ಪತಂಜಲಿ ತುಪ್ಪ ತಿನ್ನಲು ಯೋಗ್ಯವಲ್ಲದ ಪ್ರಕರಣ

ಪಿಥೋರಗಢ (ಉತ್ತರಾಖಂಡ) – ಇಲ್ಲಿನ ನ್ಯಾಯಾಲಯವು ಪತಂಜಲಿ ಸಂಸ್ಥೆಯ ಹಸುವಿನ ತುಪ್ಪವು ತಿನ್ನಲು ಯೋಗ್ಯವಲ್ಲ ಎಂದು ತಪಾಸಣೆಯಲ್ಲಿ ಕಂಡುಬಂದ ಕಾರಣ ಪತಂಜಲಿಗೆ ೧ ಲಕ್ಷ ರೂಪಾಯಿ ಹಾಗೂ ವಿತರಕರು ಮತ್ತು ಮಾರಾಟಗಾರರಿಗೆ ೪೦ ಸಾವಿರ ರೂಪಾಯಿ ದಂಡ ವಿಧಿಸಿದೆ. ಆಹಾರ ಸುರಕ್ಷತಾ ಇಲಾಖೆ ದಾಖಲಿಸಿದ್ದ ದೂರಿನ ವಿಚಾರಣೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ತುಪ್ಪದ ಮಾದರಿಗಳನ್ನು ಅಕ್ಟೋಬರ್ ೨೦, ೨೦೨೦ ರಂದು ಸಂಗ್ರಹಿಸಲಾಗಿತ್ತು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಪಿಥೋರಗಢದ ಸಹಾಯಕ ಆಯುಕ್ತರಾದ ಆರ್.ಕೆ. ಶರ್ಮಾ ಅವರು, ಆ ತುಪ್ಪವು ತಿನ್ನಲು ಯೋಗ್ಯವಾಗಿ ಉಳಿದಿರಲಿಲ್ಲ. ಒಂದು ವೇಳೆ ಯಾರಾದರೂ ಆ ತುಪ್ಪವನ್ನು ಸೇವಿಸಿದ್ದರೆ, ಅದು ದುಷ್ಪರಿಣಾಮಗಳನ್ನು ಉಂಟು ಮಾಡಬಹುದಿತ್ತು. ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇತ್ತು ಎಂದು ಹೇಳಿದ್ದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!