
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸಂಸ್ಥೆ ‘ಹೆವಿ ಇಂಡಸ್ಟ್ರೀಸ್ ಟಾಕ್ಸಲಾ’ ವು ಬಾಂಗ್ಲಾದೇಶದ ಸೇನೆಗಾಗಿ ೪೦ ಯುದ್ಧ ಟ್ಯಾಂಕ್‌ಗಳನ್ನು ನವೀಕರಿಸುವ ಪ್ರಸ್ತಾವನೆಯನ್ನು ನೀಡಿದೆ. ಈ ಟ್ಯಾಂಕ್‌ಗಳು ಪಾಕಿಸ್ತಾನದ ‘ಹೈದರ್’ ಮಾದರಿಯಂತೆಯೇ ಇರುತ್ತವೆ. ಅದರಲ್ಲಿ ಹೊಸ ೧೨೫ ಮಿ.ಮೀ. ಫಿರಂಗಿ, ಬಲಿಷ್ಠವಾದ ಸಂಯೋಜಿತ ರಕ್ಷಾಕವಚ ಮತ್ತು ಗುರಿ ನಿರ್ದೇಶನ ವ್ಯವಸ್ಥೆ ಇರಲಿವೆ. ಇದಲ್ಲದೆ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ‘ಅಬ್ದಾಲಿ’ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಸ್ತಾಂತರಿಸುವ ಕುರಿತು ಚಿಂತನೆ ನಡೆಸಿದೆ. ಈ ಕ್ಷಿಪಣಿ ೧೮೦ ಕಿ.ಮೀ. ದೂರದವರೆಗೆ ಹೊಡೆಯುವ ಸಾಮರ್ಥ್ಯ ಹೊಂದಿದೆ.
ನವೆಂಬರ್ ೨೦೨೫ ರಲ್ಲಿ ಹೆಚ್.ಐ.ಟಿ.ಯ ಅಧ್ಯಕ್ಷ ಲೆಫ್ಟಿನೆಂಟ್ ಜನರಲ್ ಶಾಕಿರ್ ಉಲ್ಲಾ ಖಟ್ಟಕ್ ಅವರು ಢಾಕಾಗೆ ಭೇಟಿ ನೀಡಿದ ನಂತರ ಈ ಸಹಕಾರಕ್ಕೆ ಹೊಸ ವೇಗ ಸಿಕ್ಕಿದೆ. ಅವರು ಬಾಂಗ್ಲಾದೇಶದ ಸೇನಾ ಮುಖ್ಯಸ್ಥರಾದ ಜನರಲ್ ವಕಾರ್-ಉಜ್-ಜಮಾನ್ ಅವರನ್ನು ಭೇಟಿ ಮಾಡಿದರು. ಟ್ಯಾಂಕ್‌ಗಳ ನವೀಕರಣ, ಶಸ್ತ್ರಸಜ್ಜಿತ ವಾಹನಗಳು ಮತ್ತು ಜಂಟಿ ಉತ್ಪಾದನೆಯ ಬಗ್ಗೆ ಚರ್ಚೆ ನಡೆಸಿದರು. ಪಾಕಿಸ್ತಾನವು ಈಗಾಗಲೇ ಬಾಂಗ್ಲಾದೇಶಕ್ಕೆ ಮದ್ದುಗುಂಡುಗಳ ಯುದ್ಧಸಾಮಗ್ರಿ, ತರಬೇತಿ ಮತ್ತು ಅಂತರ್- ಸೇವಾ ಕಾರ್ಯಾಗಾರಗಳಲ್ಲಿ ಸಹಾಯ ಮಾಡುತ್ತಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶವು ಖಂಡಿತವಾಗಿಯೂ ಇವುಗಳನ್ನು ಭಾರತದ ವಿರುದ್ಧಬಳಸಲಿದೆ, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation