
ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕಾ) – ಇಲ್ಲಿ ನಡೆದ ‘ಹ್ಯಾಕಥಾನ್’ (ತಂತ್ರಜ್ಞರು ಮತ್ತು ಇಂಜಿನಿಯರ್‍ಗಳ ಕಾರ್ಯಕ್ರಮ) ಒಂದರ ಛಾಯಾಚಿತ್ರದಲ್ಲಿ ಭಾರತೀಯರು ಮತ್ತು ದಕ್ಷಿಣ ಏಷ್ಯಾದ ಜನರ ಭಾಗವಹಿಸುವಿಕೆಯ ಬಗ್ಗೆ ಆಕ್ಷೇಪಾರ್ಹ ಟೀಕೆ ಮಾಡಿದ ಬಳಿಕ ಅಮೆರಿಕಾದ ಕೃತಕ ಬುದ್ಧಿಮತ್ತೆ ಸಂಸ್ಥೆಯೊಂದು ತನ್ನ ಹಿರಿಯ ಅಧಿಕಾರಿಯನ್ನು ವಜಾಗೊಳಿಸಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡಿತು ಮತ್ತು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಿಷಯವಾಯಿತು.
೧. ‘ಕ್ಲೈನ್’ ಎಂಬ ಸಂಸ್ಥೆಯ ‘ಕೃತಕ ಬುದ್ಧಿಮತ್ತೆ’ ವಿಭಾಗದ ಮುಖ್ಯಸ್ಥ ನಿಕ ಪ್ಯಾಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಛಾಯಾಚಿತ್ರವನ್ನು ಹಂಚಿಕೊಂಡು ಅದರ ಕೆಳಗೆ ‘ಇಮ್ಯಾಜಿನ್ ದ ಸ್ಮೆಲ್’ (ವಾಸನೆಯನ್ನು ಅನುಭವಿಸಿರಿ) ಎಂದು ಬರೆದಿದ್ದರು ಎಂದು ಹೇಳಲಾಗಿದೆ.
೨. ಆ ಛಾಯಾಚಿತ್ರದಲ್ಲಿ ಹ್ಯಾಕಥಾನ್ ನಲ್ಲಿ ಭಾಗವಹಿಸಿದ ತಂತ್ರಜ್ಞರು ಮತ್ತು ಇಂಜಿನಿಯರ್‍ಗಳು ಕಾಣಿಸುತ್ತಿದ್ದರು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮತ್ತು ದಕ್ಷಿಣ ಏಷ್ಯಾ ಮೂಲದ ಇಂಜಿನಿಯರ್‍ಗಳು ಇದ್ದರು.
೩. ಅನೇಕ ಪಾಶ್ಚಾತ್ಯ ದೇಶಗಳಲ್ಲಿ ‘ಇಮ್ಯಾಜಿನ್ ದ ಸ್ಮೆಲ್’ ಎಂಬ ಪದಪ್ರಯೋಗವನ್ನು ಜನಾಂಗೀಯ ನಿಂದನೆಗಾಗಿ ಬಳಸಲಾಗುತ್ತದೆ. ಬಹಳ ಹಿಂದಿನಿಂದಲೂ ಬಿಳಿ ಜನರು ‘ಕೃಷ್ಣವರ್ಣೀಯ ಜನರಿಂದ ಒಂದು ರೀತಿಯ ದುರ್ವಾಸನೆ ಬರುತ್ತದೆ’ ಎಂದು ಹೇಳಿ ಅವರನ್ನು ಅವಹೇಳನ ಮಾಡುತ್ತಿದ್ದರು. `ಇಮ್ಯಾಜಿನ್ ದ ಸ್ಮೆಲ್’ ಈ ಅಸ್ಪಷ್ಟ ಪದಪ್ರಯೋಗವು ಜನಾಂಗೀಯ ದ್ವೇಷದ ಸಂಕೇತವೆಂದು ಪಾಶ್ಚಾತ್ಯ ದೇಶಗಳಲ್ಲಿ ಪರಿಗಣಿಸಲಾಗುತ್ತದೆ.
೪. ಪ್ಯಾಶ್ ಅವರ ಈ ಹೇಳಿಕೆಯು ಜನಾಂಗೀಯ ಮತ್ತು ಅವಮಾನಕರ ಎಂದು ತೀವ್ರ ಆಕ್ರೋಶ ವ್ಯಕ್ತವಾಯಿತು. ಅನೇಕರು ಇದನ್ನು ಜನಾಂಗೀಯ ಪೂರ್ವಗ್ರಹಕ್ಕೆ ಹೋಲಿಸಿದರು. ಈ ಟೀಕೆಯನ್ನು ಸಾಮಾನ್ಯ ಬಳಕೆದಾರನಲ್ಲ, ಬದಲಾಗಿ ಹಿರಿಯ ಅಧಿಕಾರಿಯೇ ಮಾಡಿದ್ದರಿಂದ ಪ್ರಕರಣವು ಗಂಭೀರವಾಯಿತು ಮತ್ತು ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲು ಒತ್ತಡ ಹೆಚ್ಚಾಯಿತು.
ಕ್ಷಮೆಯಾಚಿಸಲು ನಿರಾಕರಣೆ
ಟೀಕೆಗಳ ನಂತರವೂ ನಿಕ್ ಪ್ಯಾಶ್ ಕ್ಷಮೆಯಾಚಿಸಲು ನಿರಾಕರಿಸಿದರು. ಇದು ಕೇವಲ ಒಂದು ಹಗುರವಾದ ಹಾಸ್ಯ ಎಂದು ಹೇಳಿದ ಅವರು ಪೋಸ್ಟ್ ಅನ್ನು ತೆಗೆದುಹಾಕಲು ಒಪ್ಪಲಿಲ್ಲ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌದ್ ರಿಜ್ವಾನ್ ಮೊದಲು ಪ್ಯಾಶ್ ಅವರನ್ನು ಕಾಪಾಡಲು ಪ್ರಯತ್ನಿಸಿದರು; ಮತ್ತು ಗದ್ದಲದ ಕಾರ್ಯಕ್ರದಲ್ಲಿನ ಹೇಳಿಕೆಯ ಸಂದರ್ಭವನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆಯೆಂದು ಹೇಳಿದರು; ಆದರೆ ನಂತರ ಕ್ಷಮೆಯಾಚಿಸಲು ನಿರಾಕರಿಸುವುದು ಸಂಸ್ಥೆಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಪ್ಯಾಶ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದರು.
ಸಂಪಾದಕೀಯ ನಿಲುಉವಅಮೆರಿಕಾದ ಸರಕಾರಿ ಸಂಸ್ಥೆಗಳು ಯಾವಾಗಲೂ ತಮ್ಮ ವರದಿಗಳಲ್ಲಿ ಭಾರತದಲ್ಲಿ ಜಾತಿ ಮತ್ತು ಧರ್ಮದ ದ್ವೇಷವಿದೆ ಎಂದು ಹೇಳುತ್ತಿರುತ್ತವೆ; ಆದರೆ ತಮ್ಮದೇ ದೇಶದಲ್ಲಿ ನಡೆಯುವ ಜನಾಂಗೀಯ ದ್ವೇಷದ ಬಗ್ಗೆ ಮಾತ್ರ ಮೌನ ವಹಿಸುತ್ತವೆ ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !