|

ವಾಷಿಂಗ್ಟನ – ‘ಟೆಸ್ಲಾ’ ಮತ್ತು ‘ಸ್ಪೇಸ್ ಎಕ್ಸ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಅವರು, ಭಾರತೀಯರ ಪ್ರತಿಭೆಯಿಂದ ಅಮೆರಿಕಕ್ಕೆ ದೊಡ್ಡ ಲಾಭವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ‘ಜೆರೋಧಾ’ದ ಸಹ-ಸಂಸ್ಥಾಪಕ ನಿಖಿಲ ಕಾಮತ ಅವರೊಂದಿಗೆ ಸಂವಾದ ನಡೆಸುವಾಗ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಮತ ಅವರು ಪಾಶ್ಚಿಮಾತ್ಯ ದೇಶಗಳ ಹೆಸರಾಂತ ಸಂಸ್ಥೆಗಳಲ್ಲಿ ಭಾರತೀಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಿರುವುದರ ಕುರಿತು ಪ್ರಶ್ನಿಸಿದಾಗ, ಮಸ್ಕ್ ಅವರು, ಅಮೆರಿಕ ಭಾರತದಿಂದ ಬಂದಿರುವ ಕೌಶಲ್ಯದ ದೊಡ್ಡ ಲಾಭವನ್ನು ಪಡೆದುಕೊಂಡಿದೆ. ಅಮೆರಿಕಕ್ಕೆ ಹಿಂದೆಂದಿಗಿಂತಲೂ ಈಗಿನ ಸಮಯದಲ್ಲಿ ಭಾರತದ ಪ್ರತಿಭೆಯ ಹೆಚ್ಚಿನ ಅವಶ್ಯಕತೆಯಿದೆ ಎಂದು ಹೇಳಿದರು.
ಮಸ್ಕ್ ಅವರು ಮಾತನಾಡುತ್ತಾ, ವಿದೇಶಿ ನಾಗರಿಕರು ಅಮೆರಿಕದ ಜನರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಾರೆ ಎಂಬ ಅಮೆರಿಕನ್ ನಾಗರಿಕರ ತಿಳುವಳಿಕೆ ತಪ್ಪಾಗಿದೆ. ಅನೇಕ ಸಂಸ್ಥೆಗಳಲ್ಲಿ ಸಮರ್ಥ, ಕೌಶಲ್ಯಪೂರ್ಣ ಜನರ ಕೊರತೆ ಯಾವಾಗಲೂ ಕಡಿಮೆ ಬೀಳುತ್ತವೆ ಮತ್ತು ಸವಾಲಿನ ಯೋಜನೆಗಳಿಗೆ ಸರಿಯಾದ ಜನರನ್ನು ಪಡೆಯುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ, ಹೆಚ್ಚು ಹೆಚ್ಚು ಪ್ರತಿಭಾವಂತ ವ್ಯಕ್ತಿಗಳ ಉಪಸ್ಥಿತಿಯೇ ನಿಜವಾದ ಅವಶ್ಯಕತೆಯಾಗಿದೆ ಎಂದರು.
ಆಮದು ಸುಂಕದ ಬಗ್ಗೆ ಟ್ರಂಪ್ ಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ!
ಟ್ರಂಪ್ ಅವರ ಆಮದು ಸುಂಕ ನೀತಿಗಳ ಬಗ್ಗೆ ಮಸ್ಕ್ ಅವರು ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು. ಟ್ರಂಪ್ ಅವರು ಕೆಲವು ದೇಶಗಳ ಮೇಲೆ ಆಮದು ಸುಂಕ ವಿಧಿಸುವ ನಿರ್ಧಾರ ಕೈಗೊಂಡಿದ್ದರು. ಆಮದು ಸುಂಕವು ಅಮೆರಿಕದ ಆರ್ಥಿಕತೆಯ ಮೇಲೆ ದೀರ್ಘಕಾಲೀನ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ; ಆದರೆ ಅವರು ಕೇಳಲಿಲ್ಲ ಎಂದು ಮಸ್ಕ್ ಹೇಳಿದರು.
