮಲೇಷ್ಯಾದವರೆಗೆ ಹರಡಿರುವ ಸಮುದ್ರ ಪ್ರದೇಶವಾಗಿದೆ. ಚೀನಾ ಇದನ್ನು ಏಷ್ಯಾದಲ್ಲಿ ತನ್ನ ಕಾರ್ಯತಂತ್ರದ ಹಿತಾಸಕ್ತಿಗಳ ಕೇಂದ್ರವೆಂದು ಪರಿಗಣಿಸುತ್ತದೆ.
೮. ಚೀನಾ ಸೇನೆಯು ಅಮೆರಿಕದಂತಹ ‘ಸುಸಜ್ಜಿತ ಶತ್ರು’ವನ್ನು ಎದುರಿಸುವ ನಿಟ್ಟಿನಲ್ಲಿ ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಚೀನಾ ಅಮೆರಿಕವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗಿ ಹಿಂದಿಕ್ಕುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಅದು ಸಂಪೂರ್ಣ ಶಕ್ತಿಯನ್ನು ಪಣಕ್ಕಿಡುವ ರಣತಂತ್ರವನ್ನು ಅನುಸರಿಸುತ್ತಿದೆ. ಈ ರಣತಂತ್ರವನ್ನೇ ಅದು ‘ನ್ಯಾಷನಲ್ ಟೋಟಲ್ ವಾರ್’ ಎಂದು ಕರೆಯುತ್ತದೆ.
೯. ಚೀನಾ ಕಳೆದ ಕೆಲವು ವರ್ಷಗಳಲ್ಲಿ ಅಣುಬಾಂಬ್, ದೂರಗಾಮಿ ಕ್ಷಿಪಣಿ ವ್ಯವಸ್ಥೆ, ನೌಕಾಪಡೆ, ಸೈಬರ್ ಮತ್ತು ಬಾಹ್ಯಾಕಾಶ ಸಾಮರ್ಥ್ಯಗಳನ್ನು ವೇಗವಾಗಿ ವೃದ್ಧಿಸಿಕೊಂಡಿದೆ. ೨೦೨೪ ರಲ್ಲಿ ‘ವೋಲ್ಟ್ ಟೈಫೂನ್’ ನಂತಹ ಚೀನೀ ಸೈಬರ್ ದಾಳಿಗಳ ಮೂಲಕ ಅಮೆರಿಕವನ್ನು ಗುರಿಯಾಗಿಸಲಾಗಿತ್ತು. ಇದು ಅಮೆರಿಕದ ಭದ್ರತೆಗೆ ನೇರ ಸವಾಲಾಗಿತ್ತು.
೧೦. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಅಮೆರಿಕ-ಚೀನಾ ಸಂಬಂಧಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲವು ಸುಧಾರಣೆಗಳಾಗಿವೆ. ಸಂಘರ್ಷವನ್ನು ತಪ್ಪಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಅಮೆರಿಕವು ಎರಡೂ ದೇಶಗಳ ಸೈನ್ಯಗಳ ನಡುವೆ ಸಂವಾದವನ್ನು ಹೆಚ್ಚಿಸಲು ಬಯಸುತ್ತದೆ. ಆದಾಗ್ಯೂ ಅಮೆರಿಕವು ಇಂಡೋ-ಪ್ಯಾಸಿಫಿಕ್ ಪ್ರದೇಶದಲ್ಲಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಯಾವಾಗಲೂ ಸಿದ್ಧವಿರುತ್ತದೆ.
ಚೀನಾದ ೨೦೪೯ ರ ವೇಳೆಗೆ ದೇಶದ ಪುನರುಜ್ಜೀವನ ಮಾಡುವ ಗುರಿ!
ಈ ವರದಿಯಲ್ಲಿ, ಚೀನಾ ೨೦೨೭ ರ ವೇಳೆಗೆ ತನ್ನ ಸೈನ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ಒತ್ತು ನೀಡಿದೆ ಎಂದು ಹೇಳಲಾಗಿದೆ. ಅದು ತೈವಾನ್ ವಿರುದ್ಧ ನಿರ್ಣಾಯಕ ವಿಜಯವನ್ನು ಸಾಧಿಸುವುದು, ಅಣು ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಅಮೆರಿಕಕ್ಕೆ ಪೈಪೋಟಿ ನೀಡುವುದು ಹಾಗೂ ಏಷ್ಯಾದ ಇತರ ದೇಶಗಳ ಮೇಲೆ ಒತ್ತಡ ಹೇರುವ ಗುರಿಯನ್ನು ಹೊಂದಿದೆ. ತೈವಾನ್ ಮೇಲೆ ನಿಯಂತ್ರಣ ಸಾಧಿಸಲು ಚೀನಾ ಅನೇಕ ಆಯ್ಕೆಗಳನ್ನು ಪರಿಗಣಿಸುತ್ತಿದೆ. ಚೀನಾ ೨೦೪೯ ರ ವೇಳೆಗೆ ದೇಶದ ಪುನರುಜ್ಜೀವನ ಮಾಡುವ ಗುರಿಯನ್ನು ಹೊಂದಿದ್ದು, ಇದರ ಅಡಿಯಲ್ಲಿ ಅದು ಜಗತ್ತಿನ ಎಲ್ಲಿಯಾದರೂ ಹೋರಾಡುವ ಮತ್ತು ಗೆಲ್ಲುವ ಸಾಮರ್ಥ್ಯವಿರುವ ಸೈನ್ಯವನ್ನು ಹೊಂದಿರುವ ಮಹಾಶಕ್ತಿಯಾಗಲು ಬಯಸುತ್ತದೆ.
ಸಂಪಾದಕೀಯ ನಿಲುವುಸ್ವತಃ ಅಮೆರಿಕ ಇದಕ್ಕಿಂತ ಬೇರೆ ಏನು ಮಾಡುತ್ತಿದೆ? ಅಮೆರಿಕವು ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರರಲ್ಲಿ ಒಂದಾಗಿದೆ ಎಂಬುದನ್ನು ಅಮೆರಿಕ ಮರೆತಿದೆಯೇ? ಆದ್ದರಿಂದ ಭಾರತದ ದೃಷ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಇವೆಲ್ಲವೂ ದೇಶದ ಶತ್ರುಗಳೇ ಆಗಿದ್ದಾರೆ. ಸರಕಾರವು ಇವುಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಈಗಲೇ ರಣತಂತ್ರ ರೂಪಿಸಬೇಕು! |
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