‘ಜಗತ್ತು ಧಾರ್ಮಿಕ ಪರಂಪರೆಯ ಸ್ಥಳಗಳ ಸಂರಕ್ಷಣೆ ತನ್ನ ಜವಾಬ್ದಾರಿ ಎಂದು ತಿಳಿಯಬೇಕಂತೆ !’ – Pakistan Babri Masjid

ಬಾಬರಿ ಮಸೀದಿ ವಿಷಯದಲ್ಲಿ ಪಾಕಿಸ್ತಾನ ಸರಕಾರದ ರಂಪಾಟ

ಇಸ್ಲಾಮಾಬಾದ್ (ಪಾಕಿಸ್ತಾನ) – ಜಾಗತಿಕ ಸಮುದಾಯವು ಧಾರ್ಮಿಕ ಪರಂಪರೆ ಮತ್ತು ಪವಿತ್ರ ಸ್ಥಳಗಳ ಸಂರಕ್ಷಣೆಯನ್ನು ತಮ್ಮ ಸಾಮೂಹಿಕ ಜವಾಬ್ದಾರಿ ಎಂದು ಪರಿಗಣಿಸಬೇಕು. ಬಾಬರಿ ಮಸೀದಿಯೂ ಒಂದು ಮಹತ್ವದ ಪರಂಪರೆಯ ಸ್ಥಳವಾಗಿತ್ತು. ಬಾಬರಿ ಮಸೀದಿ ಧ್ವಂಸವಾದ ನಂತರ ಭಾರತೀಯ ಮುಸಲ್ಮಾನರಿಗೆ ಪ್ರತ್ಯೇಕತೆ ಮತ್ತು ಅಸುರಕ್ಷಿತ ಭಾವನೆ ಉಂಟಾಗಿದೆ. ಅವರು ಭಾವನಾತ್ಮಕವಾಗಿ ದೊಡ್ಡ ಒತ್ತಡವನ್ನು ಎದುರಿಸಿದ್ದಾರೆ ಮತ್ತು ಅವರ ಸ್ಥಿತಿ ಈಗಲೂ ಚಿಂತಾಜನಕವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹೀರ್ ಅಂದ್ರಾಬಿ ಅವರು ಬಾಬರಿ ಪ್ರಕರಣದ ಕುರಿತು ಅನಗತ್ಯ ಹೇಳಿಕೆ ನೀಡಿದ್ದಾರೆ. (ಭಾರತದ ಮುಸಲ್ಮಾನರಿಗೆ ಹೀಗೆ ಅನಿಸುತ್ತಿದ್ದರೆ, ಅವರು ತಮ್ಮ ಸುರಕ್ಷತೆಗಾಗಿ ಪಾಕಿಸ್ತಾನಕ್ಕೆ ಹೊರಟುಹೋಗಬೇಕು, ಏಕೆಂದರೆ ಭಾರತದ ವಿಭಜನೆಯು ಧರ್ಮದ ಆಧಾರದ ಮೇಲೆ ನಡೆದಿತ್ತು ಮತ್ತು ಮುಸಲ್ಮಾನರಿಗಾಗಿ ಪಾಕಿಸ್ತಾನವನ್ನು ನೀಡಲಾಗಿತ್ತು ! – ಸಂಪಾದಕರು)
ತಾಹೀರ್ ಅಂದ್ರಾಬಿ ಅವರು ಮುಸಲ್ಮಾನರ ಧಾರ್ಮಿಕ ಪರಂಪರೆಗಳ ಸಂರಕ್ಷಣೆಯ ಮಹತ್ವವನ್ನು ವಿಶ್ವಸಂಸ್ಥೆ ಗುರುತಿಸಬೇಕು ಮತ್ತು ಬಾಬರಿ ಮಸೀದಿ ಕೆಡವಿದಂತಹ ಘಟನೆಗಳು ಪುನಃ ನಡೆಯದಂತೆ ಸಹಾಯ ಮಾಡಬೇಕು ಎಂದು ವಿಶ್ವಸಂಸ್ಥೆಗೆ ಕರೆ ನೀಡಿದರು.

