
ಶ್ರೀಗಂಗಾನಗರ (ರಾಜಸ್ಥಾನ) – ದೆಹಲಿ-ಅಮೃತಸರ ಹೆದ್ದಾರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರಿಂದ ಚೀನೀ ನಿರ್ಮಿತ ಗ್ರೆನೇಡ್‌ಗಳು, ೫ ಪಿಸ್ತೂಲ್‌ಗಳು ಮತ್ತು ೫೦ಕ್ಕೂ ಹೆಚ್ಚು ಜೀವಂತ ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿಸಿದ ಖಲಿಸ್ತಾನಿ ಭಯೋತ್ಪಾದಕರಲ್ಲಿ ರಾಮಲಾಲ್ ಎಂಬಾತ ರಾಜಸ್ಥಾನದೊಂದೊಗೆ ನಂಟಿರುವುದು ಬಯಲಾಗಿದೆ. ಅವನು ಶ್ರೀಗಂಗಾಸಾಗರದ ದೇವಸ್ಥಾನವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು.
ಲುಧಿಯಾನ ಪೊಲೀಸ್ ಕಮಿಷನರ್ ಸ್ವಪ್ನ ಶರ್ಮಾ ಮಾತನಾಡಿ, ಬಂಧಿಸಲಾಗಿರುವ ಇಬ್ಬರೂ ಭಯೋತ್ಪಾದಕರು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ (ಏಜೆಂಟ್) ಜಸ್ವೀರ್ ಅಲಿಯಾಸ್ ಚೌಧರಿ ಜೊತೆ ಸಂಪರ್ಕದಲ್ಲಿದ್ದರು. ರಾಜ್ಯದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಸರಕಾರಿ ಕಚೇರಿಗಳು ಮತ್ತು ಸೂಕ್ಷ್ಮ ಕಟ್ಟಡಗಳ ಮೇಲೆ ಗ್ರೆನೇಡ್‌ಗಳನ್ನು (ಕೈಬಾಂಬ್) ಎಸೆದು ದೊಡ್ಡ ದಾಳಿ ನಡೆಸುವುದು ಅವರ ಸಂಚಾಗಿತ್ತು. ಬಂಧಿಸಲಾಗಿರುವ ಇಬ್ಬರೂ ಭಯೋತ್ಪಾದಕರು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆ, ಎಂದು ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!