ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅಂತಿಮವಾಗಿ ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ ! Asim Munir Pakistan Chief Defense Staff

  • ಜೀವಾವಧಿ ಹುದ್ದೆ ಅನುಭವಿಸಲಿದ್ದಾರೆ

  • ಬಂಧನದಿಂದ ಶಾಶ್ವತ ರಕ್ಷಣೆ

  • ಅಪರಿಮಿತ ಅಧಿಕಾರಗಳನ್ನು ನೀಡಲಾಗಿದೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರನ್ನು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿ.ಡಿ.ಎಫ್ – ಚೀಫ್ ಆಫ್ ಡಿಫೆನ್ಸ್ ಫೋರ್ಸ್) ಎಂಬ ಹೊಸ ಹುದ್ದೆಗೆ ಅಂತಿಮವಾಗಿ ಔಪಚಾರಿಕವಾಗಿ ನೇಮಕ ಮಾಡಲಾಗಿದೆ. ಭೂಸೇನೆ, ನೌಕಾದಳ ಮತ್ತು ವಾಯುಪಡೆ ಈ ಮೂರೂ ಪಡೆಗಳಲ್ಲಿ ಉತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ ಕಳೆದ ತಿಂಗಳು ಈ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಮುನೀರ್ ಅವರನ್ನು ಸೇನಾ ಮುಖ್ಯಸ್ಥರಾಗಿ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡುವಂತೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕಳುಹಿಸಲಾದ ವಿನಂತಿಯನ್ನು ಅಧ್ಯಕ್ಷರು ಒಪ್ಪಿದ್ದಾರೆ ಎಂದು ಪ್ರಧಾನಿ ಶಹಬಾಜ್ ಷರೀಫ್ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಈ ನೇಮಕಾತಿ ೫ ವರ್ಷಗಳ ಅವಧಿಗೆ ಇರುತ್ತದೆ. ಇದರೊಂದಿಗೆ ಪ್ರಧಾನ ಮಂತ್ರಿಯವರು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಅವರಿಗೂ ೨ ವರ್ಷಗಳ ಅವಧಿಗೆ ವಿಸ್ತರಣೆ ನೀಡಿದ್ದಾರೆ.

ಭಾರತದ ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಅಸೀಮ್ ಮುನೀರ್ ಅವರು ಪಾಕಿಸ್ತಾನದಲ್ಲಿ ‘ಪಾಕಿಸ್ತಾನವು ಭಾರತದ ಮೇಲೆ ವಿಜಯ ಸಾಧಿಸಿದೆ’ ಎಂದು ಸಂಪೂರ್ಣ ಸುಳ್ಳು ಪ್ರಚಾರ ಮಾಡಿದ್ದರು. ಇದರಿಂದ ಪ್ರಧಾನಿ ಶಹಬಾಜ್ ಷರೀಫ್ ಅವರು ಅವರಿಗೆ ‘ಫೀಲ್ಡ್ ಮಾರ್ಷಲ್’ ಎಂದು ಬಡ್ತಿ ನೀಡಿದರು. ಅಂದಿನಿಂದ ಅಸೀಮ್ ಮುನೀರ್ ಅವರು ಅಪರಿಮಿತ ಅಧಿಕಾರಗಳನ್ನು ಹೊಂದಿದ್ದಾರೆ.

ಮುನೀರ್ ಅವರ ನೇಮಕಾತಿಗೆ ಪಾಕಿಸ್ತಾನಿಗಳಿಂದಲೇ ವಿರೋಧ !

ಮುನೀರ್ ಅವರ ನೇಮಕಾತಿಯ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಮುನೀರ್ ಅವರನ್ನು ೨೦೨೨ ರಲ್ಲಿ ಸೇನಾ ಮುಖ್ಯಸ್ಥರಾಗಿ ನೇಮಿಸಲಾಯಿತು. ೨೦೨೪ ರಲ್ಲಿ ಅವರ ಅಧಿಕಾರಾವಧಿಯನ್ನು ೫ ವರ್ಷಗಳವರೆಗೆ ವಿಸ್ತರಿಸಲಾಗಿತ್ತು.

ಸಂಪಾದಕೀಯ ನಿಲುವು

ಭಾರತಕ್ಕೆ ಮಾರಕವಾಗಿರುವ ಮುನೀರ್‌ ಅವರ ಮೂಗುದಾರ ಹಿಡಿದು ಅವರಿಗೆ ಅವರ ಜಾಗವನ್ನು ಭಾರತವೇ ತೋರಿಸಬೇಕು !