ವಿಶೇಷ ತನಿಖಾ ದಳದ ತನಿಖೆಯಿಂದ ಬಹಿರಂಗ

ಬೆಂಗಳೂರು – ಧರ್ಮಸ್ಥಳ ಪ್ರಕರಣ ಒಂದು ಷಡ್ಯಂತ್ರವಾಗಿತ್ತು. ಈ ಸಂಪೂರ್ಣ ವಿವಾದವನ್ನು ಧರ್ಮಸ್ಥಳ ವಿರೋಧಿ ಕಾರ್ಯಕರ್ತರು ಸೃಷ್ಟಿಸಿದ್ದರು ಎಂಬುದು ಬಹಿರಂಗವಾಗಿದೆ. ಈ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ವಿಶೇಷ ತನಿಖಾ ದಳವು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಈ ಮಾಹಿತಿ ನೀಡಲಾಗಿದೆ. ವರದಿಯಲ್ಲಿ ಸದ್ಯ ದೇವಸ್ಥಾನದ ಆಡಳಿತವನ್ನು ನಿರಪರಾಧಿ ಎಂದು ತೀರ್ಮಾನಿಸಲಾಗಿದೆ. ತನಿಖೆ ಪೂರ್ಣಗೊಳಿಸಲು ದಳವು ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಕೇಳಿದೆ.
ದೂರುದಾರ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮತ್ತಣ್ಣನವರ, ಜಯಂತ, ವಿಠ್ಠಲ ಗೌಡ ಮತ್ತು ಸುಜಾತಾ ಭಟ್ ಸೇರಿದಂತೆ ಒಟ್ಟು 6 ಜನರನ್ನು ಆರೋಪಿಗಳನ್ನಾಗಿ ಮಾಡಿದೆ. ತನಿಖೆಯಲ್ಲಿ, ಚಿನ್ನಯ್ಯನ ಮೇಲೆ ಒತ್ತಡ ಹೇರಲಾಗಿತ್ತು, ಅವನಿಗೆ ಹಣ ನೀಡಲಾಗಿತ್ತು ಮತ್ತು ಸುಳ್ಳು ಹೇಳಿಕೆಗಳನ್ನು ನೀಡಲು ಒತ್ತಾಯಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಷಡ್ಯಂತ್ರ ನಡೆಯುತ್ತಿದೆಯೆಂದು ನಾನು ಮೊದಲೇ ಹೇಳಿದ್ದೆ! – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಾನು ಈಗಾಗಲೇ ವಿಧಾನ ಸಭೆಯಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದೆ ಮತ್ತು ಈಗ ಸತ್ಯ ಹೊರಬಂದಿದೆ. ನ್ಯಾಯ ಸಿಕ್ಕಿದೆ; ಆದರೆ ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ಇಂತಹ ಪಿತೂರಿಗಳು ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಗಳಿಗೆ ಹಾನಿಯನ್ನುಂಟುಮಾಡುತ್ತವೆ. ಈ ಪಿತೂರಿಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ಮತ್ತು ಭಾಜಪ ನಡುವಿನ ಭಿನ್ನಾಭಿಪ್ರಾಯಗಳು ಸಹ ಇರಬಹುದು. ಮುಂದಿನ ತನಿಖೆಯಿಂದಲೇ ಸಂಪೂರ್ಣ ಚಿತ್ರಣ ಬಹಿರಂಗವಾಗಲಿದೆ ಎಂದು ಹೇಳಿದರು.
ವರದಿಯಲ್ಲಿ ಏನಿದೆ?೧. ಆರೋಪಿಗಳು ಒಂದು ತಲೆಬುರುಡೆಯ ವ್ಯವಸ್ಥೆ ಮಾಡಿ, ಅದನ್ನು ಸಾಕ್ಷಿಯಾಗಿ ಮಂಡಿಸಿದರು. ಅಲ್ಲಲ್ಲಿ ನಕಲಿ ಪುರಾವೆಗಳನ್ನು ಬಿತ್ತಿ ಮತ್ತು ಕ್ಯಾಮೆರಾದಲ್ಲಿ ಮೊದಲೇ ಕಲಿಸಲಾದ ಹೇಳಿಕೆಗಳನ್ನು ನೀಡಲಾಯಿತು. ೨. ಈ ಪಿತೂರಿಯ ಅನೇಕ ಸಭೆಗಳು ಮಹೇಶ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ನಡೆದಿದ್ದವು. ೩. ಈ ಪ್ರಕರಣದಲ್ಲಿ ಬ್ಯಾಂಕ್ ವಹಿವಾಟಿನ ಪುರಾವೆಗಳು, ಎಲೆಕ್ಟ್ರಾನಿಕ್ ಡೇಟಾ, ವಿಡಿಯೋ ಮತ್ತು ಸಾಕ್ಷಿದಾರರ ಹೇಳಿಕೆಗಳನ್ನು ಸಾಕ್ಷಿಯಾಗಿ ಸ್ವೀಕರಿಸಲಾಗಿದೆ. ಏನಿದು ಪ್ರಕರಣ?ಮಂಗಳೂರಿನ ನೇತ್ರಾವತಿ ನದಿಯ ದಡದಲ್ಲಿ ಧರ್ಮಸ್ಥಳ ದೇವಸ್ಥಾನವಿದೆ. ಈ ದೇವಸ್ಥಾನವು ಭಗವಾನ್ ಶಿವನ ಒಂದು ರೂಪವಾದ ಶ್ರೀ ಮಂಜುನಾಥನದ್ದಾಗಿದೆ. ಜುಲೈ ೪ ರಂದು ಇಲ್ಲಿನ ಒಬ್ಬ ಮಾಜಿ ನೈರ್ಮಲ್ಯ ಕಾರ್ಮಿಕನೊಬ್ಬನು ಪೊಲೀಸರಿಗೆ ಪತ್ರ ಬರೆದು, ಅನೇಕ ಕೊಲೆಗಳನ್ನು ಮಾಡಿ ಮೃತದೇಹಗಳನ್ನು ದೇವಸ್ಥಾನದ ಆವರಣದಲ್ಲಿ ಹೂಳಲಾಗಿದೆ ಎಂದು ಆರೋಪಿಸಿದ್ದನು. ಸರಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ವಿಚಾರಣೆ ಪ್ರಾರಂಭಿಸಿತು. ಆರೋಪಿ ಚಿನ್ನಯ್ಯನು ತನ್ನ ಮೇಲೆ ಒತ್ತಡ ಹೇರಿ ೧೦೦ ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರ ಮೃತದೇಹಗಳನ್ನು ಹೂಳಲಾಗಿತ್ತು ಎಂದು ಆರೋಪಿಸಿದ್ದನು. ತಂಡವು ಇಲ್ಲಿಯವರೆಗೆ ೧೭ ಸ್ಥಳಗಳಲ್ಲಿ ಉತ್ಖನನ ಮಾಡಿದೆ. ಅವುಗಳಲ್ಲಿ ೨ ಸ್ಥಳಗಳಲ್ಲಿ ಕೇವಲ ಪುರುಷರ ಅಸ್ಥಿಪಂಜರಗಳು ಮಾತ್ರ ಪತ್ತೆಯಾಗಿವೆ. |
ಸಂಪಾದಕೀಯ ನಿಲುವುಹಿಂದೂಗಳ ದೇವಸ್ಥಾನಗಳನ್ನು ಅಪಖ್ಯಾತಿಗೊಳಿಸುವವರು ಯಾರು? ಎನ್ನುವುದು ಬಹಿರಂಗಗೊಂಡು ಅವರಿಗೆ ಗಲ್ಲು ಶಿಕ್ಷೆಯೇ ವಿಧಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!