ಮತ್ತೊಬ್ಬ ಅಫ್ಘಾನ್ ನಾಗರಿಕನ ಬಂಧನ!

ವಾಷಿಂಗ್ಟನ್ (ಅಮೆರಿಕ) – ನವೆಂಬರ್ 26 ರಂದು ಇಲ್ಲಿನ ‘ವೈಟ್ ಹೌಸ್’ (ಅಮೆರಿಕಾದ ಅಧ್ಯಕ್ಷರ ನಿವಾಸ) ಬಳಿ ನಡೆದ ಗುಂಡಿನ ದಾಳಿಯಲ್ಲಿ ‘ನ್ಯಾಷನಲ್ ಗಾರ್ಡ್’ನ ಓರ್ವ ಮಹಿಳಾ ಸೈನಿಕ ಸಾವನ್ನಪ್ಪಿದ್ದು, ಇನ್ನೊಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಅಫ್ಘಾನ್ ನಾಗರಿಕ ರೆಹಮಾನುಲ್ಲಾ ಲಕ್ನವಾಲ್ ನನ್ನು ಬಂಧಿಸಲಾಗಿದೆ. ಈತನ ಮೇಲೆ ಗಂಭೀರ ಅಪರಾಧಗಳ ಆರೋಪ ಹೊರಿಸಲಾಗಿದೆ. ಈ ಘಟನೆಯ ನಂತರ, ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಕರೆದು ‘ಅತ್ಯಂತ ಗಂಭೀರ’ ಎಂದು ಹೇಳಿದರು. ಅಫ್ಘಾನ್ ನಿರಾಶ್ರಿತರಿಗೆ ಅಮೆರಿಕ ಪ್ರವೇಶ ನೀಡುವಲ್ಲಿ ಗಂಭೀರ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಅಮೆರಿಕಾದಲ್ಲಿ ಆಶ್ರಯ ಕೋರುವ ಅಫ್ಘಾನ್ ನಾಗರಿಕರ ಎಲ್ಲಾ ಅರ್ಜಿಗಳ ಮೇಲಿನ ಪ್ರಕ್ರಿಯೆಯನ್ನು ನಿಲ್ಲಿಸಲು ಸರ್ಕಾರ ತುರ್ತು ನಿರ್ಧರಿಸಿದೆ. ಇದರೊಂದಿಗೆ, ಅಫ್ಘಾನ್ ಪಾಸ್‌ಪೋರ್ಟ್ ಹೊಂದಿರುವವರಿಗೆ ‘ವೀಸಾ’ (ಒಂದು ದೇಶವನ್ನು ಪ್ರವೇಶಿಸಲು ಬೇಕಾದ ಪರವಾನಗಿ ಪತ್ರ) ನೀಡುವ ಪ್ರಕ್ರಿಯೆಯನ್ನೂ ತಡೆಹಿಡಿಯಲಾಗಿದೆ.
US halts Afghan visas and asylum decisions after shooting of National Guard members near White House
Trump vows strict curbs on legal migration after White House shooting
PC: @SaharaReporters pic.twitter.com/WLErSCQPrh
— Sanatan Prabhat (@SanatanPrabhat) November 30, 2025
ಅಮೆರಿಕನ್ ಆಡಳಿತದ ಮೇಲೆ ಅಫ್ಘಾನ್ ಸಂಘಟನೆಯ ಆರೋಪ!
ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು, ಅಫ್ಘಾನ್ ಪಾಸ್‌ಪೋರ್ಟ್ ಹೊಂದಿರುವವರಿಗೆ ‘ವೀಸಾ’ ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಿದ್ದಾರೆ. ಮತ್ತೊಂದೆಡೆ, ‘ಅಫ್ಘಾನ್ ಇವಾಕ್’ ಎಂಬ ಸಂಸ್ಥೆಯು, ಒಬ್ಬ ವ್ಯಕ್ತಿಯ ಅಪರಾಧದ ಆಧಾರದ ಮೇಲೆ ಇಡೀ ಸಮುದಾಯದ ಮೇಲೆ ಶಿಕ್ಷೆಯಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಇದು ಮೊದಲೇ ನಿರ್ಧರಿಸಿದ ನೀತಿಗಳನ್ನು ಜಾರಿಗೊಳಿಸಲು ಒಂದು ನೆಪದಂತೆ ಕಾಣುತ್ತದೆ ಎಂದು ಟೀಕಿಸಿದೆ.
ದಾಳಿಕೋರ ರೆಹಮಾನುಲ್ಲಾ ಲಕ್ನವಾಲ್ ಯಾರು?
ಲಕ್ನವಾಲ್ 2021 ರಲ್ಲಿ ‘ಆಪರೇಷನ್ ಅಲೈಸ್ ವೆಲ್‌ಕಮ್’ ಎಂಬ ಅಮೆರಿಕಾದ ಕಾರ್ಯಾಚರಣೆಯ ಮೂಲಕ ಅಮೆರಿಕಾಗೆ ಬಂದಿದ್ದ. ತಾಲಿಬಾನ್ ವಿರೋಧಿ ಸಂಘರ್ಷದಲ್ಲಿ ಅಮೆರಿಕಾದ ಸೈನ್ಯಕ್ಕೆ ಸಹಾಯ ಮಾಡಿದ ಅಫ್ಘಾನ್ ಜನರನ್ನು ಪುನರ್ವಸತಿಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆತ ಈ ಹಿಂದೆ ಅಮೆರಿಕಾದ ಗುಪ್ತಚರ ಸಂಸ್ಥೆ ‘ಸಿ.ಐ.ಎ. – ಸೆಂಟ್ರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಕೇಂದ್ರೀಯ ತನಿಖಾ ಸಂಸ್ಥೆ)’ ಬೆಂಬಲಿತ ‘ಝೀರೋ ಯೂನಿಟ್’ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.
ಮತ್ತೊಬ್ಬ ಅಫ್ಘಾನ್ ನಾಗರಿಕನ ಬಂಧನ!
‘ಆಪರೇಷನ್ ಅಲೈಸ್ ವೆಲ್‌ಕಮ್’ ಅಡಿಯಲ್ಲಿ ಅಮೆರಿಕಾಗೆ ಕರೆತರಲಾದ ಮತ್ತೊಬ್ಬ ವ್ಯಕ್ತಿಯನ್ನು ನವೆಂಬರ್ 29 ರಂದು ಬಂಧಿಸಲಾಗಿದೆ. ಅಮೆರಿಕಾದಲ್ಲಿ ಜನಪ್ರಿಯವಾಗಿರುವ ‘ಟಿಕ್‌ಟಾಕ್’ ಎಂಬ ಸಾಮಾಜಿಕ ಮಾಧ್ಯಮದಲ್ಲಿಈತ ಸ್ಫೋಟಕಗಳನ್ನು ತಯಾರಿಸುತ್ತಿರುವ ವೀಡಿಯೊವನ್ನು ಪ್ರಸಾರ ಮಾಡಿದ್ದ. ಈತನ ಹೆಸರು ಮೊಹಮ್ಮದ್ ದಾವೂದ್ ಅಲೋಕೋಜೆ ಎಂದಾಗಿದೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