
ನವದೆಹಲಿ – ಭಾರತೀಯ ಸೇನೆಯು ಡಿಸೆಂಬರ್ ೨೩ ರಂದು ‘ಆಕಾಶ್ ನೆಕ್ಸ್ಟ್ ಜನರೇಶನ್’ (ಆಕಾಶ್-ಎನ್.ಜಿ.) ಎಂಬ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ವ್ಯವಸ್ಥೆಯು ಎಲ್ಲಾ ಅಗತ್ಯ ಸೇವಾ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದೆ. ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಈ ಕ್ಷಿಪಣಿಯು ವೇಗವಾದ ಮತ್ತು ವಿವಿಧ ರೀತಿಯ ವಾಯು ಬೆದರಿಕೆಗಳಿಂದ ದೇಶದ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (‘ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್’ – ಡಿಆರ್‌ಡಿಓ) ಯ ಪ್ರಕಾರ, ಪರೀಕ್ಷೆಯ ಸಮಯದಲ್ಲಿ ‘ಆಕಾಶ್-ಎನ್.ಜಿ.’ ಆಕಾಶದಲ್ಲಿ ವಿವಿಧ ದೂರ ಮತ್ತು ಎತ್ತರದಲ್ಲಿರುವ ಗುರಿಗಳನ್ನು ನಿಖರವಾಗಿ ನಾಶಪಡಿಸಿದೆ. ಗಡಿಯ ಸಮೀಪ ಕಡಿಮೆ ಎತ್ತರದಲ್ಲಿ ಹಾರುವ ಮತ್ತು ದೂರದ ಹೆಚ್ಚು ಎತ್ತರದ ಗುರಿಗಳನ್ನು ಈ ಕ್ಷಿಪಣಿ ನಾಶಪಡಿಸಿತು. ಈ ನೂತನ ಕ್ಷಿಪಣಿಯ ವ್ಯಾಪ್ತಿ ೩0 ಕಿಲೋಮೀಟರ್‌ಗಳವರೆಗಿದ್ದು ೧೮ ಕಿಲೋಮೀಟರ್ ಎತ್ತರದವರೆಗೆ ಶತ್ರುಗಳ ವಾಯು ಬೆದರಿಕೆಗಳನ್ನು ತಡೆಯಬಲ್ಲದು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!