‘ಆಪರೇಷನ್ ಸಿಂದೂರ್’ ಒಂದು ವಿಶ್ವಾಸಾರ್ಹ ವಾದ್ಯಮೃದಂಗದಂತೆ ! – ಸೇನಾ ಮುಖ್ಯಸ್ಥರು

ನವ ದೆಹಲಿ – ‘ಆಪರೇಷನ್ ಸಿಂದೂರ್’ ಒಂದು ವಿಶ್ವಾಸಾರ್ಹವಾದ ‘ಆರ್ಕೆಸ್ಟ್ರಾ’ದಂತೆ (ವಾದ್ಯವೃಂದದಂತೆ) ಇತ್ತು. ಪ್ರತಿಯೊಬ್ಬ ಸಂಗೀತಗಾರನೂ ಒಗ್ಗೂಡಿ ಕಾರ್ಯನಿರ್ವಹಿಸುವ ಪಾತ್ರವನ್ನು ನಿರ್ವಹಿಸಿದನು. ಕೇವಲ 22 ನಿಮಿಷಗಳಲ್ಲಿ ನಾವು 9 ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಿದೆವು. ಪರಿಸ್ಥಿತಿಗಳು ಬದಲಾದಾಗ ಅದನ್ನು ಅರ್ಥಮಾಡಿಕೊಂಡು ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುವುದು ನಮ್ಮ ದೀರ್ಘಕಾಲೀನ ದೂರದೃಷ್ಟಿಯನ್ನು ಪ್ರದರ್ಶಿಸುತ್ತದೆ. ಈ ಪರಿಸ್ಥಿತಿ ಕ್ಷಣಮಾತ್ರದಲ್ಲಿ ನಿರ್ಮಾಣ ಮಾಡಿದ್ದಲ್ಲ, ಬದಲಾಗಿ ಬುದ್ಧಿಮತ್ತೆ, ನಿಖರತೆ ಮತ್ತು ತಂತ್ರಜ್ಞಾನವನ್ನು ಒಂದುಗೂಡಿಸಿ ಕೆಲಸ ಮಾಡುವುದು ಹೇಗೆ ಎಂಬುದರ ಕುರಿತು ವರ್ಷಗಟ್ಟಲೆ ನಡೆಸಿದ ಚಿಂತನೆಯ ಫಲಿತಾಂಶವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿದರು. ಅವರು ‘ನವದೆಹಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ನ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸೇನಾ ಮುಖ್ಯಸ್ಥರು ಮುಂದೆ ಮಾತನಾಡಿ,

1. ಶಾಂತಿ ಮತ್ತು ಯುದ್ಧಗಳ ನಡುವಿನ ಗಡಿಯನ್ನು ಅಸ್ಪಷ್ಟಗೊಳಿಸುವ 55 ಕ್ಕೂ ಹೆಚ್ಚು ಸಂಘರ್ಷಗಳು ನಡೆಯುತ್ತಿದ್ದು, 100 ಕ್ಕೂ ಹೆಚ್ಚು ದೇಶಗಳು ಪ್ರತ್ಯಕ್ಷವಾಗಿ ಅಥವಾ ಗುಪ್ತವಾಗಿ ಇಂತಹ ಯುದ್ಧಗಳಲ್ಲಿ ಭಾಗಿಯಾಗಿವೆ.

2. ಮಾರುಕಟ್ಟೆಗಳೂ ಸಹ ಬದಲಾಗಿವೆ – ರಾಷ್ಟ್ರೀಯತೆ, ನಿರ್ಬಂಧಗಳು ಮತ್ತು ರಕ್ಷಣಾ ನೀತಿಗಳ ನಡುವೆ ಭೂ-ಆರ್ಥಿಕತೆ ಯುದ್ಧದಂತಹ ನೀತಿಗಳು ಅಭಿವೃದ್ಧಿ ಹೊಂದಿವೆ.

3. ನಾವು ಲಕ್ಷಾಂತರ ಜನರ ಜೀವನವನ್ನು ನಿರ್ವಹಿಸುತ್ತೇವೆ. ನಾನು ವೈಯಕ್ತಿಕವಾಗಿ 1 ಕೋಟಿ 30 ಲಕ್ಷ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳ ಸಮುದಾಯವನ್ನು ಮುನ್ನಡೆಸುತ್ತೇನೆ. ಇದು ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟಾಗಿದೆ. ಕಾರ್ಪೊರೇಟ್ (ವೃತ್ತಿಪರ) ಜಗತ್ತು ಕೆಲವೇ ಕೆಲವು ಉದ್ಯೋಗಿಗಳನ್ನು ಮಾತ್ರ ನಿರ್ವಹಿಸುತ್ತದೆ. ನಾವು ಲಕ್ಷಾಂತರ ಜನರ ಜೀವನವನ್ನು ನಿರ್ವಹಿಸುತ್ತೇವೆ, ಒಂದು ಆದೇಶದ ಮೇರೆಗೆ ಗುಂಡು ಹಾರಿಸಲು ಸಿದ್ಧರಾಗಿರುತ್ತೇವೆ.

ಸಂಪಾದಕೀಯ ನಿಲುವು

‘ಆಪರೇಷನ್ ಸಿಂದೂರ್’ನ ಯಶಸ್ಸು ಕಣ್ಸೆಳೆಯುವಂತಹದ್ದಾಗಿದೆ. ಅದನ್ನು ನಾವು ಜಗತ್ತಿನಾದ್ಯಂತ ಹೆಮ್ಮೆಯಿಂದ ಪ್ರದರ್ಶಿಸಬೇಕು. ಆದರೆ, ಪಾಕಿಸ್ತಾನಕ್ಕೆ ಪಾಠ ಕಲಿಸಿದರೂ ಅದರ ಬಾಲ ಡೊಂಕಾಗಿದೆ. ಭವಿಷ್ಯದಲ್ಲಿ ನಿರ್ಣಾಯಕ ಕ್ರಮ ಕೈಗೊಂಡು ‘ನಾವು ಪಾಕಿಸ್ತಾನಕ್ಕೆ ಶಾಶ್ವತವಾಗಿ ಪಾಠ ಕಲಿಸಿದ್ದೇವೆ’ ಎಂಬ ಹೇಳಿಕೆ ನೀಡಿದರೆ ರಾಷ್ಟ್ರಪ್ರೇಮಿಗಳು ಹೆಚ್ಚು ಸಂತೋಷಪಡುತ್ತಾರೆ!