ರೋಹಿಂಗ್ಯಾಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಹೇಳಿತ್ತಾ ೪೪ ನಿವೃತ್ತ ನ್ಯಾಯಾಧೀಶರಿಂದ ಸೂರ್ಯಕಾಂತ ಅವರಿಗೆ ಬೆಂಬಲ

  • ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ರೋಹಿಂಗ್ಯಾಗಳ ವಿರುದ್ಧ ನೀಡಿದ ಹೇಳಿಕೆಯ ಪ್ರಕರಣ

  • ಇತರ ನಿವೃತ್ತ ನ್ಯಾಯಾಧೀಶರು ವಿರೋಧ ವ್ಯಕ್ತಪಡಿಸಿದ್ದರು

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ರೋಹಿಂಗ್ಯಾಗಳ ಕುರಿತು ಆಲಿಕೆಯ ಸಮಯದಲ್ಲಿ ಮಾಡಿದ ಟೀಕೆಗಳಿಂದಾಗಿ ವಿವಾದ ಹುಟ್ಟಿಕೊಂಡಿದೆ. ಅವರ ವಿರುದ್ಧ ಪ್ರಚಾರ ನಡೆಯುತ್ತಿದೆ. ಇದಕ್ಕೆ ಉತ್ತರವಾಗಿ, ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ೪೪ ನಿವೃತ್ತ ನ್ಯಾಯಾಧೀಶರು ಒಗ್ಗೂಡಿ ಹೇಳಿಕೆಯನ್ನು ಬಿಡುಗಡೆ ಮಾಡಿ ವಿರೋಧವನ್ನು ಖಂಡಿಸಿದ್ದಾರೆ.

ನಿವೃತ್ತ ನ್ಯಾಯಾಧೀಶರು ಏನು ಹೇಳಿದರು?

ಈ ನಿವೃತ್ತ ನ್ಯಾಯಾಧೀಶರು ಜಂಟಿ ಹೇಳಿಕೆಯಲ್ಲಿ ಮುಂದಿನಂತೆ ಹೇಳಿದ್ದರು:

. ನ್ಯಾಯಾಲಯದ ಕಾರ್ಯಕಲಾಪವನ್ನು ವಿಮರ್ಶೆ ಮಾಡಬಹುದು; ಆದರೆ ಹೆಚ್ಚಿನ ಟೀಕೆಗಳು ಮೂಲ ವಿಷಯದಿಂದ ದೂರ ಸರಿದು ನ್ಯಾಯಾಂಗ ವ್ಯವಸ್ಥೆಯನ್ನು ದೋಷಪೂರಿತವಾಗಿ ತೋರಿಸಲು ಪ್ರಯತ್ನಿಸುತ್ತಿವೆ. ಮುಖ್ಯ ನ್ಯಾಯಮೂರ್ತಿಯವರು ನುಸುಳುಕೋರರಾದ ರೋಹಿಂಗ್ಯಾಗಳ ಕುರಿತು ಮೂಲಭೂತ ಕಾನೂನು ಅಂಶವನ್ನು ಎತ್ತಿ ತೋರಿಸಿದ್ದಾರೆ. ರೋಹಿಂಗ್ಯಾಗಳಿಗೆ ಯಾವುದೇ ಹಕ್ಕು ಅಥವಾ ಸೌಲಭ್ಯವನ್ನು ನೀಡುವ ಮೊದಲು ಈ ಅಂಶವನ್ನು ಎತ್ತಿ ಹಿಡಿಯುವುದು ಸರಿಯಾಗಿದೆ.

. ಭಾರತದ ನೆಲದಲ್ಲಿರುವ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಕಾಣೆಯಾಗಿಸುವುದು ಅಥವಾ ಅಮಾನುಷವಾಗಿ ನಡೆಸಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ ಎಂದು ಪೀಠವು ಸ್ಪಷ್ಟವಾಗಿ ಹೇಳಿತ್ತು. ಈ ಸ್ಪಷ್ಟತೆಯನ್ನು ಅನೇಕ ಟೀಕಾಕಾರರು ನಿರ್ಲಕ್ಷಿಸಿದ್ದಾರೆ.

