
ಗುಜರಾತ್‌ನಲ್ಲಿ ಬೆಳಕಿಗೆ ಬಂದ ಆಘಾತಕಾರಿ ಪ್ರಕರಣದಿಂದಾಗಿ ಅನೇಕರ ಮನಸ್ಸಿನಲ್ಲಿ ವೈದ್ಯಕೀಯ ಕ್ಷೇತ್ರದ ಬಗ್ಗೆ ಭಯ ಉತ್ಪನ್ನವಾಗಿದೆ. ಗುಜರಾತ್‌ನ ‘ಜೆಸಿಸಿ ಹಾರ್ಟ್ ಇನ್‌ಸ್ಟಿಟ್ಯೂಟ್’ ಬರೋಬ್ಬರಿ ೮೦೦ ಆರೋಗ್ಯವಂತ ವ್ಯಕ್ತಿಗಳ ಹೃದಯ ಶಸ್ತ್ರಚಿಕಿತ್ಸೆ ನಡೆಸಿ, ಅವರ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳದಲ್ಲಿ ‘ಸ್ಟಂಟ್’ ಅಂದರೆ ಕೊಳವೆಯನ್ನು ಅಳವಡಿಸಿದೆ. ಇದನ್ನು ಮಾಡಲು ಕಾರಣವೆಂದರೆ, ‘ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ’ಯ ಅಡಿಯಲ್ಲಿ ಸಿಗುವ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲು! ಈ ಆಸ್ಪತ್ರೆಯು ಈ ರೀತಿ ಆರೋಗ್ಯವಂತ ವ್ಯಕ್ತಿಗಳ ಶರೀರದೊಂದಿಗೆ ಚೆಲ್ಲಾಟವಾಡಿ ಅವರನ್ನು ದುರ್ಬಲಗೊಳಿಸಿತು ಮತ್ತು ತಮ್ಮ ಜೇಬುಗಳನ್ನು ತುಂಬಿಸಿಕೊಂಡಿತು. ಆರೋಗ್ಯ ಇಲಾಖೆಯು ಈ ಪ್ರಕರಣದ ಆಳಕ್ಕೆ ಇಳಿದಾಗ ಮತ್ತು ಕೋಟ್ಯಂತರ ರೂಪಾಯಿಗಳ ಬಿಲ್‌ಗಳು ಬರಲು ಪ್ರಾರಂಭಿಸಿದಾಗ ಈ ಪ್ರಕರಣ ಬಯಲಿಗೆ ಬಂತು.

ದೇವರಂತಹ ವೈದ್ಯರು !
ಸಮಾಜದಲ್ಲಿ ವೈದ್ಯಕೀಯ ವೃತ್ತಿಗೆ ಗೌರವದ ಸ್ಥಾನವಿದೆ. ವ್ಯಕ್ತಿಯ ಜೀವನದೊಂದಿಗೆ ನೇರ ಸಂಬಂಧ ಹೊಂದಿರುವ ಸಮಾಜದ ಪ್ರತಿಷ್ಠಿತ ಘಟಕ ಎಂದರೆ ಅದು ವೈದ್ಯರು. ವೈದ್ಯಕೀಯ ಪದವಿ ಪಡೆಯಲು ಅನೇಕರು ಕಠಿಣ ಪ್ರಯತ್ನ ಮಾಡುತ್ತಾರೆ, ಅವರ ಪಾಲಕರು ಕಷ್ಟಪಟ್ಟು ಹಣ ಹೊಂದಿಸುತ್ತಾರೆ. ವೈದ್ಯಕೀಯ ಶಿಕ್ಷಣದ ಶುಲ್ಕ ಈಗ ಕೋಟ್ಯಂತರ ರೂಪಾಯಿಗಳಷ್ಟಿದೆ. ವ್ಯಕ್ತಿಯು ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ, ಅವರ ಮೇಲೆ ಸರಿಯಾದ ಚಿಕಿತ್ಸೆ ನೀಡಿ, ರೋಗಿಗೆ ಮರುಜೀವ ನೀಡುತ್ತಾರೆ ಎಂಬ ಅನುಭವ ಅನೇಕರಿಗಿದೆ. ಅವರಿಗೆ ವೈದ್ಯರು ದೇವರ ಮನುಷ್ಯನೇ ಆಗಿರುತ್ತಾರೆ. ಹೀಗಿರುವಾಗ, ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ನುಸುಳಿರುವ ಕೆಲವು ಅಕ್ರಮಗಳನ್ನು ನೋಡಿದರೆ, ವೈದ್ಯರೇ ವೈದ್ಯಕೀಯ ವೃತ್ತಿಗೆ ಮಸಿ ಬಳಿಯುತ್ತಿದ್ದಾರೆ ಎಂದು ತೋರುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿನ ಅಕ್ರಮಗಳು

ಇಲ್ಲಿಯವರೆಗೆ ವೈದ್ಯರು ಅನಗತ್ಯ ಪರೀಕ್ಷೆಗಳನ್ನು ಮಾಡಲು ಹೇಳುವುದು, ದುಬಾರಿ ಔಷಧಿಗಳನ್ನು ನೀಡುವುದು, ಹೆಚ್ಚುವರಿ ಶುಲ್ಕ ವಿಧಿಸುವುದು ಮತ್ತು ಅಪರೂಪಕ್ಕೆ ಅನಗತ್ಯ ಶಸ್ತ್ರಚಿಕಿತ್ಸೆ ಮಾಡಲು ಹೇಳುವುದು ಮುಂತಾದ ಸುದ್ದಿಗಳು ಬರುತ್ತಿದ್ದವು. ಆದರೆ ಗುಜರಾತ್‌ನಲ್ಲಿ ಬಯಲಾದ ಘಟನೆಯು ಎಲ್ಲವನ್ನೂ ಮೀರಿದೆ. ಇದರಲ್ಲಿ ಪರೀಕ್ಷೆಗಳನ್ನು ಮಾಡುವವರು, ವರದಿ ನೀಡುವವರು ಹೀಗೆ ಎಷ್ಟೊಂದು ದೊಡ್ಡ ಭ್ರಷ್ಟ ವ್ಯವಸ್ಥೆ ಕೆಲಸ ಮಾಡುತ್ತಿರಬಹುದು. ಇದು ‘ರೋಗಿ ಸೇವೆ’ಯಾಗಿ ಉಳಿಯದೆ ‘ಮೆಡಿಕಲ್ ಇಂಡಸ್ಟ್ರಿ’ ಸ್ವರೂಪವನ್ನು ಪಡೆದುಕೊಂಡಿದೆ. ಬಹುತೇಕ ಕಾಲೇಜುಗಳು ರಾಜಕೀಯ ಕ್ಷೇತ್ರದ ವ್ಯಕ್ತಿಗಳದ್ದೇ ಆಗಿರುತ್ತವೆ ಎಂಬುದು ಕೂಡ ಸತ್ಯ. ಕಾಲೇಜು ನಡೆಸುವವರ ಈ ಮನಸ್ಥಿತಿಯೇ ವಿದ್ಯಾರ್ಥಿಗಳಲ್ಲಿ, ಅಂದರೆ ಭಾವಿ ವೈದ್ಯರಲ್ಲಿ ಇಳಿಯುತ್ತದೆ ಮತ್ತು ಯಾವಾಗ ಶಿಕ್ಷಣ ಮುಗಿಸಿ ಹಣ ಗಳಿಕೆಯ ಹಿಂದೆ ಬೀಳುತ್ತೇವೆ ಎಂಬ ಆಲೋಚನೆ ಮೂಡುತ್ತದೆ.
