
ಕರ್ಣಾವತಿ (ಗುಜರಾತ) – ಓರ್ವ ‘ರಾಪಿಡೋ ಚಾಲಕನ’ (ಆಟೋ ಚಾಲಕನ) ಬ್ಯಾಂಕ್ ಖಾತೆಯಿಂದ 331 ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆದಿದ್ದು, ಇದರ ನೇರ ಸಂಬಂಧ ಗುಜರಾತಿನ ಯುವ ಕಾಂಗ್ರೆಸ್ ನಾಯಕ ಆದಿತ್ಯ ಜುಲಾ ಅವರಿಗೆ ಇದೆ ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ (ಇ.ಡಿ. ಯ) ತನಿಖೆಯಿಂದ ಬಹಿರಂಗವಾಗಿದೆ. ನವೆಂಬರ್ 2024 ರಲ್ಲಿ ಜುಲಾ ಅವರು ತಾಜ್ ರೆಸಾರ್ಟ್ ಗೆ ಮದುವೆಗಾಗಿ ಗುತ್ತಿಗೆ ನೀಡಲು ನಕಲಿ ಸಹಿಗಳನ್ನು ಬಳಸಿದ್ದರು. ಹಾಗೆಯೇ, ವ್ಯವಹಾರ ನಡೆಸಲು 17 ವಿವಿಧ ‘ಪಾನ್ ಕಾರ್ಡ್’ ಸಂಖ್ಯೆಗಳನ್ನೂ ಒದಗಿಸಿದ್ದರು. ಆಟೋ ಚಾಲಕನ ಬ್ಯಾಂಕ್ ಖಾತೆಯನ್ನು ಅಕ್ರಮ ವ್ಯವಹಾರಗಳಿಗೆ ಬಳಸಲಾಗಿದೆ ಮತ್ತು ಇದು ಜುಲಾಗೆ ಸಂಬಂಧಿಸಿದೆ ಎಂದು ಬೆಳಕಿಗೆ ಬಂದಿದೆ.
1. ‘ಇ.ಡಿ.’ ಯು ಬಹಿರಂಗಪಡಿಸಿದ ಪ್ರಕಾರ, ರಾಪಿಡೋ ಚಾಲಕನ ಖಾತೆಯ ಮೂಲಕ ಕೋಟಿಗಟ್ಟಲೆ ರೂಪಾಯಿಗಳನ್ನು ವರ್ಗಾಯಿಸಲಾಗಿದ್ದು, ಈ ಮೊತ್ತವನ್ನು ತಕ್ಷಣವೇ ಹಸ್ತಾಂತರಿಸಲಾಗಿತ್ತು. ಆಗಸ್ಟ್ 19 ರಿಂದ 2024 ರಿಂದ ಎಪ್ರಿಲ್ 16, 2025 ರ ಅವಧಿಯಲ್ಲಿ ಅವನ ಬ್ಯಾಂಕ್ ಖಾತೆಗೆ 331 ಕೋಟಿ ರೂಪಾಯಿಗಳು ಜಮಾ ಆಗಿದ್ದವು.
2. ‘ಇ.ಡಿ.’ಯ ಅಧಿಕಾರಿಗಳು, ಚಾಲಕನಿಗೆ ತಿಳಿಯದಂತೆ ಅವನ ಬ್ಯಾಂಕ್ ಖಾತೆಯನ್ನು ಬಳಸಲಾಗಿದೆ ಎಂದು ಹೇಳಿದರು. ಈ ಖಾತೆಯನ್ನು ಅಜ್ಞಾತ ಮೂಲಗಳಿಂದ ದೊಡ್ಡ ಪ್ರಮಾಣದ ವ್ಯವಹಾರಗಳನ್ನು ನಡೆಸಲು ಬಳಸಲಾಗುತ್ತಿತ್ತು.
3. ಈ ಮೂಲವು ಒಂದು ಆರ್ಥಿಕ ಜಾಲದೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ‘ಇ.ಡಿ.’ಯ ತನಿಖೆಯಲ್ಲಿ ‘ಬೆಟ್ಟಿಂಗ್ ಆಪ್’ ಗೆ ಸಂಬಂಧಿಸಿದ ಒಂದು ದೊಡ್ಡ ‘ಮನಿ ಲಾಂಡರಿಂಗ್’ (ಕಪ್ಪುಹಣವನ್ನು ಬಿಳಿಯನ್ನಾಗಿಸುವ ಪ್ರಕ್ರಿಯೆ) ಜಾಲವು ಬೆಳಕಿಗೆ ಬಂದಿದ್ದು, ಅದರಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಭಾಗಿಯಾಗಿದ್ದಾರೆ.
ಸಂಪಾದಕೀಯ ನಿಲುವುಕಾಂಗ್ರೆಸ್ ಎಂದರೆ ಭ್ರಷ್ಟರು, ಅಪರಾಧಿಗಳು, ರಾಷ್ಟ್ರವಿರೋಧಿ ಜನರಿಂದ ತುಂಬಿರುವ ಪಕ್ಷವಾಗಿದ್ದು, ಅದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಇಂತಹ ಪಕ್ಷದ ಮೇಲೆ ನಿಷೇಧ ಹೇರುವುದು ಆವಶ್ಯಕವಾಗಿದೆ.! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!