. ಭಾರತೀಯ ಕಾನೂನಿನ ಪ್ರಕಾರ, ರೋಹಿಂಗ್ಯಾಗಳನ್ನು ಆಶ್ರಿತರು ಎಂದು ಪರಿಗಣಿಸಲಾಗುವುದಿಲ್ಲ. ಅವರು ಯಾವುದೇ ಶಾಸನಬದ್ಧ ಆಶ್ರಯ ವ್ಯವಸ್ಥೆಯ ಮೂಲಕ ದೇಶಕ್ಕೆ ಬಂದಿಲ್ಲ ಮತ್ತು ಅನೇಕರು ಅನಿಯಮಿತ ಅಥವಾ ಅಕ್ರಮ ಮಾರ್ಗಗಳ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ಕೇವಲ ಹೇಳಿಕೊಂಡ ಮಾತ್ರಕ್ಕೆ ಅವರಿಗೆ ಆಶ್ರಿತರ ಸ್ಥಾನಮಾನ ಸಿಗಲಾರದು. ಭಾರತವು ೧೯೫೧ ರ ವಿಶ್ವಸಂಸ್ಥೆಯ ಆಶ್ರಯ ಒಪ್ಪಂದ ಅಥವಾ ೧೯೬೭ ರಲ್ಲಿ ಈ ಕುರಿತು ಹೊರಡಿಸಲಾದ ಪ್ರೋಟೋಕಾಲ್ (ಶಿಷ್ಟಾಚಾರ) ಅನ್ನು ಅನುಸರಿಸುತ್ತಿಲ್ಲ. ಆದ್ದರಿಂದ, ಭಾರತದ ಜವಾಬ್ದಾರಿಯು ದೇಶೀಯ ಕಾನೂನುಗಳು, ಸಂವಿಧಾನ ಮತ್ತು ಸಾಮಾನ್ಯ ಮಾನವೀ ಹಕ್ಕುಗಳ ತತ್ತ್ವಗಳ ಮೇಲಾಧಾರಿತವಾಗಿದೆ.

. ದೇಶದೊಳಗೆ ಅಕ್ರಮವಾಗಿ ಬಂದಿರುವವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಇತರೆ ಗುರುತಿನ ಸಾಧನಗಳು ಹೇಗೆ ಲಭ್ಯವಾದವು? ಈ ಸಾಧನಗಳನ್ನು ನಾಗರಿಕರಿಗಾಗಿ ಅಥವಾ ಕಾನೂನುಬದ್ಧವಾಗಿ ದೇಶದಲ್ಲಿ ವಾಸಿಸುವವರಿಗಾಗಿ ಮೀಸಲಿಟ್ಟಿರುವುದರಿಂದ ನುಸುಳುಕೋರರಿಂದ ಈ ಯೋಜನೆಗಳಿಗೆ ಅಡ್ಡಿ ಉಂಟಾಗಬಹುದು.

ಮುಖ್ಯ ನ್ಯಾಯಮೂರ್ತಿಗಳು ಏನು ಹೇಳಿದ್ದರು?

ಡಿಸೆಂಬರ್ ೨ ರಂದು ರೋಹಿಂಗ್ಯಾಗಳ ಪೈಕಿ ಕೆಲವು ವ್ಯಕ್ತಿಗಳು ಕಸ್ಟಡಿಯಿಂದ ಕಾಣೆಯಾಗಿದ್ದಾರೆ ಎನ್ನಲಾದ ಪ್ರಕರಣದ ಆಲಿಕೆ ನಡೆಯುತ್ತಿತ್ತು. ಆ ಸಮಯದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಈ ಸಮುದಾಯಕ್ಕೆ ಆಶ್ರಯದ ಸ್ಥಾನಮಾನ ನೀಡುವ ಪ್ರಶ್ನೆಯ ಕುರಿತು ಸಂದೇಹ ವ್ಯಕ್ತಪಡಿಸಿತು. ವಿಚಾರಣೆಯ ಸಮಯದಲ್ಲಿ ಅವರು ಮೌಖಿಕವಾಗಿ ಕೇಳಿದ್ದೇನೆಂದರೆ, ‘ನುಸುಳುಕೋರರನ್ನು’ ಸಮ್ಮಾನಪೂರ್ವಕವಾಗಿ ಸ್ವಾಗತಿಸುವುದು ಅಪೇಕ್ಷಿತವಿದೆಯೇ?

ಕೆಲವು ನಿವೃತ್ತ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದರು!

ಡಿಸೆಂಬರ್ ೫ ರಂದು ಕೆಲವು ನಿವೃತ್ತ ನ್ಯಾಯಾಧೀಶರು, ಹಿರಿಯ ನ್ಯಾಯವಾದಿಗಳು ಮತ್ತು ಕಾನೂನು ಪಂಡಿತರು ಬಹಿರಂಗ ಪತ್ರ ಬರೆದು ಈ ಹೇಳಿಕೆಗಳನ್ನು ಅಸಂವೇದನಾಶೀಲ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದರು. ಹಿಂಸೆ ಮತ್ತು ಕಿರುಕುಳದಿಂದ ಪಲಾಯನ ಮಾಡಿದ ಜನರ ಆತ್ಮಗೌರವವನ್ನು ನಿರಾಕರಿಸುವುದರಿಂದ ನ್ಯಾಯಾಲಯಗಳ ಮೇಲಿರುವ ಅವರ ನಂಬಿಕೆ ಕಡಿಮೆಯಾಗುತ್ತದೆ. ಮುಖ್ಯ ನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ಸಂವಿಧಾನಾತ್ಮಕ ನೈತಿಕತೆ ಮತ್ತು ಮಾನವ ಘನತೆಯ ಕಡೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಬೇಕು ಎಂದು ಈ ನಿವೃತ್ತ ನ್ಯಾಯಾಧೀಶರು ವಿನಂತಿಸಿದ್ದರು.