
ಫೋಂಡಾ (ಗೋವಾ), ಡಿಸೆಂಬರ್ 22 – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಗ್ಗೆ ಉತ್ಕಟ ಭಾವ ಹೊಂದಿದ್ದ ಮತ್ತು ಎಲ್ಲರನ್ನೂ ನಿರಪೇಕ್ಷವಾಗಿ ಪ್ರೀತಿಸುತ್ತಿದ್ದ ಸನಾತನ ಸಂಸ್ಥೆಯ 48ನೇ ಸಂತ ಪೂ. (ಶ್ರೀಮತಿ) ನಿರ್ಮಲಾ ದಾತೆ ಅಜ್ಜಿ (92 ವರ್ಷ) ಅವರು ಡಿಸೆಂಬರ್ 22ರಂದು ಸಂಜೆ 7 ಗಂಟೆಗೆ ರಾಮನಾಥಿಯ ಸನಾತನ ಆಶ್ರಮದಲ್ಲಿ ದೇಹ ತ್ಯಾಗ ಮಾಡಿದ್ದಾರೆ. ಅವರು ಇಬ್ಬರು ಪುತ್ರರು, ಒಬ್ಬ ಪುತ್ರಿ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಹಿರಿಯ ಪುತ್ರ ಡಾ. ನರೇಂದ್ರ ದಾತೆ ಮತ್ತು ಸೊಸೆ ಸೌ. ಜ್ಯೋತಿ ನರೇಂದ್ರ ದಾತೆ, ಕಿರಿಯ ಪುತ್ರ ಶ್ರೀ. ನಿರಂಜನ್ ದಾತೆ ಮತ್ತು ಸೊಸೆ ಸೌ. ನೇಹಾ ನಿರಂಜನ್ ದಾತೆ ಹಾಗೂ ಪುತ್ರಿ ಶ್ರೀಮತಿ ಅನುರಾಧಾ ಪೆಂಡ್ಸೆ ಅವರು ಸನಾತನದ ಮಾರ್ಗದರ್ಶನದಲ್ಲಿ ಪೂರ್ಣಾವಧಿ ಸಾಧನೆ ಮಾಡುತ್ತಿದ್ದಾರೆ.
ಮೇ 4, 2024 ರಂದು ಪೂ.(ಶ್ರೀಮತಿ) ನಿರ್ಮಲಾ ದಾತೆ ಅಜ್ಜಿಯವರ ಮೆದುಳಿನ ರಕ್ತ ಪರಿಚಲನೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅವರಿಗೆ ಪಾರ್ಶ್ವವಾಯು (ಲಕ್ವ) ಸಂಭವಿಸಿತ್ತು. ಅಂದಿನಿಂದ ಅವರು ತೀವ್ರ ಅನಾರೋಗ್ಯದಿಂದ (ಪ್ರಜ್ಞಾಹೀನ ಸ್ಥಿತಿಯಲ್ಲಿ) ಇದ್ದರು. ಪೂ. ಅಜ್ಜಿಯವರು ಸದಾ ಭಗವಂತನ ಸ್ಮರಣೆಯಲ್ಲಿದ್ದರು. ಪೂ. ಅಜ್ಜಿಯವರ ಸಹವಾಸದಲ್ಲಿ ಅವರ ಕುಟುಂಬದವರು ಸೇರಿದಂತೆ ಎಲ್ಲಾ ಸಾಧಕರಿಗೆ ಮನಸ್ಸು ನಿರ್ವಿಚಾರವಾಗುವುದು, ತನ್ನಷ್ಟಕ್ಕೆ ನಾಮಜಪ ಆರಂಭವಾಗುವುದು ಮುಂತಾದ ಅನುಭೂತಿಗಳು ಉಂಟಾಗುತ್ತಿದ್ದವು.
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !