ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
‘ಸನಾತನ ಸಂಸ್ಕೃತಿ ಮತ್ತು ಸಮಾಜದ ರಕ್ಷಣೆ’ ಚರ್ಚಾಗೋಷ್ಠಿಯಲ್ಲಿ ಗಣ್ಯರು ವ್ಯಕ್ತಪಡಿಸಿದ ವಿಚಾರಗಳು!

ದೆಹಲಿ – ಹಿಂದೂ ಸಂಸ್ಕೃತಿಯನ್ನು ನಾಶಮಾಡಲು ಭಾರತದ ಮೇಲೆ ಸಾವಿರಾರು ಆಕ್ರಮಣಗಳು ನಡೆದಿವೆ. ಈ ಆಕ್ರಮಣಕಾರರಿಂದ ಹಿಂದೂ ಧರ್ಮವನ್ನು ರಕ್ಷಿಸಲು ಸಾವಿರಾರು ಹಿಂದೂಗಳು ತಮ್ಮ ಬಲಿದಾನ ಮಾಡಿದ್ದಾರೆ. ಅವರ ತ್ಯಾಗದಿಂದಲೇ ಹಿಂದೂ ಧರ್ಮದ ಅಸ್ತಿತ್ವ ಉಳಿದಿದೆ. ಸಮಾಜದ ರಕ್ಷಣೆಗಾಗಿ ನಮ್ಮ ಮುಂದಿನ ಪೀಳಿಗೆಗೆ ಸನಾತನ ಸಂಸ್ಕೃತಿಯ ಶಿಕ್ಷಣವನ್ನು ನೀಡಬೇಕು ಎಂದು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ‘ಸನಾತನ ಸಂಸ್ಕೃತಿ ಮತ್ತು ಸಮಾಜದ ರಕ್ಷಣೆ’ ಎಂಬ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ ಗಣ್ಯರು ಅಭಿಪ್ರಾಯಪಟ್ಟರು. ಈ ಚರ್ಚಾಗೋಷ್ಠಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ವಕೀಲ ಮಕರಂದ್ ಅಡ್ಕರ್, ‘ಶೂರವೀರ ಪ್ರೋಗ್ರಾಂ’ನ ಸ್ಥಾಪಕ ವೀರೇಂದ್ರ ಪಾಂಡೆ, ‘ನಿಮಿತ್ತೇಕಮ್’ ಮತ್ತು ‘ಧರ್ಮಾಂಶ ಫೌಂಡೇಷನ್’ನ ಸ್ಥಾಪಕ ಡಾ. ಓಮೇಂದ್ರ ರತ್ನೂ, ಹಿಂದುತ್ವನಿಷ್ಠ ಮೀನಾಕ್ಷಿ ಶರಣ್ ಮತ್ತು ಲೇಖಕಿ ರತಿ ಹೆಗ್ಡೆ ಭಾಗವಹಿಸಿದ್ದರು. ನ್ಯಾಯವಾದಿ ಅಮಿತಾ ಸಚ್‌ದೇವ್ ಅವರು ಈ ಚರ್ಚಾಗೋಷ್ಠಿಯನ್ನು ನಡೆಸಿಕೊಟ್ಟರು.
ನಮ್ಮ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಹೇಳಬೇಕು! – ಮೀನಾಕ್ಷಿ ಶರಣ್, ಹಿಂದುತ್ವನಿಷ್ಠ
ಭಾರತದ ವಿಭಜನೆಯ ಸಮಯದಲ್ಲಿ 50 ಲಕ್ಷ ನಿರಪರಾಧಿ ಹಿಂದೂಗಳನ್ನು ಹತ್ಯೆ ಮಾಡಲಾಯಿತು ಮತ್ತು 4 ಕೋಟಿ ಹಿಂದೂಗಳು ನಿರಾಶ್ರಿತರಾದರು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಲು ಹುತಾತ್ಮರಾದವರಿಗೆ ಶಾಸ್ತ್ರದ ಪ್ರಕಾರ ಅಂತಿಮ ವಿಧಿಗಳನ್ನು ಮಾಡಿಲ್ಲ. ಇಲ್ಲಿಯವರೆಗೆ ಅಸಂಖ್ಯಾತ ಹಿಂದೂಗಳ ನರಮೇಧ ನಡೆದಿದೆ. ಈ ಹಿಂದೂಗಳಿಗಾಗಿ ನಮ್ಮ ಸಂಘಟನೆಯು ವಿವಿಧ ರಾಜ್ಯಗಳಲ್ಲಿ ಸರ್ವಪಿತೃ ಅಮಾವಾಸ್ಯೆಯ ದಿನದಂದು ಸಾಮೂಹಿಕ ತರ್ಪಣವನ್ನು ಮಾಡುತ್ತದೆ. ಇದರಿಂದ ನಮ್ಮ ಪೂರ್ವಜರು ಯಾವುದಕ್ಕಾಗಿ ಹುತಾತ್ಮರಾದರು ಎಂಬ ಮಾಹಿತಿ ಮುಂದಿನ ಪೀಳಿಗೆಗೆ ತಿಳಿಯುತ್ತದೆ. ಆದ್ದರಿಂದ, ನಮ್ಮ ಈ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು, ಎಂದು ಹೇಳಿದರು.
