ನಕಲಿ ಪಾಸ್‌ಪೋರ್ಟ್ ಪ್ರಕರಣ – Azam Khan Son Jail Sentenced

ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ಮಗನಿಗೆ ೭ ವರ್ಷ ಶಿಕ್ಷೆ !

ರಾಮಪುರ (ಉತ್ತರಪ್ರದೇಶ) – ನಕಲಿ ದಾಖಲೆಗಳನ್ನು ಸಲ್ಲಿಸಿ ಎರಡು ಪ್ರತ್ಯೇಕ ಪಾಸ್‌ಪೋರ್ಟ್‌ಗಳನ್ನು ಪಡೆದು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಆಜಂ ಅವರಿಗೆ ರಾಮಪುರ ನ್ಯಾಯಾಲಯವು ೭ ವರ್ಷಗಳ ಶಿಕ್ಷೆ ವಿಧಿಸಿದೆ. ಈ ಸಂಬಂಧ ರಾಮಪುರದ ಭಾಜಪ ನಾಯಕ ಆಕಾಶ್ ಸಕ್ಸೇನಾ ಅವರು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜನ್ಮ ದಿನಾಂಕ ಬದಲಾಯಿಸಿದ ಕುರಿತು ಇದು ಅವರಿಗೆ ವಿಧಿಸಿದ ಮೂರನೇ ಶಿಕ್ಷೆಯಾಗಿದೆ. ಸುಮಾರು ೧೫ ದಿನಗಳ ಹಿಂದೆ ಒಂದು ಪ್ರಕರಣದಲ್ಲಿ ಆಜಂ ಖಾನ್ ಮತ್ತು ಅಬ್ದುಲ್ಲಾ ಆಜಂ ಇಬ್ಬರಿಗೂ ೭ ವರ್ಷಗಳ ಶಿಕ್ಷೆಯಾಗಿತ್ತು. ಎರಡು ಜನ್ಮ ದಾಖಲೆಗಳ ಮತ್ತೊಂದು ಪ್ರಕರಣದಲ್ಲಿಯೂ ಅವರಿಗೆ ೨೦೨೩ ರಲ್ಲಿ ೭ ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಪ್ರಸ್ತುತ ಇಬ್ಬರೂ ರಾಮಪುರ ಕಾರಾಗೃಹದಲ್ಲಿದ್ದಾರೆ.