ಡಾಲರ್ ಎದುರು ರೂಪಾಯಿ ೯೦ ಕ್ಕೆ ಕುಸಿತ! : Rupee Vs Dollar

ನವದೆಹಲಿ – ಡಾಲರ್ ಎದುರು ರೂಪಾಯಿ ಮಲ್ಯ ಮೊದಲ ಬಾರಿಗೆ ೯೦ ಕ್ಕೆ ಕುಸಿದಿದ್ದು ಅದು ೯೦.೧ ೬ ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಸಕ್ತ ವರ್ಷದಲ್ಲಿ ಭಾರತೀಯ ರೂಪಾಯಿಯು ಸರಿಸುಮಾರು ೪.೪ ಪ್ರತಿಶತದಷ್ಟು ಕುಸಿತ ಕಂಡಿದೆ.

೨೦೨೫ ರಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಹೂಡಿಕೆದಾರರು ೧ ಕೋಟಿ ೪೮ ಲಕ್ಷ ಕೋಟಿ ರೂಪಾಯಿಗಳ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಡಿಸೆಂಬರ್‌ನ ಮೊದಲ ಎರಡು ದಿನಗಳಲ್ಲಿ ೪ ಸಾವಿರದ ೩೩೫ ಕೋಟಿ ರೂಪಾಯಿಗಳ ಷೇರುಗಳ ಮಾರಾಟ ನಡೆದಿದೆ. ಇದರಿಂದಾಗಿ ರೂಪಾಯಿ ದುರ್ಬಲಗೊಂಡಿದೆ, ಎಂದು ಹೇಳಲಾಗುತ್ತಿದೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಅನಿಶ್ಚಿತತೆಯಿಂದಾಗಿ ಸಹ ರೂಪಾಯಿ ಕುಸಿಯುತ್ತಿದೆ. ‘ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಸಕಾರಾತ್ಮಕ ಬೆಳವಣಿಗೆಗಳು ನಡೆದರೆ ರೂಪಾಯಿಯ ಅಪಮೌಲ್ಯವು ನಿಲ್ಲುತ್ತದೆ’ ಎಂದೂ ಹೇಳಲಾಗುತ್ತಿದೆ.