ಮುಜಫ್ಫರ್‌ ನಗರದ ಮಸೀದಿಗಳಲ್ಲಿ ಅಕ್ರಮವಾಗಿ ಅಳವಡಿಸಿದ್ದ ೪೦ ಧ್ವನಿವರ್ಧಕಗಳ ತೆರವು! : UP Loudspeakers

ಮಸೀದಿಯಿಂದ ಧ್ವನಿವರ್ಧಕವನ್ನು ಕೆಳಗಿಳಿಸುತ್ತಿರುವ ಪೊಲೀಸರು

ಮುಜಫ್ಫರ್‌ ನಗರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಜಫ್ಫರ್‌ ನಗರ ಜಿಲ್ಲೆಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ೪೦ ಧ್ವನಿವರ್ಧಕಗಳನ್ನು (ಲೌಡ್ ಸ್ಪೀಕರ್‌) ತೆಗೆದುಹಾಕಲಾಗಿದೆ. ಈ ಎಲ್ಲ ಧ್ವನಿವರ್ಧಕಗಳನ್ನು ಮಸೀದಿಗಳಿಂದ ತೆಗೆಸಿ ಪೊಲೀಸ್ ಠಾಣೆಗೆ ತರಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಎಲ್ಲಾ ಧಾರ್ಮಿಕ ಸ್ಥಳಗಳ ಮೇಲೆ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗುವುದು, ಎಂದು ಎಲ್ಲಾ ಧಾರ್ಮಿಕ ಸ್ಥಳಗಳ ಪದಾಧಿಕಾರಿಗಳಿಗೆ ತಿಳಿಸಲಾಗಿದೆ. ನಗರದ ಮುಖ್ಯ ಅಧಿಕಾರಿ ಸಿದ್ಧಾರ್ಥ್ ಮಿಶ್ರಾ ಅವರು ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಧಾರ್ಮಿಕ ಸ್ಥಳಗಳ ಮೇಲೆ ಅಳವಡಿಸಲಾದ ಮತ್ತು ೨೦ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಎಲ್ಲ ಧ್ವನಿವರ್ಧಕಗಳನ್ನು ತೆಗೆದುಹಾಕಲು ಸರಕಾರವು ಆದೇಶಿಸಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ನಿಯಮಬಾಹಿರ ಕಾರ್ಯಗಳು ನಡೆಯುವವರೆಗೆ ಪೊಲೀಸರು ಮತ್ತು ಆಡಳಿತ ನಿದ್ದೆ ಮಾಡುತ್ತಿರುತ್ತಾರೆಯೇ? ಈ ಧ್ವನಿವರ್ಧಕಗಳು