ಅನ್ಯಧರ್ಮೀಯರ ಹೆಚ್ಚುತ್ತಿರುವ ಜನಸಂಖ್ಯೆಯ ವಿರುದ್ಧ ಹಿಂದೂ ಐಕ್ಯತೆಯ ಮೂಲಕ ಹೋರಾಡುವುದು ಅವಶ್ಯಕವಾಗಿದೆ! – ಶ್ರೀ ಪ್ರದೀಪ ಭಂಡಾರಿ, ವಕ್ತಾರರು, ಭಾರತೀಯ ಜನತಾ ಪಕ್ಷ Shankanad Mahotsav Delhi 2025

ಭಾರತೀಯ ಜನತಾ ಪಕ್ಷದ ವಕ್ತಾರರಾದ ಶ್ರೀ ಪ್ರದೀಪ ಭಂಡಾರಿ

‘ಸ್ವರಾಜ್ಯ ಮತ್ತು ಸಂಸ್ಕೃತಿ’ ಅಧಿವೇಶನದಲ್ಲಿ ‘ಬಾಂಗ್ಲಾದೇಶಿ ಒಳನುಸುಳುವಿಕೆ: ಸಮಸ್ಯೆ ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಮಾತನಾಡುತ್ತಾ, ಭಾರತೀಯ ಜನತಾ ಪಕ್ಷದ ವಕ್ತಾರರಾದ ಶ್ರೀ ಪ್ರದೀಪ ಭಂಡಾರಿ ಅವರು, ಕಳೆದ ೧೧ ವರ್ಷಗಳಿಂದ ಭಾರತೀಯ ಜನಸಂಖ್ಯಾಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿದ ನಂತರ ಈ ಕೆಳಗಿನ ಅಂಶಗಳು ತಿಳಿದುಬಂದಿವೆ ಎಂದು ಹೇಳಿದರು:

೧. ಮುಸಲ್ಮಾನರ ಜನಸಂಖ್ಯೆ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಅಭ್ಯರ್ಥಿಗಳು ಎಂದಿಗೂ ಚುನಾಯಿತರಾಗುವುದಿಲ್ಲ; ಆದರೆ ಹಿಂದೂ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮಾಜದ ಅಭ್ಯರ್ಥಿಗಳು ಚುನಾಯಿತರಾಗುತ್ತಾರೆ.

೨. ಒಂದು ವೇಳೆ ಹಿಂದೂ ಬಾಹುಳ್ಯದ ಪ್ರದೇಶವು ಮುಸಲ್ಮಾನ ಬಾಹುಳ್ಯದ ಪ್ರದೇಶಗಳಿಂದ ಸುತ್ತುವರಿದಿದ್ದರೆ, ಅನೇಕ ಬಾರಿ ಅಲ್ಲಿನ ಹಿಂದೂಗಳು ಮನೆ ಬಿಟ್ಟು ಓಡಿಹೋಗಬೇಕಾಗುತ್ತದೆ ಮತ್ತು ಕೆಲವೇ ಸಮಯದಲ್ಲಿ ಆ ಹಿಂದೂ ಬಾಹುಳ್ಯದ ಪ್ರದೇಶವೂ ಮುಸಲ್ಮಾನ ಬಾಹುಳ್ಯದ ಪ್ರದೇಶವಾಗಿ ಪರಿವರ್ತನೆಯಾಗುತ್ತದೆ; ಆದರೆ ಹಿಂದೂ ಬಾಹುಳ್ಯದ ಪ್ರದೇಶಗಳಿಂದ ಸುತ್ತುವರಿದ ಮುಸಲ್ಮಾನ ಬಾಹುಳ್ಯದ ಪ್ರದೇಶದಿಂದ ಯಾರೂ ಮನೆ ಬಿಟ್ಟು ಹೋಗಿರುವ ಒಂದೇ ಒಂದು ಘಟನೆಯೂ ಕಂಡುಬಂದಿಲ್ಲ.

೩. ಅಲ್ಪಸಂಖ್ಯಾತರ ಸಂಖ್ಯೆಯು ಶೇಕಡಾ ೩೩% ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಅಲ್ಲಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ವ್ಯವಹಾರಿಕ ಸ್ಥಿತಿಯು ಅಲ್ಪಸಂಖ್ಯಾತರ ಪರವಾಗಿ ಬದಲಾಗುತ್ತದೆ. ಅಲ್ಲಿ ಅಲ್ಪಸಂಖ್ಯಾತರು ಪ್ರಬಲರಾಗುತ್ತಾರೆ, ಇದು ನಿಜವಾಗಿಯೂ ಆತಂಕದ ವಿಷಯವಾಗಿದೆ.

೪. ೨೦೪೦ರ ವೇಳೆಗೆ ಭಾರತದ ೧೦೦ ಜಿಲ್ಲೆಗಳು ಮುಸಲ್ಮಾನ ಬಾಹುಳ್ಯದ ಜಿಲ್ಲೆಗಳಾಗುತ್ತವೆ, ಹಾಗೆಯೇ ೯೦ ಜಿಲ್ಲೆಗಳಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ ೭೦% ರಿಂದ ಶೇಕಡಾ ೬೦% ಕ್ಕೆ ಕಡಿಮೆಯಾಗುತ್ತದೆ. ಒಂದು ದೇಶದ ಜನಸಂಖ್ಯಾಶಾಸ್ತ್ರವು ಈ ರೀತಿಯಲ್ಲಿ ಬದಲಾದಾಗ, ಅಲ್ಲಿನ ಪ್ರಜಾಪ್ರಭುತ್ವವೂ ಬದಲಾಗುತ್ತದೆ.

ಆದ್ದರಿಂದ, ಈ ಸಮಸ್ಯೆಯನ್ನು ನಿವಾರಿಸಲು ಚಿಂತನೆ, ಮನನ ಮತ್ತು ಪ್ರಯತ್ನಗಳು ನಡೆಯಬೇಕು. ಹಿಂದೂಗಳು ರಾಮಮಂದಿರ ಸ್ಥಾಪನೆಗಾಗಿ ಹೇಗೆ ಕಠೋರ ಹೋರಾಟ ನಡೆಸಿದರೋ, ಅದೇ ರೀತಿ ಸಂಘಟಿತರಾಗಿ ಹೋರಾಟ ಮಾಡಬೇಕಾಗುತ್ತದೆ, ಆಗ ಮಾತ್ರ ಭವಿಷ್ಯದ ಸನಾತನ ಪೀಳಿಗೆ, ಭಾರತೀಯ ಪ್ರಜಾಪ್ರಭುತ್ವ, ಭಾರತದ ಏಕತೆ ಮತ್ತು ಸಮಗ್ರತೆಯು ಉಳಿಯುತ್ತದೆ ಎಂದು ಶ್ರೀ ಭಂಡಾರಿ ಅವರು ಒತ್ತು ನೀಡಿದರು.