ಹೆಚ್-1ಬಿ ವೀಸಾ ಕುರಿತು ಸ್ಪಷ್ಟನೆ
ಹೆಚ್-1 ಬಿ ವೀಸಾ ಕಾರ್ಯಕ್ರಮವನ್ನು ಅಮೆರಿಕ ಸರಕಾರವು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ವಿಚಾರಕ್ಕೆ ನಾನು ಒಪ್ಪುವುದಿಲ್ಲ. ಸಮಾಜದ ಕೆಲವು ವಿಭಾಗಗಳಿಂದ ಅಂತಹ ಬೇಡಿಕೆ ಬರುತ್ತಿದೆ, ಅದು ಸರಿಯಲ್ಲ. ಹೆಚ್-1ಬಿ ವೀಸಾ ಯೋಜನೆಯಲ್ಲಿ ಕೆಲವು ಲೋಪದೋಷಗಳಾಗಿವೆ. ಆದಾಗ್ಯೂ, ಇಡೀ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಯೋಗ್ಯವಾಗಿದೆ ಎಂದು ಮಸ್ಕ್ ಹೇಳಿದರು.
ಭಾರತದ ಬಗೆಗಿನ ಮಸ್ಕ್ ಅವರ ಹೇಳಿಕೆಗಳು ಏಕೆ ಮುಖ್ಯ?
ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಅವರು ಒಂದು ಕಾಲದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟ ಸಹವರ್ತಿ ಎಂದು ಗುರುತಿಸಲ್ಪಟ್ಟಿದ್ದರು; ಆದರೆ ಟ್ರಂಪ್ ಅವರ ಆಮದು ಸುಂಕ ಮತ್ತು ‘ಹೆಚ್-1ಬಿ ವೀಸಾ’ ನೀತಿಗಳು ಮಸ್ಕ್ ಗೆ ಇಷ್ಟವಾಗದ ಕಾರಣ ಅವರ ನಡುವಿನ ವಿವಾದ ಉಲ್ಬಣಗೊಂಡಿತ್ತು. ಟ್ರಂಪ್ ಅವರ ಆಮದು ಸುಂಕ ಮತ್ತು ‘ಹೆಚ್-1ಬಿ ವೀಸಾ’ ನೀತಿಗಳಿಂದ ಭಾರತಕ್ಕೆ ತೊಂದರೆಯಾಗಿತ್ತು. ಕಾಮತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಸ್ಕ್ ಅವರು ಈ ನೀತಿಗಳನ್ನು ಸ್ಪಷ್ಟವಾಗಿ ವಿರೋಧಿಸಿದರು ಮತ್ತು ಭಾರತೀಯರನ್ನು ಶ್ಲಾಘಿಸಿದರು. ಅವರ ಈ ಹೇಳಿಕೆಯಿಂದಾಗಿ, ‘ಮತ್ತೆ ಟ್ರಂಪ್ ಮತ್ತು ಮಸ್ಕ್ ನಡುವಿನ ವಿವಾದ ಹೆಚ್ಚಾಗುತ್ತದೆಯೇ?’ ಎಂಬುದರ ಮೇಲೆ ಜಗತ್ತು ಗಮನ ಹರಿಸಿದೆ.
ಅಮೆರಿಕ ಸರಕಾರದ ಹೆಚ್-1ಬಿ ವೀಸಾ ನೀತಿ ಏನು?
‘ಹೆಚ್-1ಬಿ ವೀಸಾ’ದಿಂದಾಗಿ ಅಮೆರಿಕದ ಸಂಸ್ಥೆಗಳು ವಿದೇಶಿ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಅನುಮತಿ ದೊರೆಯುತ್ತದೆ. ಈ ವೀಸಾದ ಅತಿ ಹೆಚ್ಚು ಪ್ರಯೋಜನವು ಸುಶಿಕ್ಷಿತ ಭಾರತೀಯರಿಗೆ ಸಿಗುತ್ತದೆ. 2024 ರಲ್ಲಿ ಅಮೆರಿಕ ಸರಕಾರವು ವಿದೇಶಿ ಜನರಿಗೆ ನೀಡಿದ ಈ ವೀಸಾಗಳಲ್ಲಿ ಶೇ. 71 ರಷ್ಟು ಜನರು ಭಾರತೀಯರಾಗಿದ್ದರು. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಈ ವೀಸಾ ಹೊಂದಿರುವ ವಿದೇಶಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಸಂಸ್ಥೆಗಳ ಮೇಲೆ ದೊಡ್ಡ ಪ್ರಮಾಣದ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದರು. ಇದರಿಂದ ಅಲ್ಲಿನ ಭಾರತೀಯರಿಗೆ ತೊಂದರೆಯಾಗಿದೆ. ಸರಕಾರದ ಈ ನೀತಿಯಿಂದ ಅಲ್ಲಿನ ದೊಡ್ಡ ಸಂಸ್ಥೆಗಳಲ್ಲಿ ಅಸಮಾಧಾನದ ಧ್ವನಿ ಕೇಳಿಬರುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation