ನಟ ರಣವೀರ ಸಿಂಗ್ ಶ್ರೀ ಚಾಮುಂಡಾದೇವಿಯನ್ನು ‘ದೆವ್ವ’ ಎಂದು ಅವಮಾನಿಸಿದ!

  • ಗೋವಾದ ಅಂತರರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ನಡೆದ ಘಟನೆ

  • ‘ಕಾಂತಾರ’ ಚಲನಚಿತ್ರದ ಬಗ್ಗೆ ಹೇಳಿಕೆ

ಪಣಜಿ (ಗೋವಾ) – ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ನಟ ರಣವೀರ ಸಿಂಗ್ ಪ್ರಸಿದ್ಧ ಚಲನಚಿತ್ರ ‘ಕಾಂತಾರ’ದ ಬಗ್ಗೆ ಮಾತನಾಡುವಾಗ ಶ್ರೀ ಚಾಮುಂಡಾ ಮಾತೆಯ ಕುರಿತು ನಿಂದನೀಯ ಪದಗಳನ್ನು ಬಳಸಿದ್ದಾರೆ. ರಣವೀರ ಸಿಂಗ್ ಶ್ರೀ ಚಾಮುಂಡಾ ಮಾತೆಯನ್ನು ‘ದೆವ್ವ’ ಎಂದು ಉಲ್ಲೇಖಿಸಿದ್ದಾರೆ. ಈ ಕಾರಣದಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ರಣವೀರ ಸಿಂಗ್ ಅವರನ್ನು ಟೀಕಿಸಲಾಗುತ್ತಿದೆ. ಈ ಪ್ರಕರಣದ ಬಗ್ಗೆ ರಣವೀರ ಸಿಂಗ್ ಇದುವರೆಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ.

ಚಲನಚಿತ್ರ ಮಹೋತ್ಸವದಲ್ಲಿ ಮಾತನಾಡಿದ ರಣವೀರ ಸಿಂಗ್ ‘ಕಾಂತಾರ’ ಚಲನಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರಿಗೆ, `ರಿಷಬ್, ನಾನು ಈ (ಕಾಂತಾರ) ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ್ದೆನು. ಇದು ಅದ್ಭುತ ಪ್ರದರ್ಶನವಾಗಿತ್ತು, ವಿಶೇಷವಾಗಿ ಆ ಸ್ತ್ರೀ ‘ದೆವ್ವ’ ನಿಮ್ಮ ಶರೀರದಲ್ಲಿ ಹೊಕ್ಕಾಗ. ಆ ನಟನೆ, ಆ ದೃಶ್ಯ ಅದ್ಭುತವಾಗಿತ್ತು.’ ಎಂದು ಹೇಳಿದರು. ನಂತರ ರಣವೀರ ಸಿಂಗ್ ಅವರು ಸ್ವತಃ ಆ ಪಾತ್ರವನ್ನು ಅನುಕರಿಸುವ ಮೂಲಕ ಅಣಕಿಸಿದರು.

ಶ್ರೀ ಚಾಮುಂಡಾದೇವಿಯಂತೆ ನಟಿಸಿದ !

ಇಷ್ಟೇ ಅಲ್ಲದೆ, ವೇದಿಕೆಯಿಂದ ಕೆಳಗಿಳಿದ ನಂತರ ರಣವೀರ ಸಿಂಗ್ ಅವರು ರಿಷಬ್ ಶೆಟ್ಟಿ ಅವರ ಎದುರಿಗೆ ಹೋಗಿ ಶ್ರೀ ಚಾಮುಂಡಾದೇವಿಯಂತೆ ನಟಿಸಿದ. ಈ ಸಮಯದಲ್ಲಿ ರಿಷಬ್ ಶೆಟ್ಟಿ ನಿರಂತರವಾಗಿ ರಣವೀರ ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದರು. ‘ಕಾಂತಾರ’ ಚಲನಚಿತ್ರದ ಕೊನೆಯಲ್ಲಿ ಶ್ರೀ ಚಾಮುಂಡಾದೇವಿ ನಾಯಕನ ದೇಹವನ್ನು ಪ್ರವೇಶಿಸುತ್ತಾಳೆ ಮತ್ತು ಆ ದೇವಿ ಖಳನಾಯಕಿ ರಾಜಕುಮಾರಿಯನ್ನು ಸಂಹರಿಸುತ್ತಾಳೆ. ಶ್ರೀ ಚಾಮುಂಡಾದೇವಿಯ ನಾಯಕನ ಶರೀರವನ್ನು ಪ್ರವೇಶಿಸಿದಾಗ ಅವರ ಹಾವಭಾವಗಳು ಬದಲಾಗುತ್ತದೆಯೆಂದು ತೋರಿಸಲಾಗಿದೆ. ರಣವೀರ ಸಿಂಗ್ ಅದರಂತೆ ನಟಿಸಿದ.

‘ಚಾಮುಂಡಾ ದೇವಿಯಾಗಿದ್ದಾಳೆ, ದೆವ್ವ ಅಲ್ಲ!’ – ಜನರ ಪ್ರತಿಕ್ರಿಯೆಗಳು

ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಅನೇಕ ಜನರು ಇದರ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ರಣವೀರ್ ಸಿಂಗ್, ನಿಮಗೆ ದೇವರ ಮತ್ತು ದೆವ್ವದ ನಡುವಿನ ವ್ಯತ್ಯಾಸ ತಿಳಿದಿಲ್ಲ. ಚಾಮುಂಡಿ ದೇವತೆಯಾಗಿದ್ದಾಳೆ, ದೆವ್ವ ಅಲ್ಲ. ಮತ್ತು ನೀವು ವೇದಿಕೆಯ ಮೇಲೆ ಆ ದೇವಿಯನ್ನು ಗೇಲಿ ಮಾಡುತ್ತಿದ್ದೀರಿ, ಎಂದು ಬರೆದಿದ್ದಾರೆ.