ಶಾರೀರಿಕ ಶಕ್ತಿಯನ್ನು ಹೆಚ್ಚಿಸಿರಿ !

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೩೦

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆ ಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಪರಿಹಾರ ವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಗಳು ಇಂದಿಗೂ ಅಷ್ಟೇ ಉಪಯುಕ್ತ ವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್‌’ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ. ೨೭/೧೦ ನೆಯ ಸಂಚಿಕೆಯಲ್ಲಿ ನಾವು ‘ಓಡುವುದು’ ಈ ವ್ಯಾಯಾಮದ ಅವಶ್ಯಕತೆ, ಮಹತ್ವ ಮತ್ತು ಲಾಭವನ್ನು ನೋಡಿದೆವು. ಈ ವಾರದ ಲೇಖನದಲ್ಲಿ ನಾವು ‘ಶಾರೀರಿಕ ಶಕ್ತಿಯನ್ನು ಗಳಿಸುವುದರ ಮಹತ್ವ’ವನ್ನು ನೋಡೋಣ.

೧. ಶಾರೀರಿಕ ಶಕ್ತಿಯನ್ನು ಗಳಿಸುವುದು ಕಾಲಕ್ಕೆ ಆವಶ್ಯಕ !

‘ದಿನದಿಂದ ದಿನಕ್ಕೆ ಪ್ರತಿಯೊಬ್ಬರೂ ಸ್ವಾವಲಂಬಿ ಆಗಬೇಕು’ ಎಂತಹ ಕಾಲ ಬರುತ್ತಿದೆ ಅಂದರೆ ಪ್ರತಿಯೊಬ್ಬರಿಗೂ ತಮ್ಮ ಸ್ವಸಾಮರ್ಥ್ಯದ ಮೇಲೆಯೇ ನಂಬಿಕೆ ಇಡಬೇಕಾಗುವುದು, ಇಲ್ಲದಿದ್ದರೆ ನಿರಾಮಯ ಜೀವನ ನಡೆಸುವುದು ಕಷ್ಟವಾಗಬಹುದು. ಸ್ವಾಭಿಮಾನದಿಂದ ಬದುಕಬೇಕಿದ್ದರೆ, ದೇಹಶಕ್ತಿಯನ್ನು ಗಳಿಸಬೇಕು.

೨. ಆರೋಗ್ಯವಂತ ಮನುಷ್ಯನೇ ಪ್ರಗತಿ ಸಾಧಿಸಲು ಸಾಧ್ಯ

ಆರೋಗ್ಯವಂತ ಮನುಷ್ಯನು ಯಾವಾಗಲೂ ನಿರ್ಭಯನಾಗಿರುತ್ತಾನೆ. ಅವನಿಗೆ ಭವಿಷ್ಯದ ಚಿಂತೆ ಅಷ್ಟೇನು ಇರುವುದಿಲ್ಲ; ಏಕೆಂದರೆ ನಿರೋಗಿ ದೇಹ ಮತ್ತು ನಿರೋಗಿ ಮನಸ್ಸು ಇರುವುದರಿಂದ ಅವನ ಮನಸ್ಸಿನಲ್ಲಿ ನಿರಂತರವಾಗಿ ಅನೇಕ ಕಲ್ಪನೆಗಳು ಮೂಡುತ್ತವೆ ಮತ್ತು ಇಂತಹ ಆಶಾವಾದಿ ವ್ಯಕ್ತಿ ತನ್ನ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ.

೩. ವ್ಯಾಯಾಮ ಮಾಡಿ ಬಲಸಂಪನ್ನ ಮತ್ತು ನಿರೋಗಿ ಆಗುವುದು ಅವಶ್ಯಕ

ರೋಗಿ, ದುರ್ಬಲ ವ್ಯಕ್ತಿಯ ಜ್ಞಾನತಂತುಗಳು ಸಾಮಾನ್ಯವಾಗಿ ದುರ್ಬಲ ಮತ್ತು ಮಂದವಾಗಿರುತ್ತವೆ. ಇಂತಹ ಜನರು ಕುಟುಂಬ ಅಥವಾ ಸಮಾಜಕ್ಕೆ ಹೇಗೆ ಉಪಯುಕ್ತವಾಗುತ್ತಾರೆ ? ಇಂತಹ ರೋಗಿ ಮತ್ತು ದುರ್ಬಲ ಜೀವನವನ್ನು ನಡೆಸುವುದರಿಂದ ಅವರಿಗೆ ಆನಂದ ಹೇಗೆ ಸಿಗುತ್ತದೆ ? ಜೀವನದಲ್ಲಿ ನಿರೋಗಿ ಮತ್ತು ಸಾಮರ್ಥ್ಯಪೂರ್ಣ ದೇಹದ ಆನಂದವನ್ನು ಅನುಭವಿಸಬೇಕಾದರೆ, ವ್ಯಾಯಾಮ ಮಾಡಿ ಬಲಶಾಲಿ ಮತ್ತು ನಿರೋಗಿ ಆಗಬೇಕು. ಇದರಿಂದ ಮನುಷ್ಯನ ನರನಾಡಿಗಳಲ್ಲಿ ಅಲೌಕಿಕ ಚೈತನ್ಯದ ಪ್ರವಾಹ ಹರಿಯುತ್ತದೆ. ‘ಆರೋಗ್ಯವೇ ಯಶಸ್ಸಿನ ಗುರಿ’ ಎಂಬ ಗಾದೆ ಮಾತಿದೆ.

೪. ಯಶಸ್ಸು ಗಳಿಸಲು ‘ನಿರೋಗಿ ಶರೀರವೇ’ ಮುಖ್ಯ ಬಂಡವಾಳ !

ವಸ್ತುಸ್ಥಿತಿ ಹೇಗಿರುತ್ತದೆ ಅಂದರೆ, ಪ್ರತಿಯೊಬ್ಬ ಮನುಷ್ಯನು ತನ್ನ ಮತ್ತು ತನ್ನ ಕುಟುಂಬದ ಜೀವನೋಪಾಯಕ್ಕಾಗಿ ಯಾವುದಾದರೊಂದು ಉದ್ಯೋಗದಲ್ಲಿ ಬಹಳಷ್ಟು ಶ್ರಮಿಸುತ್ತಿರುತ್ತಾನೆ. ‘ಜೀವನ ಇರುವವರೆಗೂ ಕೆಲಸ ಇದ್ದೇ ಇರುತ್ತದೆ’ ಎಂಬುದರಲ್ಲಿ ಸಂದೇಹವಿಲ್ಲ. ಕೆಲಸದ ಈ ನಿರಂತರ ಒತ್ತಡದಿಂದ ಸ್ವಲ್ಪ ಸಮಯ ತೆಗೆದು ದೇಹವು ನಿರೋಗಿ ಮತ್ತು ಬಲಶಾಲಿಯಾಗಲು ಅವಶ್ಯ ವ್ಯಾಯಾಮ ಮಾಡಬೇಕು, ಇದರಿಂದ ಆರೋಗ್ಯ ತಾನಾಗಿಯೇ ಸಿಗುತ್ತದೆ; ಈ ಜೀವನದಲ್ಲಿ ಯಶಸ್ಸು ಗಳಿಸಲು ನಿರೋಗಿ ದೇಹವೇ ಮುಖ್ಯ ಬಂಡವಾಳ ! ಮತ್ತು ಡಾಕ್ಟರ್‌-ವೈದ್ಯರ ಕಹಿ ಔಷಧಗಳು ಮತ್ತು ಕಷಾಯಗಳನ್ನು ಕುಡಿಯುವ ಕಷ್ಟದ ಪ್ರಸಂಗ ಬರುವುದಿಲ್ಲ.

೫. ವ್ಯಾಯಾಮ ಇದೊಂದು ಸಂಜೀವನಿ !

‘ಒಮ್ಮೆ ವ್ಯಾಯಾಮ ಮಾಡುವ ವ್ಯಕ್ತಿಗೆ ಅದರ ಆಸಕ್ತಿ ಬೆಳೆದರೆ, ಅವನು ಅದರಿಂದ ವಿಮುಖನಾಗುವುದಿಲ್ಲ’ ಎಂಬುದು ಅನುಭವವಾಗಿದೆ. ವ್ಯಾಯಾಮ ಒಂದು ಸಂಜೀವನಿಯಾಗಿದೆ. ಈ ಸಂಜೀವನಿಯನ್ನು ಸೇವಿಸಿದವರು ಜೀವನಪರ್ಯಂತ ನಿರೋಗಿ ಸ್ಥಿತಿಯನ್ನು ಪಡೆದಿದ್ದಾರೆ.

೬. ವ್ಯಾಯಾಮದಲ್ಲಿ ರೋಗಗಳನ್ನು ಮೂಲದಿಂದ ನಾಶ ಮಾಡುವ ಸಾಮರ್ಥ್ಯ ಇದೆ ಪ್ರತಿಯೊಬ್ಬ ವ್ಯಕ್ತಿಯೂ ಪೈಲ್ವಾನ್‌ (ಬಾಡಿ ಬಿಲ್ಡರ) ಆಗಬೇಕಾಗಿಲ್ಲ; ಆದರೆ ಆರೋಗ್ಯವನ್ನು ಪಡೆಯಲು ತನ್ನ ಸಮಯದಿಂದ ಸ್ವಲ್ಪ ಸಮಯವನ್ನು ತೆಗೆದು ವ್ಯಾಯಾಮ ಮಾಡಬೇಕು. ಡಾಕ್ಟರ್‌-ವೈದ್ಯರ ಔಷಧಿಗಳಿಂದ ಗುಣವಾಗದಿರುವಲ್ಲಿ, ವ್ಯಾಯಾಮದಿಂದ ಸ್ವಲ್ಪ ಸಮಯದಲ್ಲಿಯೇ ತುಂಬಾ ಲಾಭವಾಗಿದೆ ಮತ್ತು ಹೌದು, ವ್ಯಾಯಾಮದಲ್ಲಿ ರೋಗಗಳನ್ನು ಮೂಲದಿಂದ ನಾಶ ಮಾಡುವ ಸಾಮರ್ಥ್ಯ ಇದೆ, ಇದು ಮುಖ್ಯ ಲಾಭ !

೭. ಸ್ವಂತದ ರಕ್ಷಣೆಗಾಗಿಯಾದರೂ ಬಲಶಾಲಿಯಾಗುವುದು ಅವಶ್ಯಕ !

ಪ್ರತಿಯೊಬ್ಬ ಮನುಷ್ಯನು ಹೆಚ್ಚಿಲ್ಲದಿದ್ದರೂ, ಸ್ವಂತದ ರಕ್ಷಣೆಗಾಗಿಯಾದರೂ ದೇಹ ಸಾಮರ್ಥ್ಯವನ್ನು ಗಳಿಸಬೇಕು. ಇಂದಿನ ಯುಗವು ಶಕ್ತಿ ಮತ್ತು ಬಲವನ್ನು ಗಳಿಸುವ ಯುಗ. ವ್ಯಾಯಾಮ ಮಾಡಿ ದೇಹ ಮತ್ತು ಮನಸ್ಸಿನ ಶಕ್ತಿಯನ್ನು ಗಳಿಸುವುದು, ಇದು ಪ್ರತಿಯೊಬ್ಬನ ಮೊದಲ ಮತ್ತು ಮುಖ್ಯ ಕರ್ತವ್ಯವಾಗಿದೆ; ಏಕೆಂದರೆ ಅದರಿಂದ ಮುಂದಿನ ಎಲ್ಲಾ ಕರ್ತವ್ಯಗಳನ್ನು ಪೂರೈಸುವ ಪ್ರೇರಣೆ ಮತ್ತು ಬಲ ಸಿಗುತ್ತದೆ.’

(ಆಧಾರ : ಮಾಸಿಕ ‘ವ್ಯಾಯಾಮ’, ಶಂ. ಧೋ. ವಿದ್ವಾಂಸ, ಸಂಪಾದಕ, ೧೫.೨.೧೯೫೭)