ಬಾಬರಿ ಮಸೀದಿ ಕಟ್ಟುವ ಘೋಷಣೆ ಮಾಡಿದ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂ ಕಬೀರ್ ಪಕ್ಷದಿಂದ ಅಮಾನತು – TMC MLA Humayun Kabir Suspended by the Party

ಕಬೀರ್ ಅವರ ನಿರ್ಧಾರದಿಂದ ಮಮತಾ ಬ್ಯಾನರ್ಜಿ ಅಸಂತುಷ್ಟರಾಗಿದ್ದರು

ಕೋಲಕಾತಾ – ಮುರ್ಷಿದಾಬಾದ್‌ನಲ್ಲಿ ಮುಸಲ್ಮಾನ ಆಕ್ರಮಣಕಾರ ಬಾಬರನ ಹೆಸರಿನಲ್ಲಿ ಮಸೀದಿ ಕಟ್ಟುವ ಘೋಷಣೆ ಮಾಡಿದ ತೃಣಮೂಲ ಕಾಂಗ್ರೆಸ್‌ನ ಶಾಸಕ ಹುಮಾಯೂ ಕಬೀರ್ ಅವರನ್ನು ಪಕ್ಷವು ಅಮಾನತು ಮಾಡಿದೆ. ಡಿಸೆಂಬರ್ ೬, ೧೯೯೨ ರಂದು ವಿವಾದಾತ್ಮಕ ಬಾಬರಿಯನ್ನು ಕೆಡವಲಾಯಿತು. ಆ ಹಿನ್ನೆಲೆಯಲ್ಲಿ ‘ಮುರ್ಷಿದಾಬಾದ್‌ನಲ್ಲಿ ಡಿಸೆಂಬರ್ ೬ ರಿಂದ ಬಾಬರಿ ಮಸೀದಿಯನ್ನು ಕಟ್ಟಲು ಪ್ರಾರಂಭಿಸಲಾಗುವುದು’ ಎಂದು ಕಬೀರ್ ಘೋಷಿಸಿದ್ದರು. ಅವರಿಗೆ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಯಿತು. ಕಬೀರ್ ಅವರ ಈ ನಿರ್ಧಾರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಂತುಷ್ಟರಾಗಿದ್ದರು.

೧. ಬಂಗಾಲದ ಸಚಿವ ಫಿರ್ಹಾದ್ ಹಕೀಮ್ ಅವರು, ಮುರ್ಷಿದಾಬಾದ್‌ನ ಶಾಸಕರಿಗೆ ಬಾಬರಿ ಮಸೀದಿಯನ್ನೇ ಏಕೆ ಕಟ್ಟಬೇಕಿತ್ತು? ನಾವು ಅವರಿಗೆ ಈ ಮೊದಲು ಕೂಡ ಎಚ್ಚರಿಕೆ ನೀಡಿದ್ದೆವು ಎಂದು ಹೇಳಿದರು.

೨. ಬಂಗಾಲದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಲು ಪಕ್ಷದ ಮೇಲೆ ಒತ್ತಡ ಹೇರಲು ಕಬೀರ್ ಅವರು ಬಾಬರಿ ಮಸೀದಿಯ ನಿರ್ಮಾಣದ ವಿಷಯವನ್ನು ಎತ್ತಿದರು; ಆದರೆ ‘ಅವರು ಹೆಣೆದ ಬಲೆ ಅವರ ಮೇಲೆಯೇ ತಿರುಗಿಬಿದ್ದಿದೆ’ ಎಂದು ಹೇಳಲಾಗುತ್ತಿದೆ.

ಶಾಸಕ ಕಬೀರ್ ಅವರು ಧಾರ್ಮಿಕ ಭಾವನೆಗಳನ್ನು ನೋಯಿಸುವ ಪಿತೂರಿ! – ರಾಜ್ಯಪಾಲರು

‘ಶಾಸಕ ಕಬೀರ್ ಅವರು ಮಸೀದಿ ಕಟ್ಟುವ ಘೋಷಣೆ ಮಾಡುವ ಮೂಲಕ ಧಾರ್ಮಿಕ ಭಾವನೆಗಳನ್ನು ನೋಯಿಸುವ ಪಿತೂರಿ ಮಾಡಿದ್ದಾರೆ. ಅಂತಹ ಮಸೀದಿ ಕಟ್ಟಲು ಯಾವುದೇ ಕಾರಣಕ್ಕೂ ಅನುಮತಿ ನೀಡಲಾಗುವುದಿಲ್ಲ’ ಎಂದು ಬಂಗಾಲದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಬೀರ್ ಅವರ ಕೃತ್ಯ ಮಮತಾ ಬ್ಯಾನರ್ಜಿ ಅವರಿಗೆ ಇಷ್ಟವಾಗಿಲ್ಲದಿದ್ದರೆ, ಅವರನ್ನು ತಕ್ಷಣವೇ ಪಕ್ಷದಿಂದ ಏಕೆ ತೆಗೆದುಹಾಕಲಿಲ್ಲ? ಕಬೀರ್ ಅವರನ್ನು ಈಗ ಅಮಾನತು ಮಾಡುವುದು, ‘ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು’ ಎಂದಂತೆಯೇ ಎಂದು ಯಾರಿಗಾದರೂ ಅನಿಸಿದರೆ ತಪ್ಪೇನು?