ವಿಜ್ಞಾನದ ತೀವ್ರ ಪ್ರಗತಿಯಿಂದ ಭವಿಷ್ಯದಲ್ಲಿ ಮಾನವನ ಮೆದುಳು ಯುದ್ಧದ ಹೊಸ ರಣರಂಗವಾಗಬಹುದು.

ಯುನೈಟೆಡ್ ಕಿಂಗ್ಡಮ್ ಬ್ರ್ಯಾಡ್ಫೋರ್ಡ್ ವಿಶ್ವವಿದ್ಯಾಲಯದ ಖ್ಯಾತ ವಿಜ್ಞಾನಿಗಳ ಎಚ್ಚರಿಕೆ

ಲಂಡನ್ (ಯುನೈಟೆಡ್ ಕಿಂಗ್ಡಮ್) – ಬ್ರ್ಯಾಡ್ಫೋರ್ಡ್ ವಿಶ್ವವಿದ್ಯಾಲಯದ ಖ್ಯಾತ ಸಂಶೋಧಕರಾದ ಮೈಕಲ್ ಕ್ರೌಲಿ ಮತ್ತು ಮಾಲ್ಕಮ್ ಡ್ಯಾಂಡೋ ಅವರು ತೀಕ್ಷ್ಣವಾದ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ವಿಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಪ್ರಗತಿಯಿಂದಾಗಿ, ಭವಿಷ್ಯದಲ್ಲಿ ಮಾನವನ ಮೆದುಳು ಯುದ್ಧದ ಹೊಸ ಮೈದಾನವಾಗಬಹುದು. ಸಂಶೋಧಕರ ಸ್ಪಷ್ಟ ಅಭಿಪ್ರಾಯವೇನೆಂದರೆ, ಈ ವಿಷಯದಲ್ಲಿ ಜಗತ್ತು ಈಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಯುದ್ಧಗಳನ್ನು ಬಂದೂಕುಗಳಿಂದಲ್ಲ, ಮಾನವ ಮೆದುಳನ್ನು ಗುರಿಯಾಗಿಸುವ ಹೊಸ ತಂತ್ರಜ್ಞಾನಗಳಿಂದ ಹೋರಾಡಲಾಗುವುದು.

1. ಕ್ರೌಲಿ ಮತ್ತು ಡ್ಯಾಂಡೋ, ಈ ಇಬ್ಬರೂ ತಜ್ಞರು ಇದೇ ವಾರ ನೆದರ್ಲ್ಯಾಂಡ್ ದಿ ಹೇಗ್ ನಲ್ಲಿ ‘ರಾಸಾಯನಿಕ ಶಸ್ತ್ರಾಸ್ತ್ರಗಳು’ ಎಂಬ ವಿಷಯದ ಮೇಲೆ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

2. ಮಾನವನ ಮೆದುಳಿನ ಮೇಲೆ ಪರಿಣಾಮ ಬೀರುವ ತಂತ್ರಜ್ಞಾನವು ಎಷ್ಟೊಂದು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆಯೆಂದರೆ, ಈ ತಂತ್ರಜ್ಞಾನವನ್ನು ಸರಿಯಾದ ಸಮಯಕ್ಕೆ ತಡೆಯದಿದ್ದರೆ ದೊಡ್ಡ ಅಪಾಯಗಳು ಸಂಭವಿಸಬಹುದೆಂದು ಈ ಪರಿಷತ್ತಿನಲ್ಲಿ ಅವರು ಮನವರಿಕೆ ಮಾಡಿಕೊಡಲಿದ್ದಾರೆ.

3. ಕ್ರೌಲಿಯವರ ಅಭಿಪ್ರಾಯದಂತೆ, ಈ ವಿಷಯ ಕೇವಲ ಕಲ್ಪನೆಯಂತೆ ಕಂಡರೂ, ಅದರಿಂದಾಗುವ ಅಪಾಯವು ಖಂಡಿತವಾಗಿಯೂ ನಿಜವಾಗಿದೆ.

4. ಈ ಇಬ್ಬರೂ ತಜ್ಞರು ಹೇಳುವ ಪ್ರಕಾರ, ಭವಿಷ್ಯದಲ್ಲಿ ಯುದ್ಧಗಳು ಶಸ್ತ್ರಾಸ್ತ್ರಗಳಿಂದ ನಡೆಯದೆ ನೇರವಾಗಿ ಮೆದುಳಿನ ಮೇಲೆ ನಡೆಯುತ್ತವೆ. ಭವಿಷ್ಯದಲ್ಲಿ ಒಂದೇ ಒಂದು ಗುಂಡು ಹಾರಿಸದೆ ಶತ್ರುವು ನಿಮ್ಮ ಆಲೋಚನಾ ಸಾಮರ್ಥ್ಯ, ನೆನಪು, ಗ್ರಹಣ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ತನ್ನ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಲು ಸಾಧ್ಯವಾಗುತ್ತದೆ. ಇದು ಕೇಳಲು ಯಾವುದೋ ಚಲನಚಿತ್ರದ ಕಥೆಯಂತೆ ಅನಿಸಿದರೂ, ಅಂತಹ ಭಯಾನಕ ಭವಿಷ್ಯ ಹೆಚ್ಚು ದೂರವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.