ಮಹಾರಾಷ್ಟ್ರದಲ್ಲಿ ಕೆಲವು ದಿನಗಳ ಹಿಂದೆ ‘ಕಿಡ್ನಿ ರಾಕೆಟ್’ ಬಯಲಿಗೆ ಬಂತು, ಅಂದರೆ ಕೆಲವು ಗ್ರಾಮೀಣ ಭಾಗದ ರೋಗಿಗಳ ಕಿಡ್ನಿಗಳನ್ನು ಅವರಿಗೆ ತಿಳಿಯದಂತೆ ತೆಗೆದು, ಯಾರಿಗೆ ಅವಶ್ಯಕತೆ ಇದೆಯೋ ಆ ರೋಗಿಗಳಿಗೆ ಅಳವಡಿಸಲಾಗಿತ್ತು. ಠಾಣೆಯಲ್ಲಿ ಕಳೆದ ೩೦ಕ್ಕೂ ಹೆಚ್ಚು ವರ್ಷಗಳಿಂದ ಒಬ್ಬ ನಕಲಿ ವೈದ್ಯ ವೈದ್ಯಕೀಯ ವ್ಯವಹಾರ ನಡೆಸುತ್ತಿದ್ದನು. ಮಹಿಳೆಯರಿಗೆ ನೈಸರ್ಗಿಕ ಹೆರಿಗೆ ಆಗುವ ಬದಲಿಗೆ ಶಸ್ತ್ರಚಿಕಿತ್ಸೆ ಮಾಡಲು ಹೇಳುವುದು, ಗರ್ಭಕೋಶದ ಸಣ್ಣ ಕಾಯಿಲೆ ಇದ್ದರೂ ಗರ್ಭಕೋಶ ತೆಗೆಯಲು ಹೇಳುವುದು, ನಿರ್ದಿಷ್ಟ ಸ್ಥಳದಲ್ಲಿ ಪರೀಕ್ಷೆಗಳನ್ನು ಮಾಡಲು, ನಿರ್ದಿಷ್ಟ ಔಷಧಿಗಳನ್ನು ತೆಗೆದುಕೊಳ್ಳಲು ಹೇಳುವುದು, ಬೇಕಾಬಿಟ್ಟಿ ಯಾಂಟಿಬಯೋಟಿಕ್ ನೀಡುವುದು ಮುಂತಾದ ವಿವಿಧ ಸ್ವರೂಪದ ಅಕ್ರಮಗಳು ನಡೆಯುತ್ತಿವೆ.

ಇಂತಹ ಅನೇಕ ಅಕ್ರಮಗಳನ್ನು ತಡೆಯಲು ರಾಜ್ಯ ಅಥವಾ ಕೇಂದ್ರ ಮಟ್ಟದ ಉಪಾಯವಾಗಿ ತಜ್ಞ ವೈದ್ಯರ ರಾಜ್ಯವಾರು ಅಥವಾ ಜಿಲ್ಲಾವಾರು ಸಮಿತಿಗಳನ್ನು ನೇಮಿಸಿ, ಅಲ್ಲಿ ಹಠಾತ್ ಭೇಟಿ ನೀಡಿ ಪರಿಶೀಲಿಸುವುದು ಅವಶ್ಯಕವಾಗಿದೆ. ಪ್ರಾಚೀನ ಭಾರತದ ವೈದ್ಯರು ರೋಗಿ ಗುಣಮುಖನಾಗಲು ಮಾತ್ರವಲ್ಲ, ಆತ ಕಾಯಿಲೆ ಬೀಳಲೇಬಾರದು ಎಂಬ ಉದ್ದೇಶದಿಂದ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರಿಗೆ ಸಮಾಜದಲ್ಲಿ ತುಂಬಾ ಗೌರವವಿತ್ತು. ಈಗ ವೈದ್ಯರ ಮೇಲಿನ ಜನತೆಯ ವಿಶ್ವಾಸ ಕಡಿಮೆಯಾಗುತ್ತಿದೆ. ಅನೇಕ ಕಡೆಗಳಲ್ಲಿ ಚಿಕಿತ್ಸೆ ಸರಿಯಾಗಿ ಆಗದ ಕಾರಣ ತಪ್ಪು ತಿಳುವಳಿಕೆಯಿಂದ ವೈದ್ಯರ ಮೇಲಿನ ಹಲ್ಲೆಗಳು ಹೆಚ್ಚಾಗಿವೆ. ದೆಹಲಿಯ ಕೆಂಪು ಕೋಟೆಯ ಹತ್ತಿರ ನಡೆದ ಸ್ಫೋಟದಲ್ಲಿ ಮತಾಂಧ ವೈದ್ಯರು ಎಲ್ಲ ಸೀಮಾರೇಖೆಗಳನ್ನು ಮೀರಿ ಜನರಿಗೆ ಪ್ರಾಣ ತೆಗೆದರು. ಆದ್ದರಿಂದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನೀಡುವಾಗ ಕೇವಲ ಪರೀಕ್ಷೆಯ ಅಂಕಗಳನ್ನಷ್ಟೇ ಅಲ್ಲ, ನೈತಿಕತೆ ಮತ್ತು ನಡವಳಿಕೆಯ ಗುಣಗಳನ್ನೂ ನೋಡಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಮತ್ತು ಈ ವಾಸ್ತವದಿಂದ ಯಾರೂ ಮುಖ ತಿರುಗಿಸಲು ಸಾಧ್ಯವಿಲ್ಲ! : Madras High Court
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 5 ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಮಾರಾಟ: ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಖರೀದಿ!