ಜರ್ಮನಿ ವಿದ್ಯಾರ್ಥಿಗಳ ಮುಂದೆ ಆರೋಪ ಭಾಜಪ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ

ಬರ್ಲಿನ್ (ಜರ್ಮನಿ) – ಭಾರತೀಯ ಜನತಾ ಪಕ್ಷವು (ಭಾಜಪ) ಸಂವಿಧಾನದ ಮೂಲ ಆಶಯವನ್ನು ನಾಶಪಡಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಡಿಸೆಂಬರ್ 18 ರಂದು ಬರ್ಲಿನ್‌ನ ಹರ್ಟಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ಅವರು ಈ ಮಾತನ್ನಾಡಿದರು. ಈ ಸಂವಾದದ ವಿಡಿಯೋವನ್ನು ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ರಾಹುಲ್ ಅವರು ಮುಂದೆ ಮಾತನಾಡಿ,

1. ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ; ಹಾಗಾಗಿ ಭಾಜಪ ಅದನ್ನು ಕೊನೆಗೊಳಿಸಲು ಬಯಸುತ್ತಿದೆ.
2. ದೇಶದ ಅನೇಕ ಸಂಸ್ಥಾತ್ಮಕ ವ್ಯವಸ್ಥೆಗಳು ಭಾಜಪಯ ನಿಯಂತ್ರಣದಲ್ಲಿವೆ ಮತ್ತು ಸರಕಾರವು ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳದಂತಹ (CBI) ತನಿಖಾ ಸಂಸ್ಥೆಗಳನ್ನು ರಾಜಕೀಯ ಆಯುಧವಾಗಿ ಬಳಸುತ್ತಿದೆ.
3. ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು; ಆದರೆ ಫಲಿತಾಂಶಗಳನ್ನು ಬದಲಾಯಿಸಲಾಯಿತು. ಹಾಗೆಯೇ ಮಹಾರಾಷ್ಟ್ರದ ಚುನಾವಣೆಗಳು ನಿಷ್ಪಕ್ಷಪಾತವಾಗಿರಲಿಲ್ಲ. ದೇಶದ ಕೋಟ್ಯಂತರ ನಾಗರಿಕರ ಸಿದ್ಧಾಂತವು ಸರಕಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಿಂತ (RSS) ಭಿನ್ನವಾಗಿದ್ದರೂ, ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ.
ರಾಹುಲ್ ಗಾಂಧಿ ಅವರಿಂದ ದೇಶದ ಅಪಖ್ಯಾತಿ! – ಭಾಜಪರಾಹುಲ್ ಗಾಂಧಿ ಅವರ ಈ ಹೇಳಿಕೆಗಳಿಗೆ ಭಾಜಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾಜಪಯ ಅಧ್ಯಕ್ಷರು ಮತ್ತು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಅವರು, ‘ವಿದೇಶಿ ನೆಲದಲ್ಲಿ ನಿಂತು ಭಾರತದ ವಿರುದ್ಧ ಹೇಳಿಕೆ ನೀಡುವುದು ದೇಶಕ್ಕೆ ಮಾಡುವ ಅವಮಾನವಾಗಿದೆ. ವಿಶ್ವದ 29 ದೇಶಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ಗೌರವ ನೀಡಿವೆ, ಆದರೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಅಪಖ್ಯಾತಿ ಮಾಡುತ್ತಿದ್ದಾರೆ’ ಎಂದು ನಡ್ಡಾ ಟೀಕಿಸಿದರು. |
ಸಂಪಾದಕೀಯ ನಿಲುವುರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ನಿರಂತರವಾಗಿ ದೇಶವನ್ನು ಅವಮಾನಿಸುತ್ತಾರೆ. ಆದ್ದರಿಂದ ‘ಅವರು ದೇಶದ ವಿರೋಧ ಪಕ್ಷದ ನಾಯಕರೋ ಅಥವಾ ದೇಶವಿರೋಧಿ ಪಕ್ಷದ ನಾಯಕರೋ?’ ಎಂಬ ಪ್ರಶ್ನೆ ಯಾರಿಗಾದರೂ ಮೂಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. |
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman