|

ನವ ದೆಹಲಿ – ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ‘ಸೈಬರ್ ಸುರಕ್ಷತೆಗೆ ಸಂಬಂಧಿಸಿದ’ ‘ಸಂಚಾರ ಸಾಥಿ’ ಎಂಬ ಈ ‘ಅಪ್ಲಿಕೇಶನ್’ ಅನ್ನು ಕಡ್ಡಾಯವಾಗಿ ‘ಪ್ರೀ-ಇನ್‌ಸ್ಟಾಲ್’ (ಮೊದಲೇ ಸೇರಿಸುವುದು) ಮಾಡುವಂತೆ ಮೊಬೈಲ್ ಕಂಪನಿಗಳಿಗೆ ನೀಡಿದ್ದ ಆದೇಶವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಟೀಕೆಯ ನಂತರ ಸರಕಾರವು ಹಿಂಪಡೆದಿದೆ.
ಇಂತಹ ಕಡ್ಡಾಯ ಮಾಡುವುದು ಬಳಕೆದಾರರ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.
ಈ ಹಿಂದೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ, ‘ಸರಕಾರವು ನವೆಂಬರ್ ೨೮ ರ ಆದೇಶದಲ್ಲಿ ಬದಲಾವಣೆ ಮಾಡಲು ಸಿದ್ಧವಿದೆ. ಈ ಅಪ್ಲಿಕೇಶನ್ ಮೂಲಕ ಬೇಹುಗಾರಿಕೆ ಮಾಡುವುದು ಸಾಧ್ಯವಿಲ್ಲ. ಅಪ್ಲಿಕೇಶನ್ ಅನ್ನು ‘ಇನ್‌ಸ್ಟಾಲ್’ ಮಾಡುವ ಉದ್ದೇಶವು ಕಡಿಮೆ ಮಾಹಿತಿ ಇರುವ ಜನರ ಬಳಿಗೆ ಅದನ್ನು ಸುಲಭವಾಗಿ ತಲುಪಿಸುವುದು ಆಗಿತ್ತು. ಕಳೆದ ಒಂದು ದಿನದಲ್ಲಿ ೬ ಲಕ್ಷ ಜನರು ಈ ‘ಅಪ್ಲಿಕೇಶನ್’ ಅನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ‘ಡೌನ್‌ಲೋಡ್’ ಮಾಡಿದ್ದಾರೆ. ಬಳಕೆದಾರರು ಈಗ ಈ ಅಪ್ಲಿಕೇಶನ್ ಅನ್ನು ವ್ಯಾಪಕವಾಗಿ ಸ್ವೀಕರಿಸುತ್ತಿರುವುದರಿಂದ ‘ಪ್ರೀ-ಇನ್‌ಸ್ಟಾಲ್’ ಆದೇಶದ ಅಗತ್ಯವಿಲ್ಲ. ಅದು ಸ್ವಯಂಪ್ರೇರಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.’ ‘ಕಳ್ಳತನವಾದ ೨೬ ಲಕ್ಷ ಮೊಬೈಲ್ ಫೋನ್‌ಗಳನ್ನು ಈ ಅಪ್ಲಿಕೇಶನ್ ಸಹಾಯದಿಂದ ಹುಡುಕಲಾಗಿದೆ ಮತ್ತು ೬ ಲಕ್ಷ ವಂಚನೆಯ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಿದೆ.’
ಈ ಅಪ್ಲಿಕೇಶನ್ ಮೂಲಕ ಬಳಕೆದಾರರ ಮಾತನ್ನು ಕೇಳಲು ಮತ್ತು ಅವರ ಸಂದೇಶಗಳನ್ನು ಓದಲು ಸಾಧ್ಯವಿದೆ ಎಂದು ವಿರೋಧ ಪಕ್ಷಗಳ ವಾದವಾಗಿತ್ತು. ಮೊಬೈಲ್ ಫೋನ್‌ಗಳನ್ನು ತಯಾರಿಸುವ ಪ್ರಮುಖ ತಯಾರಕರಾದ ‘ಆಪಲ್’ ಮತ್ತು ‘ಸ್ಯಾಮ್‌ಸಂಗ್’ ಸಹ ಸರಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!