ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
ಸನಾತನ ರಾಷ್ಟ್ರವನ್ನು ಸ್ಥಾಪಿಸುವ ಸಂಕಲ್ಪದೊಂದಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಅವಿಸ್ಮರಣೀಯ ಮುಕ್ತಾಯ ಸಮಾರಂಭ !

ಭಾರತ ಮಂಡಪಂ, ದೆಹಲಿ (ಸುದ್ದಿ) – ಸನಾತನ ಸಂಸ್ಥೆಯು ತನ್ನ ರಜತ ಮಹೋತ್ಸವದ ವರ್ಷದಲ್ಲಿ ಆಯೋಜಿಸಿದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಹಿಂದೂಗಳಿಗೆ ಅಮೂಲ್ಯವಾಗಿದೆ. ಸನಾತನ ಸಂಸ್ಥೆಯು ಹಿಂದೂ ಜಾಗೃತಿಯ ಕಾರ್ಯವನ್ನು ಮಾಡುತ್ತಿರುವ ರೀತಿ ಅತ್ಯಂತ ಅನುಕರಣೀಯ ಮತ್ತು ಉತ್ಸಾಹವರ್ಧಕವಾಗಿದೆ. ಸನಾತನ ಸಂಸ್ಥೆಯ ಸಾಧಕರ ತ್ಯಾಗವನ್ನು ನೋಡಿದರೆ, ಈ ಸಂಸ್ಥೆಯು ಭವಿಷ್ಯದ ಬಲಿಷ್ಠ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ದೊಡ್ಡ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನನಗಿದೆ, ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ. ಶ್ರೀಪಾದ ನಾಯಕ ಅವರು ಹೇಳಿದರು. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಎರಡನೇ ದಿನದ ‘ಸನಾತನ ರಾಷ್ಟ್ರ ಸಂಕಲ್ಪ ಸಂತಸಭೆ’ ಎಂಬ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಅತ್ಯಂತ ಉತ್ಸಾಹದ ವಾತಾವರಣದಲ್ಲಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಘೋಷಣೆಗಳೊಂದಿಗೆ ಸನಾತನ ರಾಷ್ಟ್ರದ ಸ್ಥಾಪನೆಯ ಸಂಕಲ್ಪದೊಂದಿಗೆ ಈ ಮಹೋತ್ಸವವು ಅವಿಸ್ಮರಣೀಯವಾಗಿ ಸಂಪನ್ನಗೊಂಡಿತು.

ಈ ಭಾಗದಲ್ಲಿ ಛತ್ತೀಸಗಢದ ಶಾದಾನಿ ದರಬಾರದ ಒಂಬತ್ತನೇ ಪೀಠಾಧೀಶ್ವರ ಪ.ಪೂ. ಯುಧಿಷ್ಠಿರಲಾಲಜಿ ಮಹಾರಾಜರು, ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ವಿಜ್ಞಾನಾನಂದ ಸ್ವಾಮೀಜಿ, ‘ಪಾವನ ಚಿಂತನಧಾರಾ ಆಶ್ರಮ’ದ ಸ್ಥಾಪಕ ಪೂ. ಪವನ ಸಿನ್ಹಾ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಅವರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕರು ಮತ್ತು ಮಾಜಿ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರಕರ, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಉಪಸ್ಥಿತರಿದ್ದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