೩೦ ವರ್ಷಗಳಲ್ಲಿ ೩,೦೦೦ ಕೋಟಿ ರೂಪಾಯಿ ಲಂಚ ಪಡೆದ ಚೀನಾದ ಮಾಜಿ ಅಧಿಕಾರಿಗೆ ಗಲ್ಲು ಶಿಕ್ಷೆ

ಬೀಜಿಂಗ್ (ಚೀನಾ) – ಚೀನಾದ ನಾನ್ ಜಿಂಗ್ ಆರ್ಥಿಕ ಅಭಿವೃದ್ಧಿ ವಲಯದ ಮಾಜಿ ಹಿರಿಯ ಅಧಿಕಾರಿ ಯಾಂಗ್ ಯೋಲಿನ್ ಸುಮಾರು ೩,೦೦೦ ಕೋಟಿ ರೂಪಾಯಿಗಳ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಯಾಂಗ್ ಯೋಲಿನ್ ಅವರನ್ನು ಕೇವಲ ಲಂಚಕೋರತನ ಮಾತ್ರವಲ್ಲದೆ, ಸಾರ್ವಜನಿಕ ನಿಧಿಯ ದುರುಪಯೋಗ, ಅಧಿಕಾರದ ದುರ್ಬಳಕೆ, ಆರ್ಥಿಕ ಅಕ್ರಮಗಳು ಮತ್ತು ಇತರ ಆರ್ಥಿಕ ಅಪರಾಧಗಳಲ್ಲೂ ದೋಷಿ ಎಂದು ಘೋಷಿಸಿದೆ. ಹಾಗೆಯೇ ಅವರ ಎಲ್ಲಾ ವೈಯಕ್ತಿಕ ಆಸ್ತಿಯನ್ನು ಜಪ್ತಿ ಮಾಡಲು ಮತ್ತು ಅಕ್ರಮವಾಗಿ ಗಳಿಸಿದ ಸಂಪೂರ್ಣ ಹಣವನ್ನು ವಸೂಲಿ ಮಾಡುವಂತೆ ಆದೇಶಿಸಿದೆ.

​ಯಾಂಗ್ ಯೋಲಿನ್ ಅವರು ೧೯೯೩ ರಿಂದ ೨೦೨೩ ರವರೆಗಿನ ೩೦ ವರ್ಷಗಳ ಅವಧಿಯಲ್ಲಿ ವಿವಿಧ ಸರಕಾರಿ ಹುದ್ದೆಗಳಲ್ಲಿದ್ದಾಗ ಉದ್ಯಮಿಗಳು ಮತ್ತು ವ್ಯಾಪಾರಿಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಮತ್ತು ಆಸ್ತಿಯನ್ನು ಸ್ವೀಕರಿಸಿದ್ದರು. ಬದಲಿಗೆ ಅವರು ಯೋಜನೆಗಳಿಗೆ ಅನುಮೋದನೆ, ಭೂಮಿಯ ಹಂಚಿಕೆ, ವಾಣಿಜ್ಯ ವ್ಯವಹಾರಗಳು ಮತ್ತು ಇತರ ಸರಕಾರಿ ಕೆಲಸಗಳಲ್ಲಿ ಅಕ್ರಮವಾಗಿ ಹಣಗಳಿಸಿದ್ದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಲಂಚಕೋರರಿಗೆ ಇಂತಹ ಶಿಕ್ಷೆ ಯಾವಾಗ?