ಭಾರತವು ರಾಜತಾಂತ್ರಿಕತೆಯ ಪರಂಪರೆ ಹೊಂದಿರುವ ದೇಶ; ಶ್ರೀಕೃಷ್ಣ ಮತ್ತು ಹನುಮಂತನೇ ನಮ್ಮ ಆದರ್ಶಗಳು!

ಪುಣೆ – ದೇಶದ ಗುರುತು ಅದರ ನಾಯಕತ್ವದಿಂದಾಗುತ್ತದೆ. ಹನುಮಂತನು ಹೇಗೆ ಪ್ರಭು ಶ್ರೀರಾಮನ ಸೇವೆ ಮಾಡುತ್ತಿದ್ದನೋ, ಅದೇ ರೀತಿ ನಾನು ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ಪ್ರಧಾನಿ ಮೋದಿ ಅವರೇ ಇಂದು ದೇಶದ ದೃಷ್ಟಿ, ಆತ್ಮವಿಶ್ವಾಸ ಮತ್ತು ನಾಯಕತ್ವ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಪುಣೆಯ ‘ಸಿಂಬಯೋಸಿಸ್ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ’ಯ 22 ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲೊಬ್ಬರು, ‘ಭಾರತದ ವಿದೇಶಾಂಗ ನೀತಿಗೆ ಕೇವಲ ಒಬ್ಬ ಡಾ. ಎಸ್. ಜೈಶಂಕರ್ ಸಾಕಾ?’ ಎಂದು ಅವರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸುತ್ತಾ ಜೈಶಂಕರ್ ಅವರು ಈ ಮೇಲಿನ ಹೇಳಿಕೆ ನೀಡಿದರು. ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು, “ವಾಸ್ತವವಾಗಿ ನೀವು ನಿಮ್ಮ ಪ್ರಶ್ನೆಯನ್ನು ಸರಿಪಡಿಸಬೇಕು. ನೀವು ನನಗೆ ಕೇಳುವ ಬದಲು ‘ಕೇವಲ ಒಬ್ಬ ಮೋದಿ ಸಾಕಾ?’ ಎಂದು ಕೇಳಬೇಕಿತ್ತು; ಏಕೆಂದರೆ ದೇಶವು ನಾಯಕನ ಆಲೋಚನೆಯ ಪ್ರಕಾರವೇ ಕಾರ್ಯನಿರ್ವಹಿಸುತ್ತದೆ,” ಎಂದರು.

ಪುರಾಣಗಳಲ್ಲಿನ ರಾಜತಾಂತ್ರಿಕತೆಯ ವಿಶ್ಲೇಷಣೆ!
ಡಾ. ಜೈಶಂಕರ್ ಅವರು ತಮ್ಮ ಭಾಷಣದಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಉಲ್ಲೇಖಿಸಿ ಭಾರತೀಯ ರಾಜಕೀಯ ಕೌಶಲ್ಯದ ಮಹತ್ವವನ್ನು ವಿವರಿಸಿದರು.
ಅವರು ಮಾತುಮುಂದುವರೆಸಿ,
1. ರಾಮಾಯಣದಲ್ಲಿ ಹನುಮಂತನ ಪಾತ್ರವು ಓರ್ವ ಆದರ್ಶ ದೂತನದ್ದಾಗಿತ್ತು. ಲಂಕಾ ದಹನಕ್ಕೆ ಮೊದಲು ಅವರು ಕೇವಲ ಸೀತಾಮಾತೆಯನ್ನು ಹುಡುಕಲಿಲ್ಲ, ಆದರೆ ಶತ್ರುವಿನ (ರಾವಣನ) ಶಕ್ತಿ ಎಷ್ಟಿದೆ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಿದರು.
2. ಹನುಮಂತನು ವಿಭೀಷಣನನ್ನು ಗುರುತಿಸಿ, ‘ಅವರು ತಪ್ಪು ಜಾಗದಲ್ಲಿದ್ದಾರೆ,’ ಎಂದು ಅರಿತರು. ವಿಭೀಷಣರನ್ನು ನಮ್ಮ ಕಡೆಗೆ ಹೇಗೆ ತಿರುಗಿಸಬೇಕು, ಎಂಬುದರ ನಿಖರವಾದ ಲೆಕ್ಕಾಚಾರವನ್ನು ಹನುಮಂತ ಹಾಕಿದರು. ಇದೇ ನಿಜವಾದ ರಾಜತಾಂತ್ರಿಕತೆಯಾಗಿದೆ.
೩. ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣನು ಯಾವ ರೀತಿಯಲ್ಲಿ ಶಿಷ್ಟಾಚಾರ ಮತ್ತು ರಣನೀತಿಯನ್ನು ಬಳಸಿದ್ದರೋ, ಅದೇ ಪರಂಪರೆಯು ಇಂದಿಗೂ ಸಹ ಭಾರತದ ವಿದೇಶಾಂಗ ನೀತಿಗೆ ಸ್ಫೂರ್ತಿ ನೀಡುತ್ತಿದೆ ಎಂದವರು ನುಡಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