ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಸ್ಪಷ್ಟನೆ!

ವಾಷಿಂಗ್ಟನ್ (ಅಮೆರಿಕ) – ಅಮೆರಿಕಕ್ಕೆ ಅತಿದೊಡ್ಡ ಅಪಾಯವೆಂದರೆ ಇಸ್ಲಾಮಿಕ್ ಕಟ್ಟರವಾದವಾಗಿದೆ. ಕಟ್ಟರವಾದಿ ಗುಂಪುಗಳು ಅಮೆರಿಕವನ್ನು ‘ಭೂಮಿಯ ಮೇಲಿನ ಅತ್ಯಂತ ದುಷ್ಟ ದೇಶ’ ಎಂದು ಪರಿಗಣಿಸುತ್ತವೆ. ಕಟ್ಟರವಾದಿ ಇಸ್ಲಾಂ ಕೇವಲ ಒಂದು ಸಣ್ಣ ಪ್ರದೇಶದಲ್ಲಿ ಅಧಿಕಾರವನ್ನು ಸ್ಥಾಪಿಸಿ ನೆಲೆಗೊಳ್ಳಲು ಬಯಸುವುದಿಲ್ಲ, ಆದು ವಿಸ್ತರಣೆ ಮಾಡಲು ಬಯಸುತ್ತದೆ. ಈ ಸಿದ್ಧಾಂತವು ಸ್ವಭಾವತಃ ಕ್ರಾಂತಿಕಾರಿಯಾಗಿದ್ದು, ಹೆಚ್ಚು ಭೂಪ್ರದೇಶ ಮತ್ತು ಹೆಚ್ಚು ಜನರ ಮೇಲೆ ನಿಯಂತ್ರಣ ಸಾಧಿಸುವ ಪ್ರವೃತ್ತಿಯನ್ನು ಹೊಂದಿದೆ. ಇದು ಇಡೀ ಜಗತ್ತಿಗೆ ತುರ್ತು ಬೆದರಿಕೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಸಂದರ್ಶನವೊಂದರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
🔥 "Radical ideology Aims for Global Control" – Marco Rubio’s Stark Warning 🔥
🇺🇸 U.S. Sec. of State Marco Rubio highlights the real threat of radical Islamic extremism – an ideology seeking endless expansion and domination.
But a big question remains:
👉 If jihadi-mindset… pic.twitter.com/nDHqjfPuL7— Sanatan Prabhat (@SanatanPrabhat) December 4, 2025
ರೂಬಿಯೊ ಅವರು, ಈ ಅಪಾಯಕಾರಿ ತತ್ವಶಾಸ್ತ್ರವು ಇಡೀ ಜಗತ್ತಿಗೆ ಮತ್ತು ನಿರ್ದಿಷ್ಟವಾಗಿ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಸ್ಪಷ್ಟ ಮತ್ತು ತುರ್ತು ಅಪಾಯವಾಗಿದೆ ಎಂದು ಹೇಳಿದರು. ಕಟ್ಟರವಾದಿ ಗುಂಪುಗಳು ವಿವಿಧ ಸಂಸ್ಕೃತಿಗಳು ಮತ್ತು ಸಮಾಜಗಳ ಮೇಲೆ ಪ್ರಾಬಲ್ಯ ಸಾಧಿಸಲು ಭಯೋತ್ಪಾದನೆ, ಕೊಲೆ ಮತ್ತು ಮಾರಣಾಂತಿಕ ದಾಳಿಗಳನ್ನು ನಡೆಸಲು ಯಾವಾಗಲೂ ಸಿದ್ಧವಾಗಿರುತ್ತವೆ. ಈ ಸಿದ್ಧಾಂತದ ಗುರಿ ಅಮೆರಿಕ, ಯುರೋಪ್ ಮತ್ತು ವಿಶಾಲ ಪಾಶ್ಚಿಮಾತ್ಯ ದೇಶಗಳಾಗಿವೆ.
ಕ್ರೈಸ್ತರ ಮೇಲಿನ ದೌರ್ಜನ್ಯಗಳಿಗೆ ಸಹಾಯ ಮಾಡುವವರ ಮೇಲೆ ವೀಸಾ ನಿಷೇಧ
ಕ್ರೈಸ್ತರ ಮೇಲಿನ ಹಿಂಸಾಚಾರಕ್ಕೆ ಉದ್ದೇಶಪೂರ್ವಕವಾಗಿ ಸಹಾಯ ಮಾಡುವ ಅಥವಾ ಅಂತಹ ದೌರ್ಜನ್ಯಗಳಿಗೆ ಹಣಕಾಸು ಒದಗಿಸುವ ಎಲ್ಲ ವ್ಯಕ್ತಿಗಳ ಮೇಲೆ ಅಮೆರಿಕ ವೀಸಾ ನಿಷೇಧವನ್ನು ಹೇರಲಿದೆ ಎಂದು ರೂಬಿಯೊ ತಿಳಿಸಿದರು. ಈ ನೀತಿಯು ಧಾರ್ಮಿಕ ಆಧಾರದ ಮೇಲೆ ಜನರನ್ನು ಹಿಂಸಿಸುವ ನೈಜೀರಿಯಾ ಮತ್ತು ಇತರ ಎಲ್ಲ ದೇಶಗಳ ಅಂತಹ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಇದಕ್ಕೂ ಮೊದಲು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ನೈಜೀರಿಯಾದಲ್ಲಿ ಕ್ರೈಸ್ತರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದ್ದರೆ, ಅಮೆರಿಕ ಮಿಲಿಟರಿ ಕ್ರಮವನ್ನು ಪರಿಗಣಿಸಬಹುದು ಎಂದು ಎಚ್ಚರಿಕೆ ನೀಡಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!