ವಿವಾಹದ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವ ಬೇಡಿಕೆ ಸನಾತನ ಧರ್ಮದ ವಿರುದ್ಧದ ಪಿತೂರಿ! – ನ್ಯಾಯವಾದಿ ಮಕರಂದ್ ಅಡ್ಕರ್, ಸರ್ವೋಚ್ಚ ನ್ಯಾಯಾಲಯ
ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ 2020 ರಲ್ಲಿ ಜಯಾ ಜೇಟ್ಲಿ ಅವರ ನೇತೃತ್ವದಲ್ಲಿ ಒಂದು ಕಾರ್ಯಪಡೆಯನ್ನು (ಟಾಸ್ಕ್ ಫೋರ್ಸ್) ರಚಿಸಲಾಯಿತು. ಈ ಕಾರ್ಯಪಡೆಯು ಹೆಣ್ಣುಮಕ್ಕಳ ವಿವಾಹದ ವಯಸ್ಸಿನ ಮಿತಿಯನ್ನು 16 ವರ್ಷಕ್ಕೆ ಇಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಇದು ಸನಾತನ ಸಂಸ್ಕೃತಿಯ ವಿರುದ್ಧದ ಪಿತೂರಿಯಾಗಿದೆ. ಇಂತಹ ವಯೋಮಿತಿಯನ್ನು ಕಡಿಮೆ ಮಾಡಬೇಕಾದರೆ, ಅದಕ್ಕಾಗಿ ಸಂಸತ್ತಿನಲ್ಲಿ ಕಾನೂನಿನಲ್ಲಿ ಬದಲಾವಣೆ ಮಾಡಬೇಕು. ಆದ್ದರಿಂದ, ನ್ಯಾಯಾಲಯಕ್ಕೆ ಇಂತಹ ಬೇಡಿಕೆ ಸಲ್ಲಿಸುವುದು ಆಧಾರರಹಿತವಾಗಿದೆ, ಎಂದು ಹೇಳಿದರು.
ಪ್ರತಿ ಕೆಲಸಕ್ಕೂ ಹಿಂದೂ ವ್ಯಕ್ತಿಯನ್ನು ಒದಗಿಸುತ್ತೇವೆ! – ವೀರೇಂದ್ರ ಪಾಂಡೆ, ಸ್ಥಾಪಕ, ಶೂರವೀರ ಪ್ರೋಗ್ರಾಂ
ವಿಶ್ವದಲ್ಲಿ ಧರ್ಮ ಒಂದೇ ಇದೆ ಮತ್ತು ಅದು ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಮಾನವೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ; ಆದರೆ ಇತರ ಪಂಥದವರು ಬೇರೆಯವರನ್ನು ಮತಾಂತರ ಮಾಡುತ್ತಾರೆ. ಅವರು ತಮ್ಮ ಪಂಥದ ವ್ಯಕ್ತಿಗಳನ್ನು ಮಾತ್ರ ಮಾನವೀಯತೆಯ ದೃಷ್ಟಿಯಿಂದ ನೋಡುತ್ತಾರೆ. ಹಿಂದೂಗಳಿಗೆ ಮನೆಯ ವಿವಿಧ ಕೆಲಸಗಳನ್ನು ಮಾಡಲು ಹಿಂದೂ ಧರ್ಮದ ವ್ಯಕ್ತಿಗಳು ಸಿಗುವುದಿಲ್ಲ. ಇದಕ್ಕಾಗಿ ನಮ್ಮ ಸಂಘಟನೆಯನ್ನು ಸಂಪರ್ಕಿಸಿದರೆ ಕೆಲಸ ಮಾಡುವ ಹಿಂದೂ ಧರ್ಮದ ವ್ಯಕ್ತಿಯನ್ನು ಒದಗಿಸಲಾಗುತ್ತದೆ. ಇದು ಹಿಂದೂ ಧರ್ಮದ ರಕ್ಷಣೆಗಾಗಿ ಮಾಡುವ ಒಂದು ಕೆಲಸವಾಗಿದೆ.
