ಮರಗಳ ನಾಶಕ್ಕೆ ಅನಗತ್ಯ ಆಕ್ಷೇಪ ವ್ಯಕ್ತಪಡಿಸುವವರ ವಿರುದ್ಧ ಮುಖ್ಯಮಂತ್ರಿಗಳ ಟೀಕೆ!

ನಾಶಿಕ್ – ಇಲ್ಲಿನ ತಪೋವನದಲ್ಲಿ ಮರಗಳನ್ನು ಕತ್ತರಿಸುವ ವಿಷಯದ ರಾಜಕೀಯವು ದುರದೃಷ್ಟಕರವಾಗಿದೆ ಮತ್ತು ‘ಧರ್ಮವು ಒಂದು ಅಫೀಮು ಮಾತ್ರ’ ಎಂದು ಹೇಳುವವರು ಈ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದಾರೆ. ತಪೋವನದಲ್ಲಿರುವ ಮರಗಳು ಕಳೆದ ೪-೫ ವರ್ಷಗಳಷ್ಟು ಹಳೆಯದಾಗಿದ್ದು, ಮರಗಳನ್ನು ಉಳಿಸಬೇಕು ಮತ್ತು ಸಾಧುಗ್ರಾಮವನ್ನೂ ನಿರ್ಮಿಸಬೇಕು, ಎಂಬ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭರವಸೆ ನೀಡಿದ್ದಾರೆ. ನಾಶಿಕ್ ಮಹಾನಗರ ಪಾಲಿಕೆಯ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಮುಖ್ಯಮಂತ್ರಿಗಳು..
೧. ಕುಂಭಮೇಳದ ಪಾವಿತ್ರ್ಯವನ್ನು ಕಾಪಾಡಿಕೊಂಡು, ಅಭಿವೃದ್ಧಿಯೊಂದಿಗೆ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸಲಾಗುವುದು.
೨. ಕುಂಭಮೇಳವು ಸನಾತನ ಸಂಸ್ಕೃತಿಯ ಸಂಕೇತವಾಗಿದ್ದು, ಇದರಲ್ಲಿ ನದಿ ಮತ್ತು ವೃಕ್ಷ ಸಂರಕ್ಷಣೆಗೆ ಹೆಚ್ಚಿನ ಮಹತ್ವವಿದೆ. ಮರಗಳನ್ನು ಕತ್ತರಿಸುವುದು ಯಾರಿಗೂ ಇಷ್ಟವಿಲ್ಲ; ಆದರೆ ತಪೋವನದಲ್ಲಿ ಹಿಂದೆ ಮರಗಳಿರಲಿಲ್ಲ. ಈ ಸ್ಥಳವನ್ನು ಸಾಧುಗ್ರಾಮಕ್ಕಾಗಿಯೇ ಕಾಯ್ದಿರಿಸಲಾಗಿದೆ ಮತ್ತು ೨೦೧೭-೨೦೧೮ ರಲ್ಲಿ ಮಹಾನಗರ ಪಾಲಿಕೆಯು ಇಲ್ಲಿ ಗಿಡಗಳನ್ನು ನೆಟ್ಟಿತ್ತು. ಈಗ ಕಾಣುತ್ತಿರುವ ಮರಗಳು ಅವೇ. ಪ್ರಯಾಗರಾಜ್‌ನ ಕುಂಭಮೇಳವು ೧೫ ಸಾವಿರ ಹೆಕ್ಟೇರ್‌ಗಳಲ್ಲಿ ನಡೆದಿತ್ತು. ನಾಶಿಕ್‌ನ ಕುಂಭಮೇಳವು ೩೫೦ ಎಕರೆ ಪ್ರದೇಶದಲ್ಲಿ ನಡೆಯಲಿದ್ದು, ಈ ವಿವಾದದಲ್ಲಿ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಲಾಗುವುದು.
೩. ಸಾಧುಗಳು ವಾಸ್ತವ್ಯ ಹೂಡಲು ತಪೋವನದ ದಟ್ಟವಾದ ಅರಣ್ಯವನ್ನು ಕತ್ತರಿಸಿ ಅಲ್ಲಿ ಸಾಧುಗ್ರಾಮ ನಿರ್ಮಿಸುವ ನಿರ್ಧಾರವನ್ನು ಸರಕಾರಿ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ. ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರೂ, ತಪೋವನದಲ್ಲಿ ಮರಗಳನ್ನು ಕತ್ತರಿಸುವ ಬಗ್ಗೆ ಸರಕಾರವು ದೃಢವಾಗಿದೆ.
೪. ಕುಂಭಮೇಳವು ನಮಗೆಲ್ಲರಿಗೂ ಮುಖ್ಯವಾಗಿದೆ, ಅದೇ ರೀತಿ ಪರಿಸರವೂ ಮುಖ್ಯವಾಗಿದೆ. ಮರಗಳನ್ನು ಕತ್ತರಿಸಬೇಕು ಎಂಬುದು ನಮ್ಮ ಯಾರ ಅಭಿಪ್ರಾಯವೂ ಅಲ್ಲ. ಇದರಲ್ಲಿ ಒಂದು ವಿಷಯವನ್ನು ಗಮನಿಸಿ. ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುವ ಜಾಗವು ೧೫ ಸಾವಿರ ಹೆಕ್ಟೇರ್ ಇದೆ. ನಾಶಿಕ್‌ನ ಸಾಧುಗ್ರಾಮದ ಜಾಗವು ೩೦೦ ರಿಂದ ೩೫೦ ಎಕರೆ ಇದೆ. ೨೦೧೫-೧೬ ರ ಗೂಗಲ್ ನಕ್ಷೆಯಲ್ಲಿ ಅಲ್ಲಿ ಯಾವುದೇ ಮರಗಳು ಕಾಣುತ್ತಿರಲಿಲ್ಲ; ಆದರೆ ರಾಜ್ಯ ಸರಕಾರವು ೫೦ ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಕೈಗೊಂಡಾಗ, ನಾಶಿಕ್ ಮಹಾನಗರ ಪಾಲಿಕೆಯು ಈ ಮರಗಳನ್ನು ನೆಟ್ಟಿತು. ಈಗ ಅಲ್ಲಿನ ಮರಗಳ ಕಾರಣದಿಂದ ಸಾಧುಗ್ರಾಮ ನಿರ್ಮಾಣ ಅಸಾಧ್ಯವಾಗಿದೆ; ಆದರೆ ಕನಿಷ್ಠ ಮರಗಳನ್ನು ಕತ್ತರಿಸಿ ಅವುಗಳನ್ನು ಹೇಗೆ ಸ್ಥಳಾಂತರಿಸಬಹುದು ಎಂಬುದರ ಕುರಿತು ಸರಕಾರ ಪ್ರಯತ್ನಶೀಲವಾಗಿದೆ.
೫. ಕೆಲವರು ಅನಗತ್ಯವಾಗಿ ಪರಿಸರವಾದಿಗಳಾಗಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ನಾವು ಮಾರ್ಗವನ್ನು ಕಂಡುಕೊಳ್ಳುತ್ತೇವೆ, ಎಂದು ಹೇಳಿದರು.
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!