ವಿವಿಧ ಸ್ಥಳಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಾವಿರಾರು ಹಿಂದೂತ್ವನಿಷ್ಠ ಕಾರ್ಯಕರ್ತರು ಭಾಗಿ!

ಮುಂಬಯಿ – ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ‘ಲವ್ ಜಿಹಾದ್’ ಪ್ರಕರಣಗಳ ಹಿನ್ನೆಲೆಯಲ್ಲಿ, 20 ಜಿಲ್ಲೆಗಳ 160 ಕ್ಕೂ ಹೆಚ್ಚು ಹಿಂದೂತ್ವನಿಷ್ಠ ಸಂಘಟನೆಗಳು ಒಗ್ಗೂಡಿ, ಚಳಿಗಾಲದ ಅಧಿವೇಶನದಲ್ಲಿ ಕಟ್ಟುನಿಟ್ಟಾದ ‘ಲವ್ ಜಿಹಾದ್ ವಿರೋಧಿ ಕಾನೂನು’ ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ಬಲವಾದ ಬೇಡಿಕೆಯನ್ನು ಸಲ್ಲಿಸಿವೆ. ಈ ಪ್ರತಿಭಟನೆಗಳಲ್ಲಿ 1 ಸಾವಿರದ 600 ಕ್ಕೂ ಹೆಚ್ಚು ಹಿಂದೂತ್ವನಿಷ್ಠ ಕಾರ್ಯಕರ್ತರು ಭಾಗವಹಿಸಿದ್ದು, ಯುವತಿಯರು ಮತ್ತು ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಮಾದರಿಯಂತೆ ಮಹಾರಾಷ್ಟ್ರದಲ್ಲಿ ಕೂಡಲೇ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕ ಶ್ರೀ. ಸುನಿಲ ಘನವಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ,
1. ಜಳಗಾಂವ್, ಧುಳೆ, ಛತ್ರಪತಿ ಸಂಭಾಜಿನಗರ, ಜಾಲ್ನಾ, ಅಹಿಲ್ಯಾನಗರ, ಅಕೋಲಾ, ಅಮರಾವತಿ, ಚಂದ್ರಪುರ, ನಾಗ್ಪುರ, ಸತಾರಾ, ಪುಣೆ, ಸೋಲಾಪುರ, ನಾಸಿಕ್, ರತ್ನಾಗಿರಿ, ಸಿಂಧುದುರ್ಗ ಸೇರಿದಂತೆ 20 ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಹಿಂದೂತ್ವನಿಷ್ಠ ಕಾರ್ಯಕರ್ತರು ಒಗ್ಗೂಡಿ ಸ್ಥಳೀಯ ಜಿಲ್ಲೆ ಮತ್ತು ತಾಲೂಕು ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿಗಳನ್ನು ಸಲ್ಲಿಸಿದ್ದಾರೆ.
2. ಹಿಂದೂತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಗೃಹ ಇಲಾಖೆಗೆ ನೀಡಿದ ಮನವಿಗಳಲ್ಲಿ ಲವ್ ಜಿಹಾದ್‌ಗೆ ಬಲಿಯಾದ ಹಿಂದೂ ಯುವತಿಯರ ವಿವಿಧ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
3. ಅಹಮದ್‌ನಗರದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಇಚಲಕರಂಜಿಯಲ್ಲಿ 6 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಕೊಲ್ಲಾಪುರದ ಶಾಹುವಾಡಿಯ 14 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಹಾಗೂ ಶ್ರದ್ಧಾ ವಾಲ್ಕರ್, ರೂಪಾಲಿ ಚಂದನ್‌ಶಿವೆ, ತನುಶ್ರೀ ಶರ್ಮಾ ಅವರ ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿ, ‘ಲವ್ ಜಿಹಾದ್’ ವೈಯಕ್ತಿಕ ಅಪರಾಧವಲ್ಲ, ಬದಲಾಗಿ ಒಂದು ಸಂಘಟಿತ ಷಡ್ಯಂತ್ರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
