|

ಹರ್ದೋಯಿ (ಉತ್ತರ ಪ್ರದೇಶ) – ಹರ್ದೋಯಿ ಜಿಲ್ಲೆಯ ಶಾಹಾಬಾದ್ ಪ್ರದೇಶದಲ್ಲಿರುವ ಬಿ.ಎನ್. ಪದವಿ ಮಹಾವಿದ್ಯಾಲಯದ ಕಾನೂನು ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಅಮಿತ್ ಯಾದವ್, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾಕ್ಟರ್ ಉಮರ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತಾವು ತಿಲಕ ಹಾಕಿ ಕಾಲೇಜಿಗೆ ಬಂದಿದ್ದಕ್ಕಾಗಿ ಪ್ರಾಚಾರ್ಯರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅಮಿತ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇನ್ನೊಂದೆಡೆ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಹಾವಿದ್ಯಾಲಯಕ್ಕೆ ಧಾವಿಸಿ, ವಿದ್ಯಾರ್ಥಿಯೊಂದಿಗೆ ನಡೆದ ಅಸಭ್ಯ ವರ್ತನೆಯನ್ನು ಖಂಡಿಸಿದರು. ಭವಿಷ್ಯದಲ್ಲಿ ಯಾವುದೇ ವಿದ್ಯಾರ್ಥಿಗೆ ಇಂತಹ ತಾರತಮ್ಯ ಎಸಗಿದರೆ ಸಂಘಟನೆಯು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ದೂರು ಸ್ವೀಕರಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಉಪಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮಿತ್ ಯಾದವ್ ಅವರ ಪ್ರಕಾರ, “ನಾನು ನನ್ನ ಧಾರ್ಮಿಕ ನಂಬಿಕೆಯಂತೆ ತಿಲಕ ಧರಿಸಿ ಕಾಲೇಜಿಗೆ ಹೋಗಿದ್ದೆ; ಆದರೆ ಪ್ರಾಚಾರ್ಯರು ‘ಇದೇನು ಗುರುಕುಲವಲ್ಲ’ ಎಂದು ಹೇಳುತ್ತಾ, ‘ತಿಲಕ ಅಳಿಸಿದ ನಂತರವೇ ಪ್ರವೇಶ ಸಿಗುವುದು’ ಎಂದು ಹೇಳಿದರು.
ಪ್ರಾಚಾರ್ಯರಿಂದ ಆರೋಪ ನಿರಾಕರಣೆ
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಉಮರ್ ಅವರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಾವು ಯಾವುದೇ ವಿದ್ಯಾರ್ಥಿಗೆ ತಿಲಕ ಧರಿಸುವುದನ್ನು ತಡೆದಿಲ್ಲ ಮತ್ತು ಅಂತಹ ಯಾವುದೇ ಟೀಕೆಗಳನ್ನು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಪಾದಕೀಯ ನಿಲುವು
|
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