‘ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಬಾಬರಿ ಮಸೀದಿಯ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನದ ಸೇನೆ ಇಡಲಿದೆ’ (ಯಂತೆ) ! – ಪಾಕಿಸ್ತಾನದ ಮಹಿಳಾ ಸಂಸದೆ ಪಲವಾಶಾ ಖಾನ್ ರ ಹಗಲುಗನಸು !

ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಬಾಬರಿ ಮಸೀದಿಯ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನದ ಸೇನೆ ಇಡಲಿದೆ ಮತ್ತು ಮೊದಲ ‘ಅಜಾನ್’ ಅನ್ನು ಸೇನಾಪಡೆ ಮುಖ್ಯಸ್ಥ ಅಸೀಮ್ ಮುನೀರ್ ನೀಡಲಿದ್ದಾರೆ. ನಾವು ಬಳೆಗಳನ್ನು ತೊಟ್ಟಿಲ್ಲ ಎಂದು ಪಾಕಿಸ್ತಾನದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಮಹಿಳಾ ಸಂಸದೆ ಪಲವಾಶಾ ಜಯಿ ಖಾನ್ ಅವರು ಪಾಕಿಸ್ತಾನ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. (ಭಾರತದಿಂದ ಯುದ್ಧದಲ್ಲಿ ನಿರಂತರವಾಗಿ ಸೋಲು ತಿನ್ನುವವರ ಈ ಹೇಳಿಕೆಗಳನ್ನು ಕೇಳಿ ಜಗತ್ತೂ ಸಹ ನಗುತ್ತಿರಬಹುದು ! – ಸಂಪಾದಕರು) ಅವರು ಮಾತು ಮುಂದುವರೆಸಿ, ಭಾರತದ ಸಿಖ್ ಸೈನಿಕರು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವುದಿಲ್ಲ, ಏಕೆಂದರೆ ಪಾಕಿಸ್ತಾನವು ಗುರುನಾನಕ್ ದೇವರ ಭೂಮಿಯಾಗಿದೆ ಎಂದು ಪ್ರತಿಪಾದಿಸಿದರು. (ಇದುವರೆಗೆ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧಗಳಲ್ಲಿ ಸಿಖ್ ಸೈನಿಕರು ಮತ್ತು ಅಧಿಕಾರಿಗಳು ಪರಾಕ್ರಮ ಮೆರೆದಿದ್ದಾರೆ ಎಂಬುದು ಖಾನ್ ಅವರಿಗೆ ತಿಳಿದಿಲ್ಲ. ಇದರಿಂದ ಅವರ ಬೌದ್ಧಿಕ ದಿವಾಳಿತನವು ತಿಳಿಯುತ್ತದೆ. ಈಗ ಸಿಖ್ ಸೈನಿಕರು ಪಾಕಿಸ್ತಾನ ಮೇಲೆ ಆಕ್ರಮಣ ಮಾಡಿ ಈ ಭೂಮಿಯನ್ನು ಪಾಕಿಸ್ತಾನದ ವಶದಿಂದ ಮುಕ್ತಗೊಳಿಸಿ ಭಾರತಕ್ಕೆ ಸೇರಿಸುವಂತಹ ಪರಿಸ್ಥಿತಿ ಇದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಕಳೆದ 78 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಎಷ್ಟು ದೇವಸ್ಥಾನಗಳನ್ನು ಕೆಡವಿ ಅವುಗಳ ಮೇಲೆ ಮಸೀದಿಗಳನ್ನು ನಿರ್ಮಿಸಲಾಗಿದೆ? ಅಲ್ಲಿನ ಎಷ್ಟು ಚರ್ಚ್‌ಗಳು ಮತ್ತು ಗುರುದ್ವಾರಗಳು ಇದೇ ಸ್ಥಿತಿಯನ್ನು ತಲುಪಿವೆ? ಇದರ ಜವಾಬ್ದಾರಿಯನ್ನು ಸಹ ಜಗತ್ತು ತೆಗೆದುಕೊಂಡು ಪಾಕಿಸ್ತಾನಕ್ಕೆ ಪ್ರಶ್ನಿಸಬೇಕು!