
ಕಾಠಮಂಡು (ನೇಪಾಳ) – ನೇಪಾಳದಲ್ಲಿ ನಿರ್ಮಿಸಲಾದ ವಿದೇಶಿ (ಹಿಂದೂಯೇತರ) ದೇವಸ್ಥಾನಗಳ ಮೂಲಕ ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯರಿಗೆ ಹಣವನ್ನು ಪೂರೈಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಇತ್ತೀಚೆಗೆ, ಭಗವಾನ ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಚೀನಾದ ಒಂದು ಸಂಸ್ಥೆಯಿಂದ ಯುವಕರಿಗೆ ಸಮಾಜ ಕಲ್ಯಾಣದ ಹೆಸರಿನಲ್ಲಿ ಹಣ ನೀಡಲಾಗುತ್ತಿದೆ, ಎಂದು ತಿಳಿದುಬಂದಿದೆ.
ನೇಪಾಳಗಂಜನ ಮದರಸಾ ಮತ್ತು ನಿಧಿ
ಉತ್ತರಪ್ರದೇಶದ ಬಹರಾಯಿಚ ಗಡಿಯಲ್ಲಿರುವ ನೇಪಾಳಗಂಜನ ಮದರಸಾಗೆ ಈ ವರ್ಷ ಟರ್ಕಿಯ ಐ.ಎಚ್.ಎಚ್. (ಇನ್ಸಾನಿ ಯಾರ್ದಿಮ್ ವಕ್ಫಿ) ಸಂಸ್ಥೆಯಿಂದ ಸುಮಾರು 20 ಕೋಟಿ ರೂಪಾಯಿಗಳ ನಿಧಿಯನ್ನು ಒದಗಿಸಲಾಗಿದೆ. ಈ ಮದರಸಾಗೆ ಶ್ರಾವಸ್ತಿ ಜಿಲ್ಲೆಯ ಕೆಲವು ವ್ಯಕ್ತಿಗಳ ಸಂಪರ್ಕವೂ ಕಂಡುಬಂದಿದೆ.
ಟರ್ಕಿ ಸಂಘಟನೆಯ ಸಹಭಾಗ
ದೆಹಲಿ ಸ್ಫೋಟದಲ್ಲಿ ಟರ್ಕಿಯ ಸಹಭಾಗ ಬಯಲಾದ ನಂತರ, ನೇಪಾಳಗಂಜನಲ್ಲಿ ಐ.ಎಚ್.ಎಚ್.ನ ಹೆಚ್ಚುತ್ತಿರುವ ಚಟುವಟಿಕೆಗಳಿಂದಾಗಿ ಭದ್ರತಾ ಸಂಸ್ಥೆಗಳು ಎಚ್ಚರ ವಹಿಸಿವೆ. ನೇಪಾಳ ಗಡಿಯಲ್ಲಿ ಕಾರ್ಯನಿರ್ವಹಿಸಿದ್ದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಸಂತೋಷ ಸಿಂಗ್ ಅವರ ಪ್ರಕಾರ, ಟರ್ಕಿಯ ಈ ಕಟ್ಟರವಾದಿ ಸ್ವಯಂಸೇವಾ ಸಂಸ್ಥೆಯು ‘ಶಾದತ್’ ಗೆ ಸಂಬಂಧಿಸಿದೆ. ಇದರ ಮುಖ್ಯ ಕೆಲಸ ಜಿಹಾದಿಗಳನ್ನು ನೇಮಕ ಮಾಡುವುದು ಮತ್ತು ಅವರಿಗೆ ತರಬೇತಿ ನೀಡುವುದಾಗಿದೆ. ಸಿರಿಯಾ, ಕತಾರ್, ಬ್ರಿಟನ್ ಮತ್ತು ಅಮೆರಿಕಗಳಲ್ಲಿನ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾದತ್ ನ ಸಂಬಂಧ ಕಂಡುಬಂದಿದೆ.
ಪಾಕಿಸ್ತಾನ ಮತ್ತು ಚೀನಾದ ಗುಪ್ತಚರ ಸಂಸ್ಥೆಗಳ ಬೆಂಬಲ
ದೆಹಲಿ ಸ್ಫೋಟದ ಕುರಿತು ನಡೆಯುತ್ತಿರುವ ತನಿಖೆಯಲ್ಲಿ, ವಿದೇಶಿ ದೇವಸ್ಥಾನಗಳು ಮತ್ತು ಮದರಸಾಗಳ ಮೂಲಕ ಭಯೋತ್ಪಾದಕರ ಸ್ಥಳೀಯ ಗುಂಪುಗಳಿಗೆ ಹಣಕಾಸು ಲಭಿಸುತ್ತಿದೆ ಎಂಬ ಮಾಹಿತಿ ದೊರೆತಿದೆ. ಇದಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ – ಆಂತರಿಕಸೇವಾ ಗುಪ್ತಚರ ನಿರ್ದೇಶನಾಲಯ) ಮತ್ತು ಚೀನಾದ ಗುಪ್ತಚರ ಸಂಸ್ಥೆ ಎಂ.ಎಸ್.ಎಸ್. (ಮಿನಿಸ್ಟ್ರಿ ಆಫ್ ಸ್ಟೇಟ್ಸ್ ಸೆಕ್ಯೂರಿಟಿ) ಬೆಂಬಲವಿದೆ. ಈ ಮಾಹಿತಿಯ ಆಧಾರದ ಮೇಲೆ, ರಾಷ್ಟ್ರೀಯ ತನಿಖಾ ಸಂಸ್ಥೆ ಕಳೆದ ವಾರ ಬಹರಾಯಿಚ ಮತ್ತು ಶ್ರಾವಸ್ತಿಯಲ್ಲಿ 2 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ. ಮಹಾರಾಜಗಂಜನ ಮಾಜಿ ನಗರಸಭೆಯ ಅಧ್ಯಕ್ಷರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ.
ಉತ್ತರಪ್ರದೇಶದ ಸೂಕ್ಷ್ಮ ಪ್ರದೇಶಗಳು ಮತ್ತು ಜಿಲ್ಲೆಗಳು
ಸಧ್ಯದ ತನಿಖೆಯಲ್ಲಿ, ಸಂತ ಕಬೀರನಗರದ ಮೆಹದಾವಲ, ಕುಶಿನಗರ, ಸಿದ್ಧಾರ್ಥನಗರ, ಅಂಬೇಡ್ಕರನಗರ, ಶ್ರಾವಸ್ತಿ, ಬಹರಾಯಿಚ್, ಸುಲ್ತಾನಪುರ, ಬಲರಾಂಪುರ, ಮಹಾರಾಜಗಂಜ, ಬರೇಲಿ, ರಾಯಬರೇಲಿ, ಗೋಂಡಾ ಹಾಗೆಯೇ ಬಾರಾಬಂಕಿ ಪ್ರದೇಶಗಳನ್ನು ಅತ್ಯಂತ ಸೂಕ್ಷ್ಮ ಎಂದು ಘೋಷಿಸಲಾಗಿದೆ. ಇವುಗಳಲ್ಲಿ ಬರೇಲಿ, ರಾಯಬರೇಲಿ ಮತ್ತು ಮಹಾರಾಜಗಂಜನಲ್ಲಿ ಲಷ್ಕರ್-ಎ-ತೊಯ್ಬಾದ ಜಾಲದ ಬಗ್ಗೆ ಈಗಾಗಲೇ ಮಾಹಿತಿ ಬಹಿರಂಗವಾಗಿದೆ.
ಸಂಪಾದಕೀಯ ನಿಲುವುನೇಪಾಳದ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆಯೇ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara