‘ವಂದೇ ಮಾತರಮ್’ಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಪ್ರಧಾನಿ ಮೋದಿ ಅವರಿಂದ ಕಾಂಗ್ರೆಸ್ ಕುರಿತು ಟೀಕೆ

ನವದೆಹಲಿ – ‘ವಂದೇ ಮಾತರಮ್’ಗೆ 50 ವರ್ಷ ಪೂರ್ಣಗೊಂಡಾಗ, ನಮ್ಮ ದೇಶವು ಗುಲಾಮಗಿರಿಯಲ್ಲಿ ಬದುಕುತ್ತಿತ್ತು. ದೇಶದಲ್ಲಿ ಪಾರತಂತ್ರ್ಯವಿತ್ತು. ‘ವಂದೇ ಮಾತರಮ್’ಗೆ 100 ವರ್ಷವಾದಾಗ, ದೇಶವು ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯವನ್ನು ಅನುಭವಿಸುತ್ತಿತ್ತು. ಆ ಸಮಯದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸವಾಯಿತು. ದೇಶಭಕ್ತರನ್ನು ಜೈಲಿಗೆ ಹಾಕಲಾಗಿತ್ತು. ದುರದೃಷ್ಟವಶಾತ್, ಆ ಸಮಯದಲ್ಲಿ ನಾವು ಒಂದು ಕರಾಳ ಅವಧಿಯನ್ನು ಅನುಭವಿಸಿದ್ದೇವೆ. ‘ವಂದೇ ಮಾತರಮ್’ ಅದೇ ಹಾಡು, ಅದು 1947 ರಲ್ಲಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡಿದರು. ‘ವಂದೇ ಮಾತರಮ್’ಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಂದು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮೋದಿ ಅವರು ‘ವಂದೇ ಮಾತರಮ್’ ಹಾಡನ್ನು ಹೊಗಳುತ್ತಾ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
तुष्टिकरण की राजनीति के दबाव में कांग्रेस वंदेमातरम् के बंटवारे के लिए झुकी, इसीलिए कांग्रेस को एक दिन भारत के बंटवारे के लिए झुकना पड़ा। pic.twitter.com/mrf1mw6C6x
— Narendra Modi (@narendramodi) December 8, 2025
ನೆಹರೂ ಮುಸ್ಲಿಂ ಲೀಗ್ ಮುಂದೆ ಮಂಡಿಯೂರಿದರು!
ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ, ಮೊಹಮ್ಮದ್ ಅಲಿ ಜಿನ್ನಾ ಅವರು ಅಕ್ಟೋಬರ್ 15, 1936 ರಂದು ಲಕ್ಷ್ಮಣಪುರದಿಂದ (ಲಕ್ನೋದಿಂದ) ‘ವಂದೇ ಮಾತರಮ್’ ವಿರುದ್ಧ ಘೋಷಣೆ ಕೂಗಿದರು. ಆಗಿನ ಕಾಂಗ್ರೆಸ್ ಅಧ್ಯಕ್ಷರಾದ ನೆಹರೂ ಅವರಿಗೆ ತಮ್ಮ ಸಿಂಹಾಸನ ಅಲುಗಾಡುತ್ತಿರುವುದು ಕಂಡಿತು. ನೆಹರೂ ಅವರು ಮುಸ್ಲಿಂ ಲೀಗ್‌ನ ಆಧಾರರಹಿತ ಹೇಳಿಕೆಗಳಿಗೆ ತಕ್ಕ ಉತ್ತರ ನೀಡುವ ಬದಲು, ಅದನ್ನು ಖಂಡಿಸುವ ಬದಲು, ತದ್ವಿರುದ್ಧವಾಗಿ ನಡೆದುಕೊಂಡರು. ಅವರು ‘ವಂದೇ ಮಾತರಮ್’ ಬಗ್ಗೆ ವಿಚಾರಣೆ ಪ್ರಾರಂಭಿಸಿದರು. ನೆಹರೂ ಅವರು 5 ದಿನಗಳ ನಂತರ ನೇತಾಜಿ ಬೋಸ್ ಅವರಿಗೆ ಪತ್ರ ಬರೆದರು. ಅದರಲ್ಲಿ ಜಿನ್ನಾ ಅವರ ಭಾವನೆಗಳಿಗೆ ಸಹಮತ ವ್ಯಕ್ತಪಡಿಸಿ, ‘ವಂದೇ ಮಾತರಮ್’ ನ ಹಿನ್ನೆಲೆ ‘ಆನಂದಮಠ’ ಕಾದಂಬರಿಯಿಂದ ಬಂದಿರುವುದರಿಂದ ಮುಸ್ಲಿಮರಿಗೆ ನೋವಾಗಬಹುದು. ಮುಸ್ಲಿಮರು ಪ್ರಚೋದನೆಗೊಳ್ಳುತ್ತಾರೆ’ ಎಂದು ಬರೆದರು. ಇದರ ನಂತರ ಕಾಂಗ್ರೆಸ್‌ನ ಹೇಳಿಕೆ ಬಂದಿತು, ಅಕ್ಟೋಬರ್ 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದು, ಅದರಲ್ಲಿ ‘ವಂದೇ ಮಾತರಮ್’ ಬಳಕೆಯ ಬಗ್ಗೆ ಪರಿಶೀಲಿಸಲಾಗುವುದು. ಈ ಪ್ರಸ್ತಾವನೆಯ ವಿರುದ್ಧ ಜನರು ದೇಶಾದ್ಯಂತ ಪ್ರಭಾತಫೇರಿಗಳನ್ನು ನಡೆಸಿದರು; ಆದರೆ ಕಾಂಗ್ರೆಸ್ ‘ವಂದೇ ಮಾತರಮ್’ಗೆ ವಿರೋಧ ಮಾಡುವುದನ್ನು ಮುಂದುವರೆಸಿತು. ಕಾಂಗ್ರೆಸ್ ಮುಸ್ಲಿಂ ಲೀಗ್ ಮುಂದೆ ಮಂಡಿಯೂರಿತು ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ದುರದೃಷ್ಟವಶಾತ್, ಕಾಂಗ್ರೆಸ್‌ನ ನೀತಿಗಳು ಇಂದಿಗೂ ಅದೇ ರೀತಿ ಇವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!