‘ಎಲ್ಲಾ ಧರ್ಮಗಳು ಸಮಾನವಲ್ಲ’ ಎಂದು ಹಿಂದೂಗಳು ತಮ್ಮ ಮಕ್ಕಳಿಗೆ ಹೇಳಬೇಕು! – ರತಿ ಹೆಗ್ಡೆ, ಲೇಖಕಿ
ಹಿಂದೂಗಳಿಗೆ ಎಲ್ಲಾ ಧರ್ಮಗಳು ಸಮಾನ ಎಂದು ಕಲಿಸಲಾಗುತ್ತದೆ; ಆದರೆ ಎಲ್ಲಾ ಧರ್ಮಗಳು ಸಮಾನವಲ್ಲ. ಇತರ ಪಂಥದವರು ತಮ್ಮ ಮಕ್ಕಳಿಗೆ ತಮ್ಮ ಪಂಥದ ಶಿಕ್ಷಣ ನೀಡುತ್ತಾರೆ; ಆದರೆ ಹಿಂದೂಗಳು ತಮ್ಮ ಮುಂದಿನ ಪೀಳಿಗೆಗೆ ಸನಾತನ ಧರ್ಮದ ಶಿಕ್ಷಣ ನೀಡುತ್ತಿಲ್ಲ. ನಮ್ಮ ಮಕ್ಕಳಿಗೆ ಸನಾತನ ಧರ್ಮದ ಮಹತ್ವವನ್ನು ಹೇಳಬೇಕು. ಹಾಗೆ ಮಾಡಿದರೆ, ಅವರು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ನಮ್ಮ ಧರ್ಮ ಪ್ರಾಚೀನವಾಗಿದೆ ಎಂದು ನಮ್ಮ ಮಕ್ಕಳಿಗೆ ಹೇಳಬೇಕು. ಅವರಿಗೆ ನಮ್ಮ ಪೂರ್ವಜರ ಇತಿಹಾಸವನ್ನು ಹೇಳಬೇಕು.
… ಇಲ್ಲದಿದ್ದರೆ ಭಾರತದಲ್ಲಿಯೂ ಹಿಂದೂಗಳು ಉಳಿಯುವುದಿಲ್ಲ! – ಡಾ. ಓಮೇಂದ್ರ ರತ್ನೂ, ಸ್ಥಾಪಕ, ನಿಮಿತ್ತೇಕಮ್ ಮತ್ತು ಧರ್ಮಾಂಶ ಫೌಂಡೇಷನ್
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಈ ಎರಡೂ ದೇಶಗಳಲ್ಲಿ 3 ಕೋಟಿ ಹಿಂದೂಗಳ ಜೀವ ಅಪಾಯದಲ್ಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಲು ಪ್ರಯತ್ನಿಸದಿದ್ದರೆ, ಭವಿಷ್ಯದಲ್ಲಿ ಭಾರತದಲ್ಲಿಯೂ ಹಿಂದೂಗಳು ಉಳಿಯುವುದಿಲ್ಲ. ಹಲಾಲ್ ಪ್ರಮಾಣಪತ್ರದ ಮೂಲಕ ದೇಶದಲ್ಲಿ ಸಮಾನಾಂತರ ಆರ್ಥಿಕತೆ ನಡೆಯುತ್ತಿದೆ. ಅದರ ಮೇಲೆ ಸರಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಂತ್ರಣವಿಲ್ಲ. ಹಲಾಲ್ ಆರ್ಥಿಕತೆ ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ದೇಶದಲ್ಲಿ ಹಲಾಲ್‌ನಂತಹ ಅಪಾಯಕಾರಿ ಸಂಕಟ ಹರಡುತ್ತಿರುವಾಗ, ಹಿಂದೂ ಸಮಾಜ ಕ್ರಿಕೆಟ್, ವಿವಾಹ ಸಮಾರಂಭಗಳು ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ, ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!