4. ಮಹಾರಾಷ್ಟ್ರ ರಾಜ್ಯದಲ್ಲಿಯೂ ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಮಾದರಿಯ ಮೇಲೆ ಲವ್ ಜಿಹಾದ್ ವಿರೋಧಿ ಕಾನೂನಿನಲ್ಲಿ ಜೀವಾವಧಿ ಶಿಕ್ಷೆಯ ಅವಕಾಶ ಇರಬೇಕು, ಅಪರಾಧಗಳನ್ನು ದಂಡಾರ್ಹ ಮತ್ತು ಜಾಮೀನು ರಹಿತ ಎಂದು ಘೋಷಿಸಬೇಕು, ಸಂತ್ರಸ್ತರು ಸೇರಿದಂತೆ ಯಾವುದೇ ನಾಗರಿಕರಿಗೆ ದೂರು ನೀಡುವ ಹಕ್ಕಿರಬೇಕು, ವಿಶೇಷ ಪೊಲೀಸ್ ಶಾಖೆ ಮತ್ತು ‘ರಣರಾಗಿಣಿ’ ಪಡೆಯನ್ನು ಸ್ಥಾಪಿಸಬೇಕು, ವಿದೇಶದಿಂದ ಬರುವ ಹಣ, ಜಿಹಾದಿ ವ್ಯವಸ್ಥೆ ಮತ್ತು ಕಳ್ಳಸಾಗಣೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ತ್ವರಿತ ದೂರುಗಳಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಪ್ರಸಾರ ಮಾಡಬೇಕು ಎಂಬ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಜನಭಾವನೆಗಳಿಗೆ ಸ್ಪಂದಿಸಿ, ಶಾಸಕರು-ಮಂತ್ರಿಗಳಿಂದ ‘ಲವ್ ಜಿಹಾದ್ ವಿರೋಧಿ ಕಾನೂನು’ ಮತ್ತು ಅಕ್ರಮ ಭೂಕಬಳಿಕೆ ನಿಷೇಧ ಕಾನೂನು ಜಾರಿಗೊಳಿಸುವ ಭರವಸೆ
ಲವ್ ಜಿಹಾದ್ ವಿರೋಧಿ ಕಾನೂನು ಮತ್ತು ಅಕ್ರಮ ಭೂಕಬಳಿಕೆ ನಿಷೇಧ ಕಾನೂನಿನ ಕುರಿತು ರಾಜ್ಯಾದ್ಯಂತದ ವಿವಿಧ ಶಾಸಕರು, ಮಂತ್ರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಈ ಮನವಿಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡುಬಂದಿದೆ. ಸಚಿವ ಗುಲಾಬರಾವ್ ಪಾಟೀಲ್, ಶಾಸಕರಾದ ಅಮೊಲ್ ಜಾವಳೆ, ಸುರೇಶ್ ಭೋಳೆ, ಅನೂಪ್ ಅಗರ್ವಾಲ್, ಪ್ರವೀಣ್ ದಟ್ಕೆ, ಕೃಷ್ಣಾಜಿ ಖೋಪಡೆ, ಹಾಗೆಯೇ ಪಾಲಕ ಸಚಿವರಾದ ಜಯಕುಮಾರ್ ಗೋರೆ, ವಿಜಯಕುಮಾರ ದೇಶಮುಖ್, ಸುಭಾಷ್ ದೇಶಮುಖ್, ದೇವೇಂದ್ರ ಕೋಠೆ, ಕಿಶೋರ್ ಜೊರ್ಗೆವಾರ್, ಕರಣ್ ದೇವತಳೆ, ದೇವರಾವ್ ಭೋಂಗ್ಳೆ, ಸುಧೀರ್ ಮುನಗಂಟಿವಾರ್, ವಿಕ್ರಮಸಿಂಗ್ ಪಾಚಪುತೆ ಮತ್ತು ಸಂಸದರಾದ ಅನೂಪ್ ಧೋತ್ರೆ ಮುಂತಾದವರು ಈ ವಿಷಯದಲ್ಲಿ ಗಂಭೀರ ನಿಲುವು ತಳೆದಿದ್ದಾರೆ. ಅನೇಕ ಜನಪ್ರತಿನಿಧಿಗಳು ಈ ಕಾನೂನನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಖಚಿತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದು, ಕೆಲವರು ಈ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಭರವಸೆ ನೀಡಿದ್ದಾರೆ. ಎಲ್ಲರೂ ಒಗ್ಗೂಡಿ ಈ ಎರಡೂ ಮಹತ್ವದ ಕಾನೂನುಗಳ ಬಗ್ಗೆ ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!