
ಇಸ್ಲಾಮಾಬಾದ್ (ಪಾಕಿಸ್ತಾನ) – ಸೌದಿ ಅರೇಬಿಯಾದಲ್ಲಿ ಬಂಧಿತರಾದ ಮತ್ತು ಶಿಕ್ಷೆಗೊಳಗಾದ ವಿದೇಶಿ ನಾಗರಿಕರ ಪೈಕಿ ಪಾಕಿಸ್ತಾನಿಯರ ಸಂಖ್ಯೆ ಅತ್ಯಧಿಕವಾಗಿದೆ. ಪಾಕಿಸ್ತಾನದ ಹಿರಿಯ ಪತ್ರಕರ್ತ ಝಾಹಿದ್ ಗಿಶ್ಕೋರಿ ಅವರು ತಮ್ಮ ಒಂದು ವಿಡಿಯೋ ಮೂಲಕ ಸೌದಿಯಲ್ಲಿರುವ ಪಾಕಿಸ್ತಾನಿಗಳ ದುಃಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿಯರ ಹೆಸರಿನಲ್ಲಿ ಅತಿ ಹೆಚ್ಚು ಅಪರಾಧಗಳು ದಾಖಲಾಗಿವೆ ಎಂದು ಝಾಹಿದ್ ಹೇಳಿದ್ದಾರೆ. ಇಷ್ಟೇ ಅಲ್ಲ, ೨೦೧೪ ರಿಂದ ಅಂದರೆ ಕಳೆದ ೧೦ ವರ್ಷಗಳಲ್ಲಿ, ಸೌದಿಯಲ್ಲಿ ೧೭೦ ಪಾಕಿಸ್ತಾನಿ ನಾಗರಿಕರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಕೊಲೆ ಮತ್ತು ಇತರ ಗಂಭೀರ ಅಪರಾಧಗಳಿಗಾಗಿ ಈ ಶಿಕ್ಷೆಯನ್ನು ವಿಧಿಸಲಾಗಿದೆ.
ಡಿಸೆಂಬರ್ ೧೦ ರಂದು ಸೌದಿಯಲ್ಲಿ ಒಬ್ಬ ಪಾಕಿಸ್ತಾನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ೨೦೨೪ ರ ಇಸವಿ ವಿಶೇಷವಾಗಿ ಪಾಕಿಸ್ತಾನಿಗಳಿಗೆ ಕೆಟ್ಟದ್ದಾಗಿತ್ತು. ೨೦೨೪ ರಲ್ಲಿ ೨೧ ಪಾಕಿಸ್ತಾನಿ ಕೈದಿಗಳಿಗೆ ವಿವಿಧ ಅಪರಾಧಗಳಿಗಾಗಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಝಾಹಿದ್ ಹೇಳಿದ್ದಾರೆ.
೨೦೨೫ ರಲ್ಲಿ ಇಲ್ಲಿಯವರೆಗೆ ೩ ಪಾಕಿಸ್ತಾನಿಗಳಿಗೆ ಗಲ್ಲು ಶಿಕ್ಷೆ
ಝಾಹಿದ್ ಅವರ ಪ್ರಕಾರ, ೨೦೧೪ ರಲ್ಲಿ ಸೌದಿಯಲ್ಲಿ ೧೨, ೨೦೧೫ ರಲ್ಲಿ ೧೪, ೨೦೧೬ ರಲ್ಲಿ ೫, ೨೦೧೭ ರಲ್ಲಿ ೧೩, ೨೦೧೮ ರಲ್ಲಿ ೧೮ ಮತ್ತು ೨೦೧೯ ರಲ್ಲಿ ಒಬ್ಬ ಪಾಕಿಸ್ತಾನಿ ಕೈದಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ವರ್ಷ, ಅಂದರೆ ೨೦೨೫ ರಲ್ಲಿ ಇಲ್ಲಿಯವರೆಗೆ ೩ ಪಾಕಿಸ್ತಾನಿಗಳಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಅವರೆಲ್ಲರ ಶಿಕ್ಷೆಯ ಕಾರಣಗಳು ಭಿನ್ನಭಿನ್ನವಾಗಿದ್ದವು.
೭ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಗಳು ಜೈಲಿನಲ್ಲಿ!
ಪ್ರಸ್ತುತ ಸೌದಿಯ ಜೈಲುಗಳಲ್ಲಿ ೭ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಯರು ಬಂಧಿತರಾಗಿದ್ದಾರೆ. ಅವರಲ್ಲಿ ೨೮ ಪಾಕಿಸ್ತಾನಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಮತ್ತು ಕೆಲವರ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಸೌದಿಯ ಜೈಲುಗಳಲ್ಲಿ ೨೨ ಪಾಕಿಸ್ತಾನಿ ಮಹಿಳೆಯರೂ ಇದ್ದಾರೆ, ಅವರಲ್ಲಿ ೨ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ನಿಷ್ಕ್ರಿಯ ಪಾಕಿಸ್ತಾನ ಸರಕಾರ!
ಸೌದಿಯಲ್ಲಿ ಪಾಕಿಸ್ತಾನಿಗಳನ್ನು ರಕ್ಷಿಸಲು ಪಾಕಿಸ್ತಾನದ ಸರಕಾರ ಮತ್ತು ರಾಯಭಾರ ಕಚೇರಿ ಏಕೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಝಾಹಿದ್ ಪ್ರಶ್ನಿಸಿದ್ದಾರೆ. ಸೌದಿಯಲ್ಲಿ ಪಾಕಿಸ್ತಾನಿಗಳಿಗೆ ಗರಿಷ್ಠ ಗಲ್ಲು ಶಿಕ್ಷೆ ಆಗುತ್ತಿರುವುದು ಪಾಕಿಸ್ತಾನ ಸರಕಾರಕ್ಕೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ತನ್ನ ನಾಗರಿಕರನ್ನು ರಕ್ಷಿಸುವಲ್ಲಿ ಪಾಕಿಸ್ತಾನ ಸರಕಾರ ವಿಫಲವಾಗಿದೆ. ಸಣ್ಣಪುಟ್ಟ ಅಪರಾಧಗಳನ್ನು ಮಾಡಿ ಜೈಲಿನಲ್ಲಿರುವ ಮತ್ತು ಕೇವಲ ದಂಡ ಪಾವತಿಸಿ ಹೊರಬರಬಹುದಾದ ಜನರಿಗೆ ಸರಕಾರದ ಸಹಾಯ ದೊರಕಬೇಕು.
ಸಂಪಾದಕೀಯ ನಿಲುವುಭಾರತವು ಮಾಡಬೇಕಾದುದನ್ನು ಸೌದಿ ಅರೇಬಿಯಾ, ಒಂದು ಇಸ್ಲಾಮಿಕ್ ದೇಶ ಮಾಡುತ್ತಿದೆ! ಭಾರತವು ಇದರಿಂದ ಪಾಠ ಕಲಿಯಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation