SRSmahotsav Delhi 2025 : ವಿಶ್ವದ ನೇತೃತ್ವ ವಹಿಸಿಕೊಳ್ಳುವ ಭಾರತವನ್ನು ನಿರ್ಮಿಸೋಣ! – ಕಪಿಲ ಮಿಶ್ರಾ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು, ದೆಹಲಿ

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ಭಾರತ ಮಂಡಪಂ – ನಾವು ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಿಂದೂ ಸಹೋದರರ/ಸಹೋದರಿಯರ ರಕ್ಷಣೆ ಮಾಡಬೇಕು. ಮಾನವೀಯತೆಯ ಮೂಲವೇ ಹಿಂದೂ ಧರ್ಮ ಆಗಿದೆ. ವಿಜ್ಞಾನದ ಮೂಲವೂ ಅಧ್ಯಾತ್ಮವೇ ಆಗಿದೆ. ಇಂತಹ ಸನಾತನ ಸಂಸ್ಕೃತಿಯನ್ನು ಮುಂದುವರೆಸುವ, ಇಡೀ ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯವುಳ್ಳ ಭಾರತವನ್ನು ನಾವು ನಿರ್ಮಿಸಬೇಕಾಗಿದೆ. ಯಾವ ಕೆಲಸ ಯಾವಾಗ ಮತ್ತು ಯಾರಿಂದ ಆಗಬೇಕು ಎಂಬುದನ್ನು ಭಗವಂತನೇ ನಿರ್ಧರಿಸಿರುತ್ತಾನೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿರುವುದು ಭಗವಂತನ ಯೋಜನೆಯಾಗಿದೆ. ಕೆಂಪುಕೋಟೆಯ ಬಳಿ ನಡೆದ ಬಾಂಬ್ ಸ್ಫೋಟವನ್ನು ಗಮನಿಸಿದರೆ, ಜಿಹಾದ್ ಎಲ್ಲೆಡೆ ಹರಡಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ, ಹಿಂದೂಗಳು ಹೆಚ್ಚು ಜಾಗರೂಕರಾಗಿರಬೇಕು. ಸನಾತನ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಮಾತ್ರ ನಮ್ಮ ರಕ್ಷಣೆಯಾಗುತ್ತದೆ. ಮಾನವೀಯತೆಯ ಮೂಲಭೂತ ಸ್ವಭಾವದಿಂದ ದೂರವಿರುವವರೇ ಬಾಂಬ್ ಸ್ಫೋಟಗಳನ್ನು ಮಾಡುತ್ತಾರೆ. ಬುರ್ಖಾದಲ್ಲಿ ತಿರುಗಾಡುವ, ಮೂರು ತಲಾಖ್ ಎಂಬ ದುಷ್ಟ ಪದ್ಧತಿಯಿಂದ ಪೀಡಿತರಾದ ಮಹಿಳೆಯರೇ ಈ ಜಿಹಾದಿಗಳಿಗೆ ಜನ್ಮ ನೀಡಲಿದ್ದಾರೆ! ಆದರೆ ಹಿಂದೂಗಳು ಭಯಪಡುವ ಅಗತ್ಯವಿಲ್ಲ! ಹಿಂದೂ ಮಾತೃಶಕ್ತಿಯಲ್ಲಿ ಶ್ರೀ ಜಗದಂಬಾ ಮಾತೆಯ ತೇಜಸ್ಸು ಇದ್ದರೆ, ಎಷ್ಟು ಜಿಹಾದಿಗಳು ಬಂದರೂ ಅವರನ್ನು ನಾಶ ಮಾಡುವ ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟುತ್ತಾರೆ. ಕೇವಲ ಜಿಹಾದ್ ಮತ್ತು ಮತಾಂತರವನ್ನು ತಡೆಯುವುದರಿಂದ ರಾಮರಾಜ್ಯ ನಿರ್ಮಾಣವಾಗುವುದಿಲ್ಲ. ಅದಕ್ಕಾಗಿ ಹಿಂದೂಗಳ ನಡುವಿನ ಭೇದಭಾವವನ್ನು ಹೋಗಲಾಡಿಸಿ ನಾವು ಒಗ್ಗೂಡಬೇಕು. ಪ್ರಭು ಶ್ರೀರಾಮನೇ ಸ್ವತಃ ಶಬರಿಯ ಮನೆಗೆ ಹೋಗಿದ್ದನ್ನು ನಾವು ನೆನಪಿನಲ್ಲಿಡಬೇಕು. ಕೇಸರಿ ಉಳಿದರೆ, ಉಳಿದೆಲ್ಲವೂ ಸುರಕ್ಷಿತವಾಗಿರುತ್ತವೆ. ಇದಕ್ಕಾಗಿ, ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತು ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳು ಒಂದಾಗುವುದು ಆವಶ್ಯಕವಾಗಿದೆ.