ದೆಹಲಿಯ ಪ್ರಮುಖ ವೃತ್ತಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಮಹೋತ್ಸವದ ಆಕರ್ಷಕ ಫಲಕಗಳು ರಾರಾಜಿಸಲು ಆರಂಭ!

ದೆಹಲಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’

ನವದೆಹಲಿಯ ಬ್ಲಾಕ್ ಎಲ್ 2 ನಲ್ಲಿ ಅಳವಡಿಸಲಾದ ಫಲಕ

ದೆಹಲಿ – ಗೋವಾದಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಯಶಸ್ವಿ ಆಯೋಜನೆಯ ನಂತರ ದೆಹಲಿಯಲ್ಲಿ ಈಗಿನಿಂದಲೇ ಧರ್ಮಜಾಗೃತಿಯ ಒಂದು ಜ್ವಲಂತ ಉತ್ಸಾಹವು ನಿರ್ಮಾಣವಾಗಿದೆ. ಈ ಭವ್ಯ ಆಯೋಜನೆಯ ಸಿದ್ಧತೆಯು ಸಮಾರೋಪಾದಿಯಲ್ಲಿ ಶುರುವಾಗಿದೆ ಮತ್ತು ದೆಹಲಿಯ ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಕರ್ಷಕ ಫಲಕಗಳು ರಾರಾಜಿಸಲು ಆರಂಭಿಸಿವೆ. ಈ ಫಲಕಗಳಿಂದಾಗಿ ಸಾಮಾನ್ಯ ಜನರಲ್ಲಿ ಈ ಮಹೋತ್ಸವದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಭಾವಭೂತಿ ಮಾರ್ಗ, ಅಜ್ಮೇರಿ ಗೇಟ್ (ನವದೆಹಲಿ) ನಲ್ಲಿ ಅಳವಡಿಸಲಾದ ಫಲಕ

ದೆಹಲಿಯು ಕೇವಲ ರಾಜಧಾನಿಯಷ್ಟೇ ಅಲ್ಲ, ರಾಷ್ಟ್ರೀಯ ನಿರ್ಧಾರಗಳ ದಿಕ್ಕನ್ನು ನಿರ್ಧರಿಸುವ ಕೇಂದ್ರವಾಗಿರುವುದರಿಂದ, ಇಲ್ಲಿಂದ ಸನಾತನ ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಸಂದೇಶವು ಪರಿಣಾಮಕಾರಿಯಾಗಿ ತಲುಪಬೇಕು ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ಸಾಧಕರೊಂದಿಗೆ ಹಿಂದುತ್ವನಿಷ್ಟರು, ಧರ್ಮಪ್ರೇಮಿಗಳು ಈ ಮಹೋತ್ಸವದ ವಿಚಾರವನ್ನು ಜನರಿಗೆ ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಪ್ರಯತ್ನಗಳು ಹಿಂದೂ ರಾಷ್ಟ್ರದ ಸ್ಥಾಪನೆಯ ಗುರಿಯ ಮೇಲಿನ ಅವರ ದೃಢ ನಿಷ್ಠೆಯ ಸಂಕೇತವಾಗಿವೆ.

ಬಹದ್ದೂರ್‌ಗಢ್ (ಹರಿಯಾಣ) ದ ರಸ್ತೆಯೊಂದರಲ್ಲಿ ಅಳವಡಿಸಲಾದ ಫಲಕ

ಈ ವರ್ಷ ದೆಹಲಿಯಲ್ಲಿ ನಡೆಯಲಿರುವ ಈ ಮಹೋತ್ಸವವು ಧರ್ಮಾಭಿಮಾನ ಮತ್ತು ರಾಷ್ಟ್ರಭಕ್ತಿಗಳ ಭವ್ಯ ಸಮನ್ವಯವನ್ನು ಸಾಧಿಸಲಿದೆ. ಈ ‘ಶಂಖನಾದ’ವು ಇಡೀ ರಾಷ್ಟ್ರಕ್ಕೆ ಹೊಸ ದಿಕ್ಕನ್ನು ನೀಡಲಿದೆ. ದೆಹಲಿಯ ಈ ಸಾಧನೆ ಮತ್ತು ಸಂಘಟನಾ ಶಕ್ತಿಯು ಮುಂಬರುವ ಮಹೋತ್ಸವವನ್ನು ಐತಿಹಾಸಿಕ ಎತ್ತರಕ್ಕೆ ಕೊಂಡೊಯ್ಯಲಿದೆ.