‘ವರ್ಲ್ಡ್ ಹಿಂದೂ ಫೆಡರೇಶನ್’ನ ಅಂತರಾಷ್ಟ್ರೀಯ ಉಪಾಧ್ಯಕ್ಷ ರಾಜೇಂದ್ರ ಗೋಯಂಕಾ ಮತ್ತು ದೆಹಲಿಯ ಶಾಸಕ ಕರ್ನೈಲ್ ಸಿಂಗ್ ಅವರಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ – Sanatan Rashtra Shankanad Mahotsav Delhi 2025

ರಾಜೇಂದ್ರ ಗೋಯಂಕಾ: ಎಡದಿಂದ ಶ್ರೀ. ರಾಜೇಂದ್ರ ಗೋಯಂಕಾ, ಆಮಂತ್ರಣ ನೀಡುತ್ತಿರುವ ಸದ್ಗುರು ನೀಲೇಶ ಸಿಂಗಬಾಳ ಮತ್ತು ಶ್ರೀ. ವಿಶ್ವನಾಥ ಕುಲಕರ್ಣಿ.

ನವದೆಹಲಿ – ‘ವರ್ಲ್ಡ್ ಹಿಂದೂ ಫೆಡರೇಶನ್’ನ ಅಂತರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ವಾರಣಾಸಿಯ ಸುಪ್ರಸಿದ್ಧ ಉದ್ಯಮಿ ಶ್ರೀ. ರಾಜೇಂದ್ರ ಗೋಯಂಕಾ ಅವರಿಗೆ ಮತ್ತು ದೆಹಲಿಯ ಶಕೂರಬಸ್ತಿ ವಿಧಾನಸಭಾ ಕ್ಷೇತ್ರದ ಭಾಜಪ ಶಾಸಕರಾದ ಕರ್ನೈಲ್ ಸಿಂಗ್ ಅವರಿಗೆ ದೆಹಲಿಯಲ್ಲಿ ಡಿಸೆಂಬರ್ 13 ಮತ್ತು 14 ರಂದು ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ನೀಡಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಅವರು ಶ್ರೀ. ರಾಜೇಂದ್ರ ಗೋಯಂಕಾ ಅವರಿಗೆ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಸಂಯೋಜಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಅವರು ಉಪಸ್ಥಿತರಿದ್ದರು.

ಶಾಸಕ ಕರ್ನೈಲ್ ಸಿಂಗ್: ಎಡದಿಂದ ಶಾಸಕ ಕರ್ನೈಲ್ ಸಿಂಗ್, ಆಮಂತ್ರಣ ನೀಡುತ್ತಿರುವ ಶ್ರೀ. ರಮೇಶ ಶಿಂಧೆ ಮತ್ತು ಶ್ರೀ. ನರೇಂದ್ರ ಸುರ್ವೆ

ಶಾಸಕ ಕರ್ನೈಲ್ ಸಿಂಗ್ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂಧೆ ಮತ್ತು ವಕ್ತಾರ ಶ್ರೀ. ನರೇಂದ್ರ ಸುರ್ವೆ ಅವರು ಆಮಂತ್ರಣ ನೀಡಿದರು. ಶಾಸಕ ಕರ್ನೈಲ್ ಸಿಂಗ್ ಅವರು ಭಾಜಪದ ‘ಮಂದಿರ ಸಮಿತಿ’ ಯ ಸಂಯೋಜಕರಾಗಿದ್ದಾರೆ. ಮಂದಿರ ಸಮಿತಿಯಲ್ಲಿ ಸೇರಿರುವ ಎಲ್ಲಾ ದೇವಸ್ಥಾನಗಳ ಧರ್ಮದರ್ಶಿಗಳಿಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಆಹ್ವಾನವನ್ನು ಕಳುಹಿಸುವೆ`ಎಂದು ಶಾಸಕ ಕರ್ನೈಲ್ ಸಿಂಗ್ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.