ಪಳನಿ (ತಮಿಳುನಾಡು)ಯ ಆರಾಧ್ಯ ದೈವ ಶ್ರೀ ಕಾರ್ತಿಕೇಯ ಸ್ವಾಮಿಯ ಚರಣಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ ಪತ್ರ ಅರ್ಪಣೆ

ಶ್ರೀ ಕಾರ್ತಿಕೇಯ ದೇವಸ್ಥಾನದ ಹೊರಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಮಹೋತ್ಸವಕ್ಕಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಂದ ಪ್ರಾರ್ಥನೆ

ಪಳನಿ (ತಮಿಳುನಾಡು) – ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿರುವ ಶ್ರೀ ಕಾರ್ತಿಕೇಯ ಸ್ವಾಮಿಯ ದರ್ಶನ ಪಡೆದು, ಅವರ ಚರಣಕ್ಕೆ ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ ಪತ್ರವನ್ನು ಅರ್ಪಿಸಿದರು. ಇದರೊಂದಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಎದುರಾಗಬಹುದಾದ ಅಡೆ-ತಡೆಗಳನ್ನು ನಿವಾರಿಸುವಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಪ್ರಾರ್ಥಿಸಿದರು. ಪಳನಿಯಲ್ಲಿನ ಒಂದು ಬೆಟ್ಟದ ಮೇಲಿರುವ ಈ ದೇವಾಲಯದಲ್ಲಿ ಶ್ರೀ ಕಾರ್ತಿಕೇಯ ಸ್ವಾಮಿಯ ಜಾಗೃತ ಸ್ಥಾನವಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ರಾಜಾಲಂಕಾರದಲ್ಲಿರುವ ಶ್ರೀ ಕಾರ್ತಿಕೇಯ ಸ್ವಾಮಿಯ ದರ್ಶನ ಪಡೆದು, ಅವರ ಚರಣಕ್ಕೆ ಹಣ್ಣು ಮತ್ತು ಹೂವುಗಳನ್ನು ಅರ್ಪಿಸಿದರು. ಜೊತೆಗೆ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಮಹೋತ್ಸವವು ನಿರ್ವಿಘ್ನವಾಗಿ ನೆರವೇರಲು ಹಾಗೂ ಶೀಘ್ರದಲ್ಲಿಯೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವಂತೆ ಅವರು ಪ್ರಾರ್ಥಿಸಿದರು.

ಪಳನಿಯಲ್ಲಿನ ಕಾರ್ತಿಕೇಯ ಸ್ವಾಮಿಯವರ ಜಾಗೃತ ದೇವಾಲಯ ಮತ್ತು ಅಲ್ಲಿನ ‘ನವಪಾಷಾಣ ಮೂರ್ತಿ’

ತಮಿಳುನಾಡಿನ ಪಳನಿ ಎಂಬ ಸ್ಥಳದಲ್ಲಿ ಕಾರ್ತಿಕೇಯ ಸ್ವಾಮಿಯವರ ಜಾಗೃತ ದೇವಾಲಯವಿದೆ. ಇಲ್ಲಿ ಕಾರ್ತಿಕೇಯ ಸ್ವಾಮಿಯವರನ್ನು ‘ದಂಡಾಯುಧಪಾಣಿ’ ಎಂಬ ಹೆಸರಿನಿಂದ ಕರೆಯುತ್ತಾರೆ. ದೇವತೆಗಳ ಸೇನಾಧಿಪತಿಯಾದ ಯುವ ರೂಪದಲ್ಲಿರುವ ಕಾರ್ತಿಕೇಯ ಸ್ವಾಮಿಯವರು ಕೈಯಲ್ಲಿ ದಂಡ ಹಿಡಿದು ನಿಂತಿರುತ್ತಾರೆ. ಈ ಮೂರ್ತಿಯನ್ನು ‘ನವಪಾಷಾಣ ಮೂರ್ತಿ’ ಎಂದು ಹೇಳುತ್ತಾರೆ. ‘ನವ’ ಎಂದರೆ ‘೯’ ಮತ್ತು ‘ಪಾಷಾಣ’ ಎಂದರೆ ‘ವಿಷ’ ! ೯ ಪ್ರಕಾರದ ವಿಷಕಾರಿ ಆಯುರ್ವೇದ ಮೂಲಿಕೆಗಳನ್ನು ಉಪಯೋಗಿಸಿ ‘ಭೋಗರ್’ ಎಂಬ ಋಷಿಗಳು ಈ ಮೂರ್ತಿಯನ್ನು ನಿರ್ಮಿಸಿದ್ದಾರೆ. ಆದ್ದರಿಂದ ಇದನ್ನು ‘ನವಪಾಷಾಣ ಮೂರ್ತಿ’ ಎಂದು ಕರೆಯಲಾಗುತ್ತದೆ. ಈ ೯ ಪ್ರಕಾರದ ವಿಷಕಾರಿ ಆಯುರ್ವೇದ ಮೂಲಿಕೆಗಳು ದೇಹದಲ್ಲಾಗುವ ಎಲ್ಲ ಪ್ರಕಾರದ ವಿಷಬಾಧೆಗಳನ್ನು ದೂರ ಮಾಡುವ ಮೂಲಿಕೆಗಳಾಗಿವೆ.

ಕಾರ್ತಿಕೇಯ ಸ್ವಾಮಿಯವರ ರಾಜಾಲಂಕಾರ ಪೂಜೆ

ಪಳನಿ ರಾಜಾಲಂಕಾರ : ರಾಜಾಲಂಕಾರ ಧರಿಸಿದ ಶ್ರೀ ಕಾರ್ತಿಕೇಯ

ಪಳನಿಯಲ್ಲಿನ ಕಾರ್ತಿಕೇಯನಿಗೆ ಪ್ರತಿದಿನ ಸಂಜೆ ೬ ಗಂಟೆಗೆ ‘ರಾಜಾಲಂಕಾರ’ ಮಾಡಲಾಗುತ್ತದೆ. ಕಾರ್ತಿಕೇಯನಿಗೆ ಒಂದು ಮೇಲುಡುಗೆ, ಸೊಂಟಕ್ಕೆ ಕೆಂಪು ಬಣ್ಣದ ವಸ್ತ್ರದ ಪಟ್ಟಿ ಮತ್ತು ಧೋತಿ, ಹಾಗೂ ತಲೆಯ ಮೇಲೆ ತುರಾಯಿ ಇರುವ ರಾಜ ಮುಕುಟದಂತಹ ವೇಷಭೂಷಣವಿರುತ್ತದೆ.