ಸಿಂಹಸ್ಥ ಕುಂಭಮೇಳದ ಕುರಿತು ಅನುಚಿತ ಟೀಕೆ ಮಾಡಿದ ಪತ್ರಕರ್ತ ನಿರಂಜನ ಟಕಲೆ ವಿರುದ್ಧ ದೂರು ದಾಖಲಿಸಿ!

ನಾಸಿಕನ ಸಮಸ್ತ ಹಿಂದುತ್ವನಿಷ್ಠ ಹೋರಾಟಗಾರರಿಂದ ಪೊಲೀಸರಿಗೆ ಬೇಡಿಕೆ

ಪೊಲೀಸರಿಗೆ ಮನವಿ ಸಲ್ಲಿಸುತ್ತಿರುವ ಹಿಂದುತ್ವನಿಷ್ಠರು

ನಾಸಿಕ – ಸಿಂಹಸ್ಥ ಕುಂಭಮೇಳಕ್ಕೆ ಬರುವ ಸಾಧು-ಸಂತರು ಟ್ರಕ್ ಗಟ್ಟಲೆ ಗಾಂಜಾ ಸೇದುತ್ತಾರೆ ಮತ್ತು ಎಲ್ಲೆಡೆ ದುರ್ವಾಸನೆ ಹರಡುತ್ತಾರೆ ಎಂದು ಹಿಂದೂ ಸಾಧು-ಸಂತರ ಬಗ್ಗೆ ಪತ್ರಕರ್ತ ನಿರಂಜನ ಟಕಲೆ ಅನುಚಿತ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹಿಂದುತ್ವನಿಷ್ಠ ಸಂಘಟನೆಗಳು ಇಲ್ಲಿನ ಪಂಚವಟಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಒತ್ತಾಯಿಸಿವೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸಂದೀಪ ವಾಘ, ಸಕಲ ಹಿಂದೂ ಸಮಾಜದ ಶ್ರೀ. ಕೈಲಾಸ ದೇಶಮುಖ, ಹಿಂದೂ ಮಹಾಸಭಾದ ಶ್ರೀ. ಮನೀಶ ಗೋಸಾವಿ, ಜೀವಾಧಾರ ಸಂಘದ ಶ್ರೀ. ಮಿಲಿಂದ ಕುಲಕರ್ಣಿ, ವಿಶ್ವ ದೇವಸ್ಥಾನ ಸಮಿತಿಯ ಸರ್ವಶ್ರೀ ನಂದಕಿಶೋರ ಭಾವಸಾರ, ಲಖನ ಆಹೆರ, ಶಾಮಭಾವು ಬೋಲಕರ, ರಾಜೇಶ ಪರದೇಶಿ ಮುಂತಾದವರು ಉಪಸ್ಥಿತರಿದ್ದರು.

ಈ ದೂರಿನಲ್ಲಿ,

1. ನಿರಂಜನ ಟಕಲೆ ಅವರ ಹೇಳಿಕೆಯಿಂದ ಸಂತ ಸಮಾಜ ಮತ್ತು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಕುಂಭಮೇಳವನ್ನು ಜಾಗತಿಕ ಮಟ್ಟದಲ್ಲಿ ಅಪಖ್ಯಾತಿಗೊಳಿಸುವ ನಗರ ನಕ್ಸಲ್ ಪ್ರೇಮಿಗಳ ಷಡ್ಯಂತ್ರವು ಯಾವಾಗಲೂ ಇರುತ್ತದೆ.

2. ಕುಂಭಮೇಳದಂತಹ ಸಾಮಾಜಿಕ ಕಾರ್ಯಕ್ರಮಕ್ಕೆ ಕಳಂಕ ತರುವ ಮೂಲಕ ಸಾಮಾಜಿಕ ಶಾಂತಿಯನ್ನು ಕದಡಿ, ಸಾಮಾಜಿಕ ಮತ್ತು ಧಾರ್ಮಿಕ ವೈಷಮ್ಯವನ್ನು ಸೃಷ್ಟಿಸಲು ನಿರಂಜನ ಟಕಲೆ ಪ್ರಯತ್ನಿಸಿದ್ದಾರೆ. ಸಾಮಾಜಿಕ ಸೌಹಾರ್ದತೆಯನ್ನು ಹಾಳು ಮಾಡುವ ಅವರ ಇಂತಹ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು.

3. ಅವರ ವಿರುದ್ಧ ಹಿಂದೂ ಧರ್ಮ, ಹಬ್ಬಗಳು ಮತ್ತು ಉತ್ಸವಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವುದು, ಸಂತರು ಮತ್ತು ಧರ್ಮದ ಘನತೆಗೆ ಹಾನಿ ಮಾಡುವುದು, ಹಿಂದೂಗಳನ್ನು ದಾರಿತಪ್ಪಿಸುವುದು, ಧಾರ್ಮಿಕ ವೈಷಮ್ಯ ಸೃಷ್ಟಿಸುವುದು, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ‘ಯುನೆಸ್ಕೋ’ದಿಂದ ಮಾನ್ಯತೆ ಪಡೆದಿರುವ ಕುಂಭಮೇಳವನ್ನು ಜಾಗತಿಕ ಮಟ್ಟದಲ್ಲಿ ಅಪಖ್ಯಾತಿಗೊಳಿಸುವುದು ಇತ್ಯಾದಿ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು.

ಸಂಪಾದಕೀಯ ನಿಲುವು

ಇಂತಹ ಬೇಡಿಕೆ ಏಕೆ ಸಲ್ಲಿಸಬೇಕಾಗುತ್ತದೆ? ಪೊಲೀಸರು ತಾವಾಗಿ ಏಕೆ ಕ್ರಮ ಕೈಗೊಳ್ಳುವುದಿಲ್ಲ?