ರಾಷ್ಟ್ರ-ಧರ್ಮಪ್ರೇಮಿಗಳ ಮುಂದಾಳತ್ವದಿಂದ ದೆಹಲಿಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಉತ್ಸುಕತೆ ಉತ್ತುಂಗಕ್ಕೆ! : SRSmahotsav Delhi 2025

ಈಗ ಕಾಯುವಿಕೆ ಕೇವಲ ಒಂದು ದಿನ!

ನವದೆಹಲಿ (ಇಂದ್ರಪ್ರಸ್ಥ) – ಇಲ್ಲಿನ ಭಾರತ ಮಂಟಪಮ್ ನಲ್ಲಿ ಡಿಸೆಂಬರ್ ೧೩ ಮತ್ತು ೧೪ ರಂದು ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ರಾಷ್ಟ್ರ-ಧರ್ಮ ಪ್ರೇಮಿಗಳ ಮುಂದಾಳತ್ವದಿಂದಾಗಿ ಮಹೋತ್ಸವಕ್ಕಾಗಿ ಮಾಡಲಾಗುತ್ತಿರುವ ನೋಂದಣಿ ದಾಖಲೆ ಮಟ್ಟವನ್ನು ತಲುಪುತ್ತಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಉತ್ತರ ಭಾರತದ ರಾಜ್ಯಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಮಹೋತ್ಸವದ ಕುರಿತು ಅನೇಕರ ಅಭಿಪ್ರಾಯಗಳು ಬರುತ್ತಿದ್ದು, ಅವರಿಂದ ಮಹೋತ್ಸವದ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ವಿವಿಧ ಯುಟ್ಯೂಬ್ ವಾಹಿನಿಗಳ ಮೂಲಕ ರಾಷ್ಟ್ರ-ಧರ್ಮಪ್ರೇಮಿಗಳು ಮಹೋತ್ಸವದ ಪ್ರಚಾರವನ್ನು ಮಾಡುತ್ತಿದ್ದಾರೆ. ಕೆಲವು ‘ಇನ್ಫ್ಲುಯೆನ್ಸರ್ಗಳು’ (ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಪ್ರಭಾವವನ್ನು ಸೃಷ್ಟಿಸುವವರು) ಸ್ವಯಂಪ್ರೇರಿತರಾಗಿ ಮಹೋತ್ಸವದ ಜಾಗೃತಿಯ ಕುರಿತು ವಿಡಿಯೋಗಳನ್ನು ತಯಾರಿಸಿ ಪ್ರಸಾರ ಮಾಡುತ್ತಿದ್ದಾರೆ. ಮಹೋತ್ಸವದಿಂದಾಗಿ ದೆಹಲಿಯ ವಾತಾವರಣವು ಕೇಸರಿಮಯವಾಗಿದೆ.

ಅನೇಕರಿಂದ ‘ದೆಹಲಿಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಿಂದ ಹೊರಹೊಮ್ಮುವ ಶಂಖನಾದವು ಅಂತರಾಷ್ಟ್ರೀಯ ಮಟ್ಟದಲ್ಲಿ ಘೋಷಣೆ ಮೊಳಗಿಸುವಂತೆ ಮಾಡಲು ನಾವು ಸಿದ್ಧತೆ ಮಾಡುತ್ತಿದ್ದೇವೆ’ ಎಂಬ ಅಭಿಪ್ರಾಯಗಳು ಬರುತ್ತಿವೆ. ಗೋವಾದಲ್ಲಿ ನಡೆದ ಮಹೋತ್ಸವವು ಬೀಜ ರೂಪದಲ್ಲಿತ್ತು. ‘ಈಗ ದೆಹಲಿಯ ಶಂಖನಾದ ಮಹೋತ್ಸವವು ಸನಾತನ ರಾಷ್ಟ್ರರೂಪಿ ವೃಕ್ಷದ ಕಡೆಗೆ ಸಾಗಲಿದೆ,’ ಎಂದು ಹಿಂದುತ್ವನಿಷ್ಠರ ಅಭಿಪ್ರಾಯವಾಗಿದೆ. ಈ ಮಹೋತ್ಸವದಲ್ಲಿ ಅನೇಕ ಪ್ರಖರ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿಗಳು, ಗಣ್ಯ ವ್ಯಕ್ತಿಗಳು, ಮಾಜಿ ಸೇನಾಧಿಕಾರಿಗಳು ಸಂಸ್ಕೃತಿ, ಶೌರ್ಯ, ಸಂರಕ್ಷಣೆಯ ದೃಷ್ಟಿಯಿಂದ ಯಾವ ಮಾರ್ಗದರ್ಶನ ನೀಡಲಿದ್ದಾರೆ? ಎಂಬುದರ ಕಡೆಗೆ ಎಲ್ಲರ ಗಮನ ನೆಟ್ಟಿದೆ. ಅನೇಕ ಜನರು ‘ನಮಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ನೋಡಲು ಸಾಧ್ಯವಿದೆಯೇ?’, ‘ನಮಗೆ ಮಹೋತ್ಸವದ ‘ಲಿಂಕ್’ ಸಿಗುವುದೇ?’ ಎಂದು ವಿಚಾರಿಸುತ್ತಿದ್ದಾರೆ.

ಈ ಮಹೋತ್ಸವದ ಲಾಭವನ್ನು ಎಲ್ಲೆಡೆಯ ಹಿಂದೂಗಳು ಪಡೆಯಲು ಅನುಕೂಲವಾಗುವಂತೆ, ಕೆಳಗಿನ ‘ಲಿಂಕ್’ಅನ್ನು ಒದಗಿಸಲಾಗಿದೆ.


www.sanatanrashtrashankhnad.in