ಚೀನಾದಿಂದ ಯಾವುದೇ ನುಸುಳುವಿಕೆ ನಡೆದಿಲ್ಲ!

ನವದೆಹಲಿ – ಬಾಂಗ್ಲಾದೇಶ ಗಡಿಯಿಂದ 2014 ರಿಂದ, ಅಂದರೆ ಕಳೆದ 11 ವರ್ಷಗಳಲ್ಲಿ 7 ಸಾವಿರದ 528 ನುಸುಳುಕೋರರು ಭಾರತಕ್ಕೆ ಪ್ರವೇಶಿಸಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಇದೇ ಅವಧಿಯಲ್ಲಿ ಪಾಕಿಸ್ತಾನ ಗಡಿಯಿಂದ 425 ಜನರು ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ; ಆದರೆ ಚೀನಾ ಗಡಿಯಲ್ಲಿ ಇದುವರೆಗೆ ಯಾವುದೇ ನುಸುಳುವಿಕೆ ಪ್ರಕರಣಗಳು ದಾಖಲಾಗಿಲ್ಲ ಎಂದು ರೈ ಮಾಹಿತಿ ನೀಡಿದ್ದಾರೆ.
🚨 Shocking Border Reality! 🚨
📊 Central Govt data (last 11 years):
➡️ 7,528 infiltrators via the Bangladesh border
➡️ 298 infiltrators via the Myanmar borderZero infiltration from China!
🤔 With the visible scale of Bangladeshi infiltration, will the public really believe… pic.twitter.com/q3zipVWVXk
— Sanatan Prabhat (@SanatanPrabhat) December 17, 2025
ಭದ್ರತೆಯನ್ನು ಬಲಪಡಿಸಲು ಮತ್ತು ನುಸುಳುವಿಕೆಯನ್ನು ತಡೆಯುವ ಉದ್ದೇಶದಿಂದ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯ ಶೇಕಡಾ 93 ಕ್ಕಿಂತ ಹೆಚ್ಚು ಭಾಗದಲ್ಲಿ ಬೇಲಿ ಹಾಕುವ ಕಾರ್ಯ ಪೂರ್ಣಗೊಂಡಿದೆ ಎಂದು ರೈ ತಿಳಿಸಿದರು. ಭಾರತ-ಬಾಂಗ್ಲಾದೇಶ ಗಡಿಯ ಸುಮಾರು ಶೇಕಡಾ 79 ರಷ್ಟು ಭಾಗದಲ್ಲಿ ಬೇಲಿ ಹಾಕಲಾಗಿದೆ. ಭಾರತ-ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯ ಒಟ್ಟು ಉದ್ದ 4 ಸಾವಿರದ 96 ಕಿಲೋಮೀಟರ್ ಆಗಿದೆ. ಈ ಪೈಕಿ 3 ಸಾವಿರದ 239 ಕಿಲೋಮೀಟರ್‌ಗಳಲ್ಲಿ ಬೇಲಿ ಹಾಕಲಾಗಿದ್ದು, ಸುಮಾರು 855 ಕಿಲೋಮೀಟರ್ ಗಡಿಯಲ್ಲಿ ಬೇಲಿ ಹಾಕುವುದು ಇನ್ನೂ ಬಾಕಿ ಇದೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ 1 ಸಾವಿರದ 643 ಕಿಲೋಮೀಟರ್ ಉದ್ದದ ಗಡಿಯಲ್ಲಿ ಈವರೆಗೆ ಕೇವಲ 9 ಕಿಲೋಮೀಟರ್ ಭಾಗದಲ್ಲಿ ಮಾತ್ರ ಬೇಲಿ ಹಾಕುವ ಕೆಲಸ ಪೂರ್ಣಗೊಂಡಿದೆ.
ಸಂಪಾದಕೀಯ ನಿಲುವುಭಾರತದಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆಯನ್ನು ನೋಡಿದರೆ, ಸಾರ್ವಜನಿಕರು ಈ ಅಂಕಿಅಂಶಗಳನ್ನು ನಂಬುತ್ತಾರೆಯೇ ಎಂಬ ಪ್ರಶ್ನೆ ಮೂಡುